ಕೊಪ್ಪದಲ್ಲಿ SIR ಆಕ್ಷೇಪಣೆ ವಿಚಾರಕ್ಕೆ ಹೊಸ ಬೆಳವಣಿಗೆ,


 ಕೊಪ್ಪದಲ್ಲಿ SIR ಆಕ್ಷೇಪಣೆ ವಿಚಾರಕ್ಕೆ ಹೊಸ ಬೆಳವಣಿಗೆ,


ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ SIR ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.


ಕೊಪ್ಪ ತಾಲೂಕಿನ ವಿವಿಧ ಭಾಗಗಳಲ್ಲಿ ಒಟ್ಟು 243 ಮತದಾರರ ವಿರುದ್ಧ Form-7 ಮೂಲಕ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಮುಸ್ಲಿಂ ಸಂಯುಕ್ತ ಜಮಾಅತ್ ಕೊಪ್ಪ ತಿಳಿಸಿದೆ. ಈ ಪೈಕಿ 218 ಮುಸ್ಲಿಂ ಹಾಗೂ 25 ಕ್ರಿಶ್ಚಿಯನ್ ಮತದಾರರು ಇದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.



ಆಕ್ಷೇಪಣೆಗೆ ಒಳಗಾದ ಮತದಾರರನ್ನು ಒಗ್ಗೂಡಿಸಿ, ಸಂಬಂಧಪಟ್ಟ ತಹಶೀಲ್ದಾರರು ಹಾಗೂ ಚುನಾವಣಾ ಅಧಿಕಾರಿಗಳಿಗೆ ದಾಖಲೆಗಳೊಂದಿಗೆ ಆಕ್ಷೇಪಣಾ ಅರ್ಜಿಗಳಿಗೆ ಉತ್ತರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಜಮಾಅತ್ ತಿಳಿಸಿದೆ.


ಈ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ಬೆಳಗ್ಗೆ 10 ಗಂಟೆಗೆ ಆಕ್ಷೇಪಣೆಗೆ ಒಳಗಾದ ಎಲ್ಲಾ ಮತದಾರರು ಹಾಜರಾಗುವಂತೆ ಮನವಿ ಮಾಡಲಾಗಿದೆ.



ಮತದಾರರು ಈ ಹಿಂದೆ BLO ನೀಡಿರುವ SIR ಫಾರಂನ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ವೋಟರ್ ID ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಎಂದು ಸೂಚಿಸಲಾಗಿದೆ.


ಆಕ್ಷೇಪಣೆಗೆ ಒಳಗಾದ ಪ್ರತಿಯೊಬ್ಬ ಮತದಾರರ ಮತದಾನದ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಸ್ಲಿಂ ಸಂಯುಕ್ತ ಜಮಾಅತ್ ಕೊಪ್ಪ ಅಧ್ಯಕ್ಷ ಶಫಿ ಅಹಮದ್ ತಿಳಿಸಿದ್ದಾರೆ.



ಇದೀಗ, ದಾಖಲೆಗಳೊಂದಿಗೆ ಸಲ್ಲಿಕೆಯಾಗಲಿರುವ ಉತ್ತರಗಳ ಬಳಿಕ ಈ ಆಕ್ಷೇಪಣೆಗಳ ಕುರಿತು ಚುನಾವಣಾ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ,



Comments

Popular posts from this blog

ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ,

ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚು

ಕೊಪ್ಪ,ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,