Posts

K C F,ಕರ್ನಾಟಕ ಕಲ್ಬರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ವತಿಯಿಂದ ಮಿಲಾದ್ ಕಾನ್ಫರೆನ್ಸ್2023

Image
  ಕರ್ನಾಟಕ ಕಲ್ಬರಲ್ ಫೌಂಡೇಶನ್  ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ ಜಗತ್ತಿಗೆ ಕರುಣೆಯ ಪ್ರವಾದಿ  ﷺ  ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಸರೆನ್ಸ್ -2023 ಕಾರ್ಯಕ್ರಮ ಅಬ್ಬಾಸಿಯದ ಇಂಡಿಯನ್ ಸೆಂಟ್ರಲ್ ಸ್ಕೂಲ್ ನಲ್ಲಿ ದಿನಾಂಕ 22/09/2023 ರಂದು ಬಹಳ ವಿಜೃಂಭಣೆ ಯಿಂದ ನಡೆಯಿತು. KCF ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಹುಸೈನ್ ಎರ್ಮಾಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಬಹು. ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಹಬೀಬ್ ಅಲ್ ಬುಖಾರಿ ತಂಗಳ್ ರವರ ದುಆ ದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಹಮೀದ್ ಸಹದಿ ಝುಹ್ರಿ,ಬಾದುಶ ಸಖಾಫಿ ಹಾಗೂ ಶಫೀಕ್ ಅಹ್ಸನಿ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನೆರೆವೇರಿತು. ಕಾರ್ಯಕ್ರಮ ದಲ್ಲಿ ಕೆಸಿಎಫ್ ಸಂಘಟನ ಅಧ್ಯಕ್ಷ ಉಮರ್ ಝುಹ್ರಿ  ಅವರನ್ನು  ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಅದೇ ರೀತಿ  TVS ಗ್ರೂಫ್ ಮಾಲೀಕ ಡಾ|ಹೈದರ್ ಹಾಜಿ ಹಾಗೂ ಇಂಜಿನಿಯರ್ ಹಮೀದ್ ಕುಳಿಯಾರ್ ರವರನ್ನು ನಮ್ಮ ಸಂಘಟನೆಯ ಹಿತೈಷಿಗಳು ಸಹಾಯಕರು ಎಂಬುದನ್ನು ಗುರುತಿಸಿ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. .. KCF ಕುವೈತ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಜನಾಬ್, ಯಾಕೂಬ್ ಕಾರ್ಕಳ ಬಂದ ಅತಿಥಿ ಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿ.ಸಂಘಟನೆ ಬಂದ ದಾರಿಯನ್ನು ಸ್ಮ...

ಶುಕ್ರವಾರ ಸಂಭ್ರಮದ ಕೆಸಿಎಫ್ ಕುವೈಟ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ 2023

Image
  22/09/2023, ಶುಕ್ರವಾರ ಸಂಭ್ರಮದ ಕೆಸಿಎಫ್ ಕುವೈಟ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ 2023 ರಬೀಹುಲ್ ಅವ್ವಲ್ ತಿಂಗಳು ಬರುವಾಗಲೇ ವಿಶ್ವಾಶಿಗಳಿಗೆ ಎಲ್ಲಿಲ್ಲದ ಸಂತೋಷ.ವಿಶಿಷ್ಟವಾಗಿ ಕೆಸಿಎಫ್ ಕುವೈಟ್ ಕಾರ್ಯಕರ್ತರಿಗೆ ಹಬ್ಬದ ಸಂಭ್ರಮ. ಅತ್ಯಂತ ಮಹತ್ತರವಾದ ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಘೋಷ ವಾಕ್ಯದೊಂದಿಗೆ ಕೆ ಸಿ ಎಫ್ ನಡೆಸಿಕೊಂಡು ಬರುವಂತಹ ವಿಲಾದ್ ಸಮ್ಮೇಳನವು ಜಗತ್ತು ಕಂಡ ಮಹಾನಾಯಕ ವಿಶ್ವ ಪ್ರವಾದಿ صلي الله عليه وسلم ಜನ್ಮದಿನದ ಅಂಗವಾಗಿ ಜಗತ್ತಿಗೆ ಕರುಣೆಯ ಪ್ರವಾದಿ ಎಂಬ ಘೋಷ ವಾಕ್ಯದೊಂದಿಗೆ ಇದೇ ಬರುವ ತಾರೀಕು 22 ಸಪ್ಟೆಂಬರ್ ಶುಕ್ರವಾರ 5:00 ಗಂಟೆಗೆ ಸರಿಯಾಗಿ ಕುವೈಟ್ ಅಬ್ಬಾಸಿಯ ಸೆಂಟ್ರಲ್ ಸ್ಕೂಲ್ನಲ್ಲಿ ನಡೆಯಲಿರುವುದು ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಊರಿನಲ್ಲಿ ಖ್ಯಾತಿ ಪಡೆದಂತಹ ಮದನೀಯಂ ಎಂಬ ಖ್ಯಾತ ನಾಮದ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಹಾಗೂ ನಮ್ಮ ಊರಿನ ನಮ್ಮ ಪ್ರೀತಿಯ ನೆಚ್ಚಿನ ನಾಯಕ ಕರ್ನಾಟಕ ರಾಜ್ಯದ ಸ್ಪೀಕರ್ ಯು.ಟಿ ಖಾದರ್ ಭಾಗವಹಿಸಲಿರುವರು. ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಯಶಸ್ವಿಗೊಳಿಸಬೇಕು ಇನ್ಷಾ ಅಲ್ಲಾ ಸಯದ್ ಕುಟುಂಬದ ಧ್ರುವತಾರೆ ಸೈಯದ್ ಹಬೀಬ್ ಕೋಯ ತಂಞಳ್ ಕುವೈಟ್ ದುವಾ ಆಶಿರ್ವಚನ ನೀಡಲಿರುವರು.      ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ

ಕುವೈತ್:-ಕೆ ಸಿ ಎಫ್,ವತಿಯಿಂದ SSF,ಗೋಲ್ಡನ್ ಫಿಫ್ಟಿ ಪ್ರಚಾರ ಕಾರ್ಯಕ್ರಮ,

Image
ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಹಮ್ಮಿಕೊಂಡ SSF ಗೋಲ್ಡನ್ ಫಿಫ್ಟಿ ಪ್ರಚಾರ ಕಾರ್ಯಕ್ರಮ ಪ್ರಯುಕ್ತ KCF ಕುವೈಟ್ ಸಮಿತಿಯು  ಮಹಬುಲ ಕಲಾ ಆಡಿಟೋರಿಯಂನಲ್ಲಿ ಬಹು ಹುಸೈನ್ ಎರ್ಮಾಡ್ ಮುಸ್ಲಿಯಾರ್  ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡು ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಬಾದಾಷ ಸಖಾಫಿ  ಅವರು ದುಆ ನೆರವೇರಿಸಿ, ಸ್ವಾಗತ ಭಾಷಣವನ್ನು  ಜನಾಬ್ ಯಾಕೂಬ್ ಕಾರ್ಕಳ ಪ್ರ:ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದರು, ಉದ್ಘಾಟನೆಯನ್ನು ಬಹು ಉಮರ್ ಝುಹ್ರಿ  ಉದ್ಘಾಟಿಸಿದರು ಅಧ್ಯಕ್ಷರು ಸಂಘಟನ ವಿಭಾಗ, ಆಸoಷಾ ಭಾಷಣ ಮಾಡಿ SSF ವಿವರಿಸಿದರು,ಶಿಕ್ಷಣ ವಿಭಾಗ ಅಧ್ಯಕ್ಷರು ಬಹು ಬಾದಾಷ ಸಖಾಫಿ ಮಾತನಾಡಿ SSF ನಡೆದ ಬಂದ  ದಾರಿಯನ್ನು ವಿವರಿಸಿದರು, SSF ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಇದರ ಪ್ರಚಾರಕ್ಕಾಗಿ ಆಗಮಿಸಿದ  ರಿಸೀಪ್ಷನ್ ಕನ್ವಿನರ್ ಬಹು ಫಾರೂಕ್ ಅಮಾನಿ ಬೆಂಗಳೂರು ಮಾತನಾಡಿ ಇಸ್ಲಾಮಿನ  ಸುಂದರವಾದ ಆಶಯ ಗಳನ್ನು ವಿವರಿಸಿ ನಮ್ಮ ಜೀವನ ಶೈಲಿ ಮತ್ತು SSF ಸಂಘಟನೆ ನಮ್ಮ ಜೀವನದ ಶಿಷ್ಟಚಾರವನ್ನು ಬದಲಾಯಿಸಿ ಮನುಷ್ಯ ಉತ್ತಮ ಜೀವನ ನಡೆಸುವ ಅರಿವು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ವಾಗಿದೆ ಮಕ್ಕಳು SSF ಸಂಘಟನೆಯ ಸದಸತ್ವ ಹೊಂದಿದ್ದರೆ ಮದ್ಯಪಾನ, ಅಮಲು ಪದಾರ್ಥ ಬಗ್ಗೆ ಜಾಗ್ರಿತಿಗೊಳಿಸುವಂತಹ SSF ನ  ಮಕ್ಕಳು ಸಜ್ಜಾಗಿದ್ದಾರೆ, ಸ್ವಾತಂತ್ರ...

ಕೆಸಿಎಫ್ ಕುವೈಟ್ ಈದ್ ಮಿಲಾದ್ ಸ್ವಾಗತ ಸಮಿತಿ ರಚನೆ: ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಆಯ್ಕೆ,

Image
  ಕೆಸಿಎಫ್ ಕುವೈಟ್ ಈದ್ ಮಿಲಾದ್ ಸ್ವಾಗತ ಸಮಿತಿ ರಚನೆ: ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಆಯ್ಕೆ,   ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ದಿನಾಂಕ 04/08/23 ಶುಕ್ರವಾರ ಇಶಾ ನಮಾಝ್ ನ ನಂತರ ಮಹಬುಲದ ಕಲಾ ಅಡಿಟೋರಿಯಂ ನಲ್ಲಿ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು, ಮೀಲಾದ್ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್, ವೈಸ್ ಛೇರ್ಮನ್ ಆಗಿ ಇಬ್ರಾಹಿಂ ವೇಣೂರು, ಜನರಲ್ ಕನ್ವೀನರ್ ಆಗಿ ಯಾಕೂಬ್ ಕಾರ್ಕಳ,  ಫೈನಾನ್ಸಿಯಲ್ ಛೇರ್ಮ್ಯಾನ್ ಆಗಿ ಇಕ್ಬಾಲ್ ಕಂದಾವರ, ಸೋವನೀಯರ್ ಛೇರ್ಮ್ಯಾನ್ ಆಗಿ ಬಾದುಷ ಸಖಾಫಿ ಮಾದಪುರ, ಕನ್ವೀನರ್ ಆಗಿ ಝಕರ್ರಿಯಾ ಆನೆಕಲ್ , ಅಬ್ದುಲ್ ಮಾಲಿಕ್ ಸೂರಿಂಜೆ, ಹಸೈನಾರ್ ಮೊಂಟುಗೊಳಿ,ಕಲಂದರ್ ಶಾಫಿ ಜೋಕಟ್ಟೆ,ಸಿರಾಜ್ ಸುಂಟಿಕೊಪ್ಪ, ಮೀಡಿಯಾ ಮತ್ತು ಪ್ರಚಾರ ವಿಭಾಗ ಚೇರ್ಮ್ಯಾನಾಗಿ ಶಾಹುಲ್ ಹಮೀದ್ ಸಅದಿ ಝುಹ್ರಿ, ಕನ್ವೀನರ್ ಆಗಿ ಮುಸ್ತಫ ಉಳ್ಳಾಲ, ಹೈದರ್ ಉಚ್ಚಿಲ, ಉಮರ್ ಕೊಳಕೆ,ಇಲ್ಯಾಸ್ ಮೊಂಟುಗೊಳಿ ಊಟೋಪಚಾರದ ವ್ಯವಸ್ಥೆ ಚೇರ್ಮ್ಯಾನ್ ಆಗಿ ಶಂಶುದ್ದೀನ್ ಕುಂದಾಪುರ ಕನ್ವೀನರ್ ಆಗಿ ಇಬ್ರಾಹಿಮ್ ಅಡ್ಕಾರ್,ಇಕ್ಬಾಲ್ ಎಡಪದವು,ರಹೀಂ ಉಚ್ಚಿಲ,ಝುಬೈರ್ ಸಾಲ್ಮಿಯ, ಅಬ್ಬಾಸ್ ಪಾಲ್ಯ  ವೇದಿಕೆ -ಸ್ಟೇಜ್ ಚೇರ್ಮ...

ಕುವೈತ್,ರಕ್ತಧಾನ ಶಿಬಿರವನ್ನು ಆಯೋಜಿಸಿದ್ದ K C F,ಕುವೈತ್ ಝೋನ್,

Image
  ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್ ರಕ್ತಧಾನ ಮಾಡಿ ಜೀವ ಉಳಿಸಿ ರಕ್ತಧಾನ ಶಿಬಿರವು ಜಬ್ರಿಯಾ ಸೆಂಟ್ರಲ್ ಬ್ಲಡ್ ಬ್ಯಾಂಕ್ ನಲ್ಲಿ ಜೂನ್ 16 ರ ಶುಕ್ರವಾರ KCF ಅಧ್ಯಕ್ಷರಾದ ಬಹು ಹುಸೈನ್ ಮುಸ್ಲಿಯಾರ್ ಎರುಮಾಡ್ ಅವರ ಉಪಸ್ಥಿತಿ ಯಲ್ಲಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಜನಾಬ್ ಇಕ್ಬಾಲ್ ಕಂದಾವರ, ಅಬ್ದುಲ್ ಮಲಿಕ್, ಬಹು ಬಾದಾಷ ಸಖಾಫಿ, ಝಕರಿಯ ಅನೇಕಲ್ ,ಬಹು ಉಮರ್ ಝು ಹ್ರಿ, ಫಾರೂಕ್ ಸಖಾಫಿ, ಇಬ್ರಾಹಿಂ ವೇಣೂರು , ಸಮೀರ್ ಕೆಸಿರೋಡ್ ಮುಸ್ತಫಾ ಉಳ್ಳಾಲ, ಉಮರಬ್ಬ ಕೊಳಕೆ , ಸಿರಾಜ್ ಸುಂಟಿ ಕೊಪ್ಪ ಇಸ್ಮಾಯಿಲ್ ಅಯ್ಯಂಗೇರಿ ರಾಷ್ಟ್ರೀಯ, ಝೋನ್, ಸೆಕ್ಟರ್, Kcf ಸದಸ್ಯರು ಹಾಜರಿದ್ದರು, KCF ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಅವರು ಶುಭಕೊರಿದರು,  ಸುಮಾರು ನೂರಾರು ಜನರು ರಕ್ತದಾನಕಾರ್ಯಕ್ರಮದಲ್ಲಿಭಾಗವಹಿಸಿದರು. ರಕ್ತದಾನ ಶಿಬಿರಕ್ಕೆ ಸಹಕರಿಸಿದ *ಐ ಟೀಮ್*, ಮತ್ತು ಭಾಗವಹಿಸಿದ ಎಲ್ಲರಿಗೂ KCF ರಾಷ್ಟ್ರೀಯ ಸಾಂತ್ವನ ವಿಭಾಗ ಧನ್ಯವಾದಗೈದರು. ಅದರಂತೆ ಪ್ರವಾದಿ ಮುಹಮ್ಮದ್ ನೆಬಿ (ಸ.ಅ)ರವರ ಚರಿತ್ರೆ ಪುಸ್ತಕ ವನ್ನು ಬಿಡುಗಡೆ ಗೊಳಿಸಲಾಯಿತು. ವರದಿ:- ಇಬ್ರಾಹಿಂ ವೇಣೂರು ಕುವೈಟ್

ಅಜ್ಜಿಯನ್ನು ಕೊಂದ ಮೊಮ್ಮಗ,!

Image
  ಅಜ್ಜಿಯನ್ನು ಕೊಂದ ಮೊಮ್ಮಗ,! ಮೈಸೂರು :ಅಜ್ಜಿಯೊಬ್ಬರನ್ನು ತನ್ನ ಮೊಮ್ಮಗನೇ ಕೊಲೆಗೈದು ಶವವನ್ನು ಸುಟ್ಟಿರುವ ಘಟನೆ ಮೈಸೂರು ತಾಲೂಕಿನ ಸಾಗರಕಟ್ಟೆಯಲ್ಲಿ  ನಡೆದಿದೆ. ಗಾಯತ್ರಿಪುರಂ ನಿವಾಸಿ ಸುಲೋಚನಾ(75) ಕೊಲೆಯಾದ ಅಜ್ಜಿ ಎಂದು ತಿಳಿದು ಬಂದಿದೆ. ಸುಪ್ರೀತ್(23) ಆರೋಪಿ ಮೊಮ್ಮಗ ಎಂದು ತಿಳಿದು ಬಂದಿದೆ. ಅಜ್ಜಿಯ ಬೈಗುಳ ಸಹಿಸಿಕೊಳ್ಳಲಾಗದೆ ಈತ ತನ್ನ ಅಜ್ಜಿಯನ್ನು ಕೊಲೆಗೈದು, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಟ್ಟಿನ ಡಬ್ಬಕ್ಕೆ ಹಾಕಿ ಕಾರಿನಲ್ಲಿ ಮೈಸೂರು ತಾಲೂಕು ಸಾಗರಕಟ್ಟೆಯ ಬಳಿ ಕೆಆರ್‌ಎಸ್ ಹಿನ್ನೀರಿನ ಪ್ರದೇಶಕ್ಕೆ ತಂದು ಸುಟ್ಟು ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಅರೆಬೆಂದ ಸ್ಥಿತಿಯಲ್ಲಿ ವೃದ್ಧೆಯೊಬ್ಬರು ಶವ ಪತ್ತೆಯಾದ ಬಗ್ಗೆ ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಬೆನ್ನತ್ತಿದ ಇಲವಾಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಿ.ಎಸ್. ಸ್ವರ್ಣ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 1ರಿಂದ 2000,ದ ನೋಟ್ ಸಂಪೂರ್ಣ ಬ್ಯಾನ್,!

Image
  ಅಕ್ಟೋಬರ್ 1ರಿಂದ 2000,ದ ನೋಟ್ ಸಂಪೂರ್ಣ ಬ್ಯಾನ್,! 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾಪಸ್ ಪಡೆದಿದೆ. ಇನ್ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ, ಅವುಗಳನ್ನು 2023ರ ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಿ ಎಂದು ಆರ್‌ಬಿಐ ಪ್ರಕಟಣೆ ಮೂಲಕ ಸೂಚಿಸಿದೆ. ಬ್ಯಾಂಕ್‌ಗಳಲ್ಲಿ 2000 ರೂ.ವಿನಿಮಯವು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆಯನ್ನು ಸಂಪೂರ್ಣ ಬ್ಯಾನ್,!