ಕೊಪ್ಪ ತಾಲ್ಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಡಿ ₹299.50 ಕೋಟಿ ವೆಚ್ಚ
ಕೊಪ್ಪ ತಾಲ್ಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಡಿ ₹299.50 ಕೋಟಿ ವೆಚ್ಚ
ಕೊಪ್ಪ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಕಳೆದ ಮೂರು ವರ್ಷಗಳಲ್ಲಿ ಕೊಪ್ಪ ತಾಲ್ಲೂಕಿನ ಜನರಿಗೆ ವಿವಿಧ ಯೋಜನೆಗಳಡಿ ಒಟ್ಟು ₹299 ಕೋಟಿ 50 ಲಕ್ಷ 90 ಸಾವಿರದ 425 ರೂ. ವೆಚ್ಚವಾಗಿದೆ ಎಂದು ಕೊಪ್ಪ ತಾಲ್ಲೂಕಿನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿ ತೋಟ ರತ್ನಾಕರ್ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ 18,740 ಫಲಾನುಭವಿಗಳಿಗೆ ಪ್ರತಿ ತಿಂಗಳು ₹2,000ರಂತೆ ಹಣ ಜಮೆಯಾಗಿದ್ದು, ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ₹110 ಕೋಟಿ 64 ಲಕ್ಷ 92 ಸಾವಿರ ರೂ. ವೆಚ್ಚವಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ 22,643 ಫಲಾನುಭವಿಗಳು ಪ್ರಯೋಜನ ಪಡೆದಿದ್ದು, ಮೂರು ವರ್ಷಗಳಲ್ಲಿ ₹32 ಕೋಟಿ 31 ಲಕ್ಷ 74 ಸಾವಿರ ರೂ. ಮೊತ್ತದ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ 15,622 ಕಾರ್ಡ್ದಾರರ 53,417 ಫಲಾನುಭವಿಗಳಿಗೆ ಅಕ್ಕಿಯ ಬದಲಾಗಿ ₹14 ಕೋಟಿ 22 ಲಕ್ಷ 18 ಸಾವಿರದ 430 ರೂ. ಹಣ ನೀಡಲಾಗಿದೆ. ಇದರ ಜೊತೆಗೆ 46,121.75 ಕ್ವಿಂಟಾಲ್ ಅಕ್ಕಿ, ಅಂದಾಜು ₹10 ಕೋಟಿ 76 ಲಕ್ಷ 44 ಸಾವಿರದ 473 ರೂ. ಮೌಲ್ಯದ ಅಕ್ಕಿಯನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಚಿಕ್ಕಮಗಳೂರು, ಎನ್.ಆರ್.ಪುರ, ಶೃಂಗೇರಿ ಹಾಗೂ ಕೊಪ್ಪ ವ್ಯಾಪ್ತಿಯಲ್ಲಿ 3 ಕೋಟಿ 6 ಲಕ್ಷ 68 ಸಾವಿರದ 146 ಪ್ರಯಾಣಿಕರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದು, ಇದಕ್ಕಾಗಿ ₹130 ಕೋಟಿ 33 ಲಕ್ಷ 6 ಸಾವಿರದ 522 ರೂ. ವೆಚ್ಚವಾಗಿದೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯಡಿ ಇದುವರೆಗೆ 454 ಫಲಾನುಭವಿಗಳಿಗೆ ₹1 ಕೋಟಿ 22 ಲಕ್ಷ 55 ಸಾವಿರ ರೂ. ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಮೂಲಕ ಕೊಪ್ಪ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಇಲ್ಲಿಯವರೆಗೆ ಪಂಚ ಗ್ಯಾರಂಟಿ ಯೋಜನೆಗಳಡಿ ಒಟ್ಟು ₹299 ಕೋಟಿ 50 ಲಕ್ಷ 90 ಸಾವಿರದ 425 ರೂ. ವೆಚ್ಚವಾಗಿದ್ದು, ಯೋಜನೆಗಳು ಜನರಿಗೆ ಆರ್ಥಿಕ ನೆರವು ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪ ತಾಲ್ಲೂಕಿನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿ ತೋಟ ರತ್ನಾಕರ್, ಸದಸ್ಯರು ಹಾಗೂ ಇ.ಒ. ನವೀನ್ ಕುಮಾರ್ ಉಪಸ್ಥಿತರಿದ್ದರು.




Comments
Post a Comment