ಕಳೆದುಹೋದ ಪರ್ಸ್ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ,


 


ಕಳೆದುಹೋದ ಪರ್ಸ್ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ,


ಕೊಪ್ಪ, ಆ. 6: ಪ್ರಾಮಾಣಿಕತೆ ಮತ್ತು ಮಾನವೀಯತೆ ಇಂದಿಗೂ ಜೀವಂತವಾಗಿವೆ ಎಂಬುದಕ್ಕೆ ಕೊಪ್ಪ ಪಟ್ಟಣದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆಯಾಗಿದೆ.



ಇಂದು ಮಧ್ಯಾಹ್ನ ಸುಮಾರು 1:30 ಗಂಟೆ ವೇಳೆಗೆ, ಸೋಮಲಾಪುರ ಗ್ರಾಮದ ಕುಂಬ್ರಿ ಹುಬ್ಬಿನ ನಿವಾಸಿ ನಾಗೇಶ್ ಉರಾಳ (ಕೃಷ್ಣ ಉರಾಳ ಅವರ ಪುತ್ರ) ಅವರು ತಮ್ಮ ಪರ್ಸ್ ಅನ್ನು ಕೊಪ್ಪ ಪಟ್ಟಣದಲ್ಲಿ ಕಳೆದುಕೊಂಡಿದ್ದರು. ಪರ್ಸ್‌ನಲ್ಲಿ ನಗದು ಹಣ ಹಾಗೂ ಕೆಲವು ಪ್ರಮುಖ ದಾಖಲಾತಿಗಳಿದ್ದು, ಎಷ್ಟೇ ಹುಡುಕಿದರೂ ಅದು ಸಿಕ್ಕಿರಲಿಲ್ಲ.


ಈ ನಡುವೆ, ಸದರಿ ಪರ್ಸ್ ಹಾಜೀರ ಕೊಂ ಲತೀಫ್, ಸಣ್ಣಕೆರೆ, ಕೊಪ್ಪ ಅವರಿಗೆ ದೊರೆತಿದ್ದು, ಅವರು ಯಾವುದೇ ವಿಳಂಬವಿಲ್ಲದೆ ಅದನ್ನು ಕೊಪ್ಪ ಪೊಲೀಸ್ ಠಾಣೆಗೆ ತಂದು ಒಪ್ಪಿಸಿ ತಮ್ಮ ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಮೆರೆದಿದ್ದಾರೆ.


ಹಾಜೀರ ಅವರ ಈ ಸತ್ಯನಿಷ್ಠ ಕಾರ್ಯವನ್ನು ಕೊಪ್ಪ ಪೊಲೀಸ್ ಇಲಾಖೆ ಶ್ಲಾಘಿಸಿದ್ದು, ಸಮಾಜದಲ್ಲಿ ಇಂತಹ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರಿಕರೂ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದೆ.



ಪ್ರಾಮಾಣಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಇಂತಹ ಕಾರ್ಯಗಳು ಸಮಾಜಕ್ಕೆ ಉತ್ತಮ ಮಾದರಿಯಾಗಿದ್ದು, ಸಾರ್ವಜನಿಕರಿಂದಲೂ ಹಾಜೀರ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Comments

Popular posts from this blog

ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ,

ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚು

ಕೊಪ್ಪ,ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,