ವಿಷಪೂರಿತ ಬಾವಿಗೆ ಬಿದ್ದ ಹಸುವಿನ ಸಾಹಸಮಯ ರಕ್ಷಣೆ,
ಕೊಪ್ಪ: ಸುಮಾರು 25 ಅಡಿ ಆಳದ ವಿಷಪೂರಿತ ಬಾವಿಗೆ ಬಿದ್ದಿದ್ದ ಹಸುವನ್ನು ಕೊಪ್ಪ ಅಗ್ನಿಶಾಮಕ ಸಿಬ್ಬಂದಿ ಸಾಹಸಿಕ ಕಾರ್ಯಾಚರಣೆ ನಡೆಸಿ ಜೀವಂತವಾಗಿ ರಕ್ಷಿಸಿದ್ದಾರೆ.
ಜಾಹೀರಾತು.ಶಾಂತಿಗ್ರಾಮ–ಹರಿಹರಪುರದಲ್ಲಿ ಘಟನೆ ನಡೆದಿದ್ದು, ಮಾಹಿತಿ ದೊರೆತ ತಕ್ಷಣ ಕೊಪ್ಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಪಾಯಕಾರಿ ಪರಿಸ್ಥಿತಿಯ ನಡುವೆಯೂ B.A. ಸೆಟ್ ಧರಿಸಿ ಬಾವಿಗೆ ಇಳಿದ ಸಿಬ್ಬಂದಿ, ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಜಾಹೀರಾತು.AFSTO ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಸುಂದರ ಬಿ., ರಾಜು, ರಾಜೀವ್, ವಿಶ್ವನಾಥ್, ಲಿಂಗರಾಜು, ಗುರುನಾಥ್, ಮಲ್ಲೇಶ್ ಹಾಗೂ ಪ್ರಸಾದ್ ಪಾಲ್ಗೊಂಡಿದ್ದರು.
ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಮೂಕ ಪ್ರಾಣಿಯೊಂದು ಬದುಕುಳಿದಿದ್ದು, ಸಾರ್ವಜನಿಕರಿಂದ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಜಾಹೀರಾತು.





Comments
Post a Comment