ಕೊಪ್ಪ: ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆಗೆ ಸಿದ್ಧತೆ,


 ಕೊಪ್ಪ: ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆಗೆ ಸಿದ್ಧತೆ,

ಕೊಪ್ಪ ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನಾ ಪ್ರಕ್ರಿಯೆ ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ತಿಳಿಸಿದ್ದಾರೆ.



ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮರುಪರಿಶೀಲನೆಗಾಗಿ ಯಾವುದೇ ಕಾರಣಕ್ಕೂ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮರುಪರಿಶೀಲನಾ ಕಾರ್ಯಕ್ಕಾಗಿ ತರಬೇತಿ ಪಡೆದ ಅಂಗನವಾಡಿ ಶಿಕ್ಷಕರು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯರು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು, ಗಣತಿದಾರರು ಮನೆಗೆ ಭೇಟಿ ನೀಡಿದಾಗ ಸೂಕ್ತ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಮನವಿ ಮಾಡಲಾಗಿದೆ.



ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಮಾಹಿತಿ ಸಂಗ್ರಹಿಸುವ ಮೂಲಕ ಮರುಪರಿಶೀಲನಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಸಹಕರಿಸುವಂತೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮನವಿ ಮಾಡಿದೆ.

— ಓಣಿತೋಟ ರತ್ನಾಕರ್, ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಕೊಪ್ಪ ತಾಲ್ಲೂಕು.



ಹೊಸ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ,

1. ವಾಸದ ಮನೆ ಮ್ಯಾಪಿಂಗ್

2. ಪಾಸ್‌ಬುಕ್

3. ಮೊಬೈಲ್ ಸಂಖ್ಯೆ

4. ಆಧಾರ್ ಪ್ರತಿ

5. ರೇಷನ್ ಕಾರ್ಡ್

6. ಹಣ ಜಮೆಯಾಗುವ ಬ್ಯಾಂಕ್ ಖಾತೆ ವಿವರ

7. ಮತದಾರರ ಗುರುತಿನ ಚೀಟಿ

8. ಬಯೋಮೆಟ್ರಿಕ್

(ಗಣತಿದಾರರು ಮೊಬೈಲ್ ಆಪ್ ಮೂಲಕ ಸ್ಥಳದಲ್ಲಿಯೇ ಪಡೆಯುತ್ತಾರೆ)

Comments

Popular posts from this blog

ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ,

ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚು

ಕೊಪ್ಪ,ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,