Posts

Showing posts from July, 2022

ಮಂಡ್ಯ:- ಹಿರಿಯ ಅಧಿಕಾರಿ ಭೇಟಿ ವೇಳೆ ಅಶಿಸ್ತು ತೋರಿದ ಪೇದೆ ಸಸ್ಪೆಂಡ್.!

Image
ಮಂಡ್ಯ:- ಹಿರಿಯ ಅಧಿಕಾರಿ ಭೇಟಿ ವೇಳೆ ಅಶಿಸ್ತು ತೋರಿದ ಪೇದೆ ಸಸ್ಪೆಂಡ್.! ಹಿರಿಯ ಅಧಿಕಾರಿ ಭೇಟಿ ವೇಳೆ ಅಶಿಸ್ತು ತೋರಿದ ಪೇದೆ ಸಸ್ಪೆಂಡ್.!ಆದೇಶ ಹೊರಡಿಸಿದ ಮಂಡ್ಯ ಜಿಲ್ಲಾ ಪೋಲಿಸ್ ಅಧೀಕ್ಷಕ ಎನ್.ಯತೀಶ್..! ಮಂಡ್ಯ :- ಮದ್ದೂರು ಪಟ್ಟಣದ ಪೋಲೀಸ್ ಠಾಣೆಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮವಸ್ತ್ರ ಧರಿಸುವಲ್ಲಿ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಪೇದೆಯೊಬ್ಬನನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪೋಲಿಸ್ ಅಧೀಕ್ಷಕ ಎನ್.ಯತೀಶ್ ಆದೇಶ ಹೊರಡಿಸಿದ್ದಾರೆ. ಮದ್ದೂರು ಪಟ್ಟಣದ ಪೋಲೀಸ್ ಠಾಣೆಗೆ ಮಂಗಳವಾರ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿದ್ದರು. ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮದ್ದೂರು ಪೋಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಯೋಗ ಕ್ಷೇಮವನ್ನು ವಿಚಾರಿಸಿ, ಯಾವುದಾದರೂ ಸಮಸ್ಯೆಗಳಿದ್ದರೆ ತಮ್ಮ ಬಳಿ ಮುಕ್ತವಾಗಿ ಚರ್ಚಿಸಬಹುದು ಎಂದು ಐಜಿಪಿ ಪ್ರವೀಣ್ ಮಧುಕರ್ ಪವಾರ್ ಮನವಿ ಮಾಡಿದರು.ಪ್ರತಿಯೊಬ್ಬ ಸಿಬ್ಬಂದಿಗಳ ಸಮಸ್ಯೆಗಳನ್ನು ಸ್ವತಃ ತಾವೇ ಖುದ್ದಾಗಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮದ್ದೂರು ಸಂಚಾರಿ ಪೊಲೀಸ್ ಠಾಣೆಯ ಪೇದೆ ಕೃಷ್ಣಮೂರ್ತಿ (489) ಅವರು ಸಮವಸ್ತ್ರ ಧರಿಸುವಲ್ಲಿ ಅಶಿಸ್ತಿನಿಂದ ವರ್ತಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ಅಧೀಕ್ಷಕ ಎನ್.ಯತೀಶ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 🖊️ ವೀರಮಣಿ

ಕುಡಿದು ತೂರಾಡಿದ ಕಾಲೇಜ್,ಹುಡುಗ ಹುಡುಗಿಯರ ವಿಡಿಯೋ ವೈರಲ್

Image
  ಎಣ್ಣೆ ಕುಡಿದು ತೂರಾಡಿದ ಕಾಲೇಜಿನ ವಿದ್ಯಾರ್ಥಿಗಳು,ತೂರಾಡಿದ ವಿಡಿಯೋ ಸೆರೆ ಹಿಡಿದ ಸಹಪಾಠಿಗಳು ಎಲ್ಲೆಡೆ ವೈರಲ್ . ಶಿವಮೊಗ್ಗದ ಪ್ರತಿಷ್ಠಿತ ಪಿಇಎಸ್ ಕಾಲೇಜಿನಲ್ಲಿ ಘಟನೆ.ತೀರ್ಥಹಳ್ಳಿಯಲ್ಲಿ ಸಂಬಂಧಪಟ್ಟ ಇಲಾಖೆಯ  ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ತೀರ್ಥಹಳ್ಳಿ:-ಶಿವಮೊಗ್ಗದ ಪ್ರತಿಷ್ಠಿತ ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು  ಮದ್ಯ ಸೇವನೆ ಮಾಡಿ ಕಾಲೇಜಿನ ಕ್ಯಾಂಪಸ್ ನೊಳಗಿರುವ ಮಹಿಳಾ ಹಾಸ್ಟೆಲ್ ಪಕ್ಕದ ರಸ್ತೆಗಳಲ್ಲಿ ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಲೇಜು ಕ್ಯಾಂಪಸ್ ವಿಭಾಗದ ಮುಖ್ಯಸ್ಥರು ಘಟನೆ ನಡೆದಿರುವುದು ನಿಜ  ಈಗಾಗಲೇ ಈ ವಿದ್ಯಾರ್ಥಿಗಳ ಮೇಲೆ  ಕ್ರಮ ಕೈಗೊಳ್ಳಲಾಗಿದ್ದು ಕಾಲೇಜಿನ ಎದುರು ಭಾಗದ ಬಾರೊಂದರಲ್ಲಿ ಮದ್ಯ ಸೇವನೆ ಮಾಡಿರುವ ಬಗ್ಗೆ ಮಾಹಿತಿ ಇದ್ದು ಸೂಕ್ತ ಕ್ರಮಕ್ಕೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿಯ  ಶಾಲಾ ಕಾಲೇಜ್ ಸಮೀಪದ ಅಕ್ಕಪಕ್ಕದ ಅಂಗಡಿಗಳಲ್ಲಿ,ಕೆಲ ಬಾರ್, ಹೋಟೆಲ್ ಗಳಲ್ಲಿ ಅಪ್ರಾಪ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗುಟ್ಕಾ, ಸಿಗರೇಟ್ ,ಮದ್ಯ ನೀಡುತ್ತಿರುವ  ಬಗ್ಗೆ ಸಾಕಷ್ಟು ಬಾರಿ ತೀರ್ಥಹಳ್ಳಿ ಮಿತ್ರ ಮಾಹಿತಿ ನೀಡಿದರೂ ಈವರೆಗೂ ಕ್ರಮ ಕ್ರಮ ಕೈಗೊಳ್ಳದ ಅಧಿಕಾರಿಗಳು, ಮುಂದಾದರು ಇಂತಹ ಘಟನೆಗಳು ನಡೆದಾಗ ಎಚ್ಚೆತ್ತುಕೊಳ್...

ಮಳೆ ಹಾನಿಗೊಳಗಾದ ಗ್ರಾಮಗಳಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಭೇಟಿ.,

Image
  ಆಗುಂಬೆ:ಮಳೆ ಹಾನಿಗೊಳಗಾದ ಗ್ರಾಮಗಳಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಭೇಟಿ., ಶಿವಮೊಗ್ಗ :ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ   ಆಗುಂಬೆ ಹೋಬಳಿಯಲ್ಲಿ ಗಾಳಿ ಮಳೆಯಿಂದ ಮನೆ ಬಿದ್ದಂತಹ ಗ್ರಾಮಗಳಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಗುರುವಾರ ಭೇಟಿ ನೀಡಿದರು. ಹೊನ್ನೇತಾಳು ಗ್ರಾ ಪಂ ವ್ಯಾಪ್ತಿಯ ಶಿರೂರು ಗ್ರಾಮದ ತನುಜಾ ರಾಘವೇಂದ್ರ ,ಜಾವಗಲ್ ಕುಮಾರಗೌಡರ ಇತ್ತೀಚೆಗೆ ವಯೋ ಸಹಜತೆಯಿಂದ ಮೃತರಾಗಿದ್ದು ಅವರ ಮನೆಗೆ ಭೇಟಿ ನೀಡಿದ್ದಾರೆ.ನೀಲಮ್ಮ ನಾಗಪ್ಪ ಹುಂಚಿಕೊಪ್ಪ ,ಬೆಳ್ಳೂರು ಮಂಜಪ್ಪ ನಾಯ್ಕ್ ,ಬಿದರಗೋಡು ಗ್ರಾ .ಪಂ ವ್ಯಾಪ್ತಿಯ ವಾಸುದೇವ್ ಗಿಡ್ಡ ನಾಯ್ಕ್ ಕೆರೆಬೈಲ್.ಬಾಳೆಹಳ್ಳಿ ವಿ.ಆರ್. ಶಿವಾನಂದ್ ರಾಮಪ್ಪ ಹೆಗ್ಡೆ ವಿ.ಎಚ್,ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಹೊಸಳ್ಳಿಸುಧಾಕರ್ ಅವರ ತಾಯಿ ಅವರ ಆರೋಗ್ಯ ವಿಚಾರಿಸಿ ನಂತರ, ಬಿದರಗೋಡು ನೂತನ ಗ್ರಾ.ಪಂ ಅಧ್ಯಕ್ಷರಾಗಿ ಮುತ್ತು ವಳ್ಳಿ ವೆಂಕಟೇಶ್ ಅವರಿಗೆ ಸನ್ಮಾನಿಸಲಾಯಿತು.ಬಾಳೆಹಳ್ಳಿ ಗ್ರಾಮದ ಉಳು ಮಡಿ ಕೃಷ್ಣಮೂರ್ತಿ,ಸುರೇಶ್ ಹಾಗೂ ಮಲ್ಲಂದೂರು ಕಾಡಾನೆಯಿಂದ ಅಡಿಕೆ ತೋಟಕ್ಕೆ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿದ್ದು.ಈ ಸಂದರ್ಭದಲ್ಲಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರ್ ಮಂಜುನಾಥ್,ಬಾಳೇಹಳ್ಳಿ ಪ್ರಭಾಕರ್ ಹೊನ್ನೇತಾಳು ಗ್ರಾ.ಪಂ ಸದಸ್ಯರಾದ ಭಾಗ್ಯ ಪಡುವಳ್ಳಿ ಹರ್ಷೇಂದ್ರಕುಮಾರ್,ಕುಂದಾದ್ರಿ ರಾಘವೇಂದ್ರ,ಜಾವಗಲ್ ರಾಮಸ್ವಾಮಿ,ಎಂ. ಆರ್....

ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜು,

Image
ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜು,  ಅತೀ ಮಳೆಯಿಂದಾಗಿ ಜನವ್ಯವಸ್ಥೆ ಅತಂತ್ರಗೊಂಡ ಉದಾಹರಣೆಯನ್ನು ನಾವು ಕೇಳಿಯೇ ಇರುತ್ತೇವೆ ಇನ್ನು ಮಳೆನಾಡಿನ ಹಳ್ಳಿಗಳಲ್ಲಂತು ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವ ಪರಿಸ್ಥಿತಿ ಈ ಸಲದ ಮಳೆಯಿಂದ ಎದುರಾಗಿದೆ ಇದಕ್ಕೆ ತಾಜಾ ಉದಾಹರಣೆ ಚಿಕ್ಕಮಗಳೂರು ಜಿಲ್ಲೆಯ ನ.ರಾ.ಪುರ ತಾಲ್ಲೂಕಿನ  ಮೇಲ್ಪಾಲ್ ಪೋಸ್ಟ್ ನ ಗಂಗೋಜಿ ಗ್ರಾಮ. ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜಾಗಿದೆ ಶಾಲಾ-ಕಾಲೇಜು ಮಕ್ಕಳಿಗೆ ಹಾಗು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳುಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಗ್ರಾಮಸ್ಥರ ಸಂಕಷ್ಟವನ್ನು ಬಗೆಹರಿಸ ಬೇಕಾಗಿದೆ. 🖋 ವೀರಮಣಿ,
Image
ಆಲ್ದೂರ್:- ಭೂಕುಸಿತ ದಿಂದ ಹಾನಿಯಾದ ಅರೆ ನೂರು ಗ್ರಾಮಕ್ಕೆ ನಗರ  ಅಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಶನಿವಾರ ಬೇಟಿ ನೀಡಿ ಪರಿಶೀಲನೆ ನಡೆಸಿ ದರು, ಈ ಸಂದರ್ಭದಲ್ಲಿಮಾನ್ಯ ಸಚಿವರ ಸೂಚನೆ ಯಂತೆ  ಇಂದು ಅರೇನೂರು ಗ್ರಾಮದ ಆರು ಕುಟುಂಬಗಳಿಗೆ  ಪ್ರವಾಹ ಸಂತ್ರಸ್ತರಿಗೆ ಪಡಿತರ ವಿತರಿಸಲಾಯಿತು  ರಮೇಶ್, ಎಸ್ಪಿ ಅಕ್ಷಯ್ ಮಚೀಂದ್ರ ಬಸರವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ಸುಪ್ರೀತ್,ಸಿಂಧೂ ಕುಮಾರ್ ರವೀಂದ್ರ ಮುಂತಾದವರಿದ್ದರು. 🖊️ ವೀರಮಣಿ  

ರಾತ್ರೋ ರಾತ್ರಿ ಆದೇಶ ವಾಪಸ್,ತೀವ್ರ ವಿರೋಧಕ್ಕೆ ಶರಣಾದ ಸರ್ಕಾರ,!

Image
    ರಾತ್ರೋ ರಾತ್ರಿ ಆದೇಶ ವಾಪಸ್,ತೀವ್ರ ವಿರೋಧಕ್ಕೆ ಶರಣಾದ ಸರ್ಕಾರ,! ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ, ವಿಡಿಯೋ ತೆಗೆಯುವುದನ್ನು ಸರ್ಕಾರ ನಿಷೇಧಿಸಿ ನಿನ್ನೆ ಆದೇಶಿಸಿದ್ದ ರಾಜ್ಯ ಸರ್ಕಾರ, ತೀವ್ರ ವಿರೋಧಕ್ಕೆ ಮಣಿದು ರಾತ್ರೋರಾತ್ರಿ ಆದೇಶ ಹಿಂಪಡೆದಿದೆ. ‘ಶೇ 40ರ ಲಂಚದ ಆಪಾದನೆಗೆ ಗುರಿಯಾಗಿದ್ದ ಸರ್ಕಾರ, ಭ್ರಷ್ಟಾಚಾರ ನಡೆಯಲು ಅನುಕೂಲ ಮಾಡಿಕೊಡುವುದಕ್ಕಾಗಿ ಈ ನಿಷೇಧ ಹೇರಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ವಿರೋಧ ಪಕ್ಷದ ನಾಯಕರೂ ಕೂಡ ಸರ್ಕಾರದ ಈ ನಡೆಯನ್ನು ಖಂಡಿಸಿದ್ದರು.  ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದಂತೆ ರಾತ್ರೋರಾತ್ರಿ ಈ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ.

ಕೊಪ್ಪ:- ಶಾಸಕರ ಕಛೇರಿಯಲ್ಲಿ ಅಂಗವಿಕಲರಿಗೆ ನಾಲ್ಕು ಚಕ್ರದ ಸ್ಕೂಟಿಯನ್ನು ಶಾಸಕರಾದ ಟಿ.ಡಿ.ರಾಜೇಗೌಡರು ವಿತರಿಸಿದರು

Image
  ಕೊಪ್ಪ:- ಶಾಸಕರ ಕಛೇರಿಯಲ್ಲಿ ಅಂಗವಿಕಲರಿಗೆ ನಾಲ್ಕು ಚಕ್ರದ ಸ್ಕೂಟಿಯನ್ನು ಶಾಸಕರಾದ ಟಿ.ಡಿ.ರಾಜೇಗೌಡರು ವಿತರಿಸಿದರು, ಕೊಪ್ಪ:-ಕೊಪ್ಪದ ಶಾಸಕರ ಕಛೇರಿಯಲ್ಲಿ ಅಂಗವಿಕಲರಿಗೆ ನಾಲ್ಕು ಚಕ್ರದ ಸ್ಕೂಟಿಯನ್ನು ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ.ಡಿ.ರಾಜೇಗೌಡರು ವಿತರಿಸಿದರು. ಈ ಸಂದರ್ಭದಲ್ಲಿ ಕೊಪ್ಪ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಇನೇಶ್, ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ನಾರ್ವೆ ಅಶೋಕ್, ಪಟ್ಟಣ ಪಂಚಾಯಿತಿ ಸದಸ್ಯರಾದ ರಶೀದ್, ವಿಜಯ್ ಹಾಗೂ ಕಸಬಾ ಹೋಬಳಿ ಅಧ್ಯಕ್ಷರಾದ ಚಿಂತನ್ ಹಾಗೂ ಕಾಂಗ್ರೆಸ್ ಮುಖಂಡರಾದ ಹೊಸಮನೆ ರಾಮಪ್ಪ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ತೈಯಬ್,ಈವನ್, ಸತೀಶ್ ಹಾಗೂ ಹರಂದೂರು ಪಂಚಾಯಿತಿ ಸದಸ್ಯರಾದ ಆನಂದ್ ಉಪಸ್ಥಿತರಿದ್ದರು.  🖊️ ವೀರಮಣಿ

ಸಹಕಾರ ಸಾರಿಗೆ ಸಂಸ್ಥೆ ಚುನಾವಣೆ : 12 ಮಂದಿ ನಿರ್ದೇಶಕರು ಆಯ್ಕೆ,

Image
  ಸಹಕಾರ ಸಾರಿಗೆ ಸಂಸ್ಥೆ ಚುನಾವಣೆ : 12 ಮಂದಿ ನಿರ್ದೇಶಕರು ಆಯ್ಕೆ, ಕೊಪ್ಪ:- ಸಹಕಾರ ಸಾರಿಗೆ ಸಂಸ್ಥೆ ( ಟಿಸಿಎಸ್ ) ಮುಂದಿನ 5 ವರ್ಷಗಳ ಅವಧಿಗೆ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ ವಸಂತ ತಿಳಿಸಿದ್ದಾರೆ . ಒಟ್ಟು 13 ಸ್ಥಾನಗಳಿಗೆ ಜುಲೈ 17 ಕ್ಕೆ ಚುನಾವಣೆ ನಿಗದಿಯಾಗಿತ್ತು . ನಾಮನಿರ್ದೇಶನ ಪತ್ರಗಳನ್ನು ಜು .9 ರ ವರೆಗೆ ಸಲ್ಲಿಸಲು , 11 ನೇ ತಾರೀಕಿನಂದು ವಾಪಸ್ ಪಡೆಯಲು ಅವಕಾಶ ನೀಡಲಾಗಿತ್ತು . ಒಟ್ಟು ಸ್ಥಾನಗಳ ಪೈಕಿ 12 ಮಂದಿ ನಾಮಪತ್ರ ಸಲ್ಲಿಸಿದ್ದರು ( ಪ . ಪಂ.ಮೀಸಲು ಸ್ಥಾನಕ್ಕೆ ಸಲ್ಲಿಕೆಯಾಗಿಲ್ಲ ) .ಜು .22 ರಂದು ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ . 🖊️ ಮಜೀದ್ ಕೊಪ್ಪ

ಎನ್ ಆರ್ ಪುರ : ಕರ್ಕೇಶ್ವರ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ , ಪರಿಶೀಲನೆ,

Image
  ಎನ್ ಆರ್ ಪುರ : ಕರ್ಕೇಶ್ವರ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ , ಪರಿಶೀಲನೆ, ‌ಮೇಲ್ಪಾಲ್,ಕರ್ಕೇಶ್ವರ ಕಾಲೋನಿಯಲ್ಲಿ ಮಳೆ ಅವಾಂತರಕ್ಕೆ ಕುಸಿದಿರುವ ಕಾಳಮ್ಮ ಮತ್ತು ಮಹೇಶ ರವರ ಮನೆಯನ್ನು  ಸಂಭಂದಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ತಿಳಿಸಿರುತ್ತಾರೆ. ಹಾಗೂ ಈ ಬಗ್ಗೆ ತುರ್ತು ಗಮನ ಹರಿಸುವುದಾಗಿ ತಿಳಿಸಿರುತ್ತಾರೆ, ಎನ್ ಆರ್ ಪುರ:- ಶಾಸಕ ಟಿ.ಡಿ.ರಾಜೇಗೌಡ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ನಟರಾಜ ಗೇರ್ ಬೈಲ್,ಯೂತ್ ಕಾಂಗ್ರೆಸ್ ಹೋಬಳಿ ಕಾರ್ಯದರ್ಶಿಯಾದ ಕಾರ್ತಿಕ್ ಹುಣಸೆಕೊಪ್ಪ, ತಹಸೀಲ್ದಾರ್ ವಿಶ್ವನಾಥ್,ನಾಗೇಂದ್ರ, ಇ ಓ ನಯನಾ,ವಿ ಐ ಪ್ರಿಯಾಂಕ,ಕರ್ಕೇಶ್ವರ ಪಂಚಾಯಿತಿಯ ಅಧ್ಯಕ್ಷರಾದ ರಾಜೇಶ್ ಕೆ ಎಸ್,ಉಪಾಧ್ಯಕ್ಷರಾದ ಶಾದರ, ಸದಸ್ಯರಾದ ಮಹೇಶ ಸುಚಿತ್ರ,ರವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು, 🖋 ವೀರಮಣಿ,

ಕೊಪ್ಪ ತಾಲ್ಲೂಕಿನ ಜಯಪುರ ಅಲಗೇಶ್ವರ ರಸ್ತೆಯ ರುಕ್ಮಣಿ ಎಂಬುವವರ ಮನೆ ಧಾರಾಕಾರ ಮಳೆಯಿಂದ ಕುಸುದು ಬಿದ್ದ ಘಟನೆ ನಡೆದಿದೆ

Image
ಕೊಪ್ಪ ತಾಲ್ಲೂಕಿನ ಜಯಪುರ ಅಲಗೇಶ್ವರ ರಸ್ತೆಯ ರುಕ್ಮಣಿ ಎಂಬುವವರ ಮನೆ ಧಾರಾಕಾರ ಮಳೆಯಿಂದ ಕುಸುದು ಬಿದ್ದ ಘಟನೆ ನಡೆದಿದೆ ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಅಲಿಗೇಶ್ವರ ಗ್ರಾಮದಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದಿದನ್ನು ಹಾಗೂ ಜಯಪುರ ಹಾಗೂ ಬಸರೀಕಟ್ಟೆ ಸಂಪರ್ಕಿಸುವ ಮಾರ್ಗಮಧ್ಯೆ ರಸ್ತೆಯ ಬದಿಯಲ್ಲಿ ಗುಡ್ಡ ಜರುಗಿದನ್ನು ಪರಿಶೀಲಿಸಿದರು . ಅಧಿಕಾರಿಗಳ ಜತೆಯಲ್ಲಿ ವೀಕ್ಷಣೆ ಮಾಡಿದ ಅವರು ನೆರೆ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು .  ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ , ಜಿಲ್ಲಾಧಿಕಾರಿ ರಮೇಶ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಅಕ್ಷಯ್ ಎಂ.ಹೆಚ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು . 🖋 ವೀರಮಣಿ  

ಪತ್ನಿಯ ಕಣ್ಣಿಗೆ ಮಣ್ಣೆರಚಿದ ಪತಿ, ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ!

Image
  ಮುಂಬೈ; ಪತ್ನಿಯಿಂದ ವಿದೇಶ ಪ್ರವಾಸದ ಮಾಹಿತಿಯನ್ನು ಮರೆಮಾಚಲು ಪಾಸ್‌ ಪೋರ್ಟ್‌ನ ಪುಟಗಳನ್ನು ಹರಿದು ಹಾಕಿದ್ದ ಯುವಕನನ್ನು ಬಂಧಿಸಲಾಗಿದೆ. ತನ್ನ ಪಾಸ್‌ಪೋರ್ಟ್ ಅನ್ನು ನಕಲಿ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಯಾದವ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಮದುವೆಯ ಮೊದಲು ತನ್ನ ದೀರ್ಘಕಾಲದ ಮಹಿಳಾ ಸ್ನೇಹಿತೆಯನ್ನು ಭೇಟಿಯಾಗಲು 2019 ರಲ್ಲಿ ಥೈಲ್ಯಾಂಡ್‌ ಗೆ ಪ್ರವಾಸ ಮಾಡಿದ್ದ.  ಈ ವಿದೇಶ ಪ್ರವಾಸದ ಮಾಹಿತಿಯನ್ನು ಹರಿದು ಹಾಕಿದ ಆರೋಪದ ಮೇರೆಗೆ ಸಂದರ್ಶಿ ಯಾದವ್ ಈಗ ಆರೆಸ್ಟ್ ಆಗಿದ್ದಾನೆ. ಕಳೆದ ದಿನ ಮಾಲ್ಡೀವ್ಸ್‌ ಗೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರ ಪಾಸ್‌ ಪೋರ್ಟ್‌ನಲ್ಲಿ ಕೆಲವು ಪುಟಗಳು ಹರಿದಿರುವುದು ಇಮ್ಮಿಗ್ರೇಶನ್ ಇಲಾಖೆ ಗಮನಕ್ಕೆ ಬಂದಿದೆ.  ಬಳಿಕ ಪೊಲೀಸರು ನಡೆಸಿದ ವಿಚಾರಣೆ ವೇಳೆ ಪತ್ನಿಯಿಂದ ಬಚ್ಚಿಟ್ಟಿದ್ದ ವಿದೇಶಿ ಪ್ರವಾಸ ಬೆಳಕಿಗೆ ಬಂದಿದೆ.  ಈತ ಅಪರಾಧವನ್ನು ಒಪ್ಪಿಕೊಂಡದ್ದು ನಂತರ ಬಂಧಿಸಲಾಗಿದೆ

ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಿತು.

Image
  ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಿತು.ಪಕ್ಷದ ರಾಜ್ಯ ಉಪಾಧ್ಯಕ್ಷ ತುಮುಖಾನೆ ಸುಧಾಕರ್ ಎಸ್.ಶೆಟ್ಟಿ ತಮ್ಮಜನ್ಮದಿನದ ಪ್ರಯುಕ್ತ ಉಚಿತ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಿದ್ದರು . ಈ ಶಿಬಿರದಲ್ಲಿ ನೂರಾರು ಹೃದ್ರೋಗ ತಪಾಸಣೆಗೆ ಒಳಗಾದರು.ನಂತರ ಹಾಜರಿದ್ದ ತಜ್ಞ ವೈದ್ಯರನ್ನು ತುಮುಖಾನೆ ಸುಧಾಕರ್ ಶೆಟ್ಟಿ ಗೌರವಿಸಿದರು.ಪಕ್ಷದ ಮುಖಂಡರಾದ ಎಚ್.ಜಿ.ವೆಂಕಟೇಶ್,ನಂದಿನಿ ಸುರೇಶ್, ದಿವಾಕರ್ ಭಟ್ ಮತ್ತಿತರರು ಹಾಜರಿದ್ದರು . 🖊️ಮಜೀದ್ ಕೊಪ್ಪ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ ; ಜು .6 ರಿಂದ ನಾಲ್ಕು ದಿನಗಳ ಕಾಲ 5 ತಾಲೂಕಿನ ಶಾಲೆಗಳಿಗೆ ರಜೆ,

Image
  ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ ; ಜು .6 ರಿಂದ ನಾಲ್ಕು ದಿನಗಳ ಕಾಲ 5 ತಾಲೂಕಿನ ಶಾಲೆಗಳಿಗೆ ರಜೆ,  ಜಿಲ್ಲೆಯಲ್ಲಿ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಮುಂದಿನ ನಾಲ್ಕು ದಿನಗಳ ಮಲೆನಾಡು ಭಾಗದ ಶಾಲಾಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ . ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು , ಕಳಸ , ಕೊಪ್ಪ , ಶೃಂಗೇರಿ , ಎನ್.ಆರ್ ಪುರ , ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಅಂಬಳೆ , ಲಕ್ಯ ಹೋಬಳಿಗಳನ್ನು ಬಿಟ್ಟು ಉಳಿದ ಭಾಗಕ್ಕೆ ರಜೆಯನ್ನು ಘೋಷಿಸಿದ್ದಾರೆ . ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತೀರುವ ಕಾರಣ ಶೈಕ್ಷಣಿಕ ಸಂಸ್ಥೆಗಳಾದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು .06 ರಿಂದ 9 ರ ವರೆಗೆ ರಜೆಯನ್ನು ನೀಡಲಾಗಿದೆ . 🖋ಮಜೀದ್ ಕೊಪ್ಪ

ಹುಬ್ಬಳ್ಳಿ, ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ,!

Image
  ಹುಬ್ಬಳ್ಳಿ : ಹುಬ್ಬಳ್ಳಿಯ ಖಾಸಗಿ ಹೋಟೆಲಿನಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ ಮಾಡಿರುವ ಘಟನೆ ನಡೆದಿದೆ . ಮಂಗಳವಾರ ಬೆಳಗ್ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ . ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಆಯುಕ್ತ ಲಾಭೂರಾಮ , ಡಿಸಿಪಿ ಸಾಹಿಲ್ ಬಾಗ್ಲಾ ಪರಿಶೀಲನೆ ನಡೆಸಿದ್ದಾರೆ . ಕರ್ನಾಟಕದ ಖ್ಯಾತ ವಾಸ್ತುತಜ್ಞ ಜ್ಯೋತಿಷಿಯಾಗಿದ್ದ ಚಂದ್ರಶೇಖರ ಗುರೂಜಿ ವಾಸ್ತು ಪರಿಹಾರದಲ್ಲಿ ಖ್ಯಾತಿಯಾಗಿದ್ದರು . ಇನ್ನೂ ಹುಬ್ಬಳ್ಳಿಯಲ್ಲಿ ತಮ್ಮ ನಿವಾಸದಿಂದ ಹೋಟೆಲ್'ಗೆ ಹೋಗಿದ್ದಾಗ , ಗುರೂಜಿಯನ್ನು ಹತ್ಯೆ ಮಾಡಲಾಗಿದೆ, ಭಕ್ತರ ಸೋಗಿನಲ್ಲಿ ಬಂದ ಇಬ್ಬರು ಯುವಕರು ಚಂದ್ರಶೇಖರ ಗುರೂಜಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೆಪ್ ಆಗಿದ್ದಾರೆ . ಸ್ಥಳಕ್ಕೆ ಪೊಲೀಸ್ ಕಮಿಷನರ್ ಲಾಬೂರಾವ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ . ಅಲ್ಲದೇ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ .

ಅಂಗಡಿಗಳಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡಿದರೆ,ಪರವಾನಿಗೆ ರದ್ದು,!

Image
  ಶಿವಮೊಗ್ಗ : ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದುಪಡಿಸಿ ಕಾನೂನು ಕ್ರಮ ಜರುಗಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು . ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆ ನಿಯಂತ್ರಣಕ್ಕಾಗಿ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜತೆಯಲ್ಲಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ ಅವರು , ರಾಜ್ಯವನ್ನು ವ್ಯಸನಮುಕ್ತಗೊಳಿಸಲು ಆಂದೋಲನದ ರೀತಿಯಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ . ಕಳೆದ ಸಾಲಿನಲ್ಲಿ ಟನ್‌ಗಟ್ಟಲೆ ಮಾದಕ್ಕ ವಸ್ತುಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿದ್ದು , ಕಳೆದ ತಿಂಗಳು ನಾಶಗೊಳಿಸಲಾಗಿದೆ . ಆದರೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರವಿಲ್ಲದೆ ಈ ಪಿಡುಗನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ . ಶಿವಮೊಗ್ಗ ಜಿಲ್ಲೆಯನ್ನು ವ್ಯಸನ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಂಘ ಸಂಸ್ಥೆಗಳ ಜತೆ ಕೈಜೋಡಿಸಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು . ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಪದಾಧಿಕಾರಿಗಳು , ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್...

ಅಲ್ ಮದೀನಾ ಕುವೈಟ್ ರಾಷ್ಟ್ರೀಯ ಸಮಿತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನುಸ್ಮರಣೆ,

Image
  ಅಲ್ ಮದೀನಾ ಕುವೈಟ್ ರಾಷ್ಟ್ರೀಯ ಸಮಿತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನುಸ್ಮರಣೆ, ಅಲ್ ಮದೀನಾ ಕುವೈಟ್  ರಾಷ್ಟ್ರೀಯ ಸಮಿತಿಯ ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಮಂಜನಾಡಿ ಮರ್ಹೂಂ ಅಹ್ಮದ್ ಉಸ್ತಾದ್ ಮಾಣಿಕ್ಕೂತ್ತ್    ಅನುಸ್ಮರಣೆ ಕಾರ್ಯಕ್ರಮವು ದಿನಾಂಕ 1/7/2022 ರಂದು ಶುಕ್ರವಾರ ಕುವೈಟ್  ಫರ್ವಾನಿಯ ತಾಜುಲ್ ಉಲಮಾ ಕೆಸಿಎಫ್ ಸೆಂಟರ್ನಲ್ಲಿ  ಅತೀ ವಿಜೃಂಭಣೆ ಯಿಂದ ಅಲ್ ಮದೀನಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಬಹು ಸಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದರ ಅಧ್ಯಕ್ಷತೆ ಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ಅಧ್ಯಕ್ಷ ಬಹು ಬಾದುಷಾ ಸಖಾಫಿ  ಉಸ್ತಾದರ ಬದರ್ ಮೌಲಿದ್ ಪಾರಾಯಣ ದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.  ಮುಖ್ಯ ಅತಿಥಿ ಗಳಾಗಿ ಗೌರವಾನಿತ್ವ ಸಯ್ಯಿದ್ ಹಾಮಿದ್ ಫಝಲ್ ಕೋಯಮ್ಮ ಅಲ್ ಬುಖಾರಿ ತಂಞಳ್  ಕೂರತ್ ರವರ ನೇತೃತ್ವ ಹಾಗೂ ದುವಾ ದೊಂದಿಗೆ ನಡೆದ ಕಾರ್ಯಕ್ರಮವನ್ನು ಅಲ್ ಮದೀನಾ ಕುವೈಟ್  ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಮೂಸ ಇಬ್ರಾಹಿಂ ಸ್ವಾಗತ ಭಾಷಣ ಮಾಡಿದರು       ICF ಕುವೈಟ್ ರಾಷ್ಟ್ರೀಯ ಸಮಿತಿಯ  ಅಧ್ಯಕ್ಷರಾದ ಬಹು ಅಬ್ದುಲ್ ಹಕೀಮ್ ದಾರಿಮಿ ಉಸ್ತಾದರು ಉದ್ಘಾಟನೆ ಮಾಡಿದರು ಅಶಂಸ ಭಾಷಣ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು ಬಹು ಹುಸೈನ್ ಎರ್ಮಡ್ ಉಸ್ತಾದ್ ರವರು ಮಾಡಿದರು  ಮುಖ...

KCF,ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್, ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್,ಅನುಸ್ಮರಣೆ,

Image
KCF,ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್, ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್,ಅನುಸ್ಮರಣೆ, ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್  ರಾಷ್ಟ್ರೀಯ ಸಮಿತಿಯ ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಮಂಜನಾಡಿ ಮರ್ಹೂಂ ಅಹ್ಮದ್ ಉಸ್ತಾದ್ ಮಾಣಿಕ್ಕೂತ್ತ್  ಮರ್ಹೂಂ  ಓ ಖಾಲಿದ್ ಸಾಹೇಬ್,  ಅನುಸ್ಮರಣೆ ಕಾರ್ಯಕ್ರಮವು ದಿನಾಂಕ 30/6/2022 ರಂದು ಗುರುವಾರ ಕುವೈಟ್  ಫಹಾಹೀಲ್ ನ ಮೆಡೆಕ್ಸ್ ಆಡಿಟೋರಿಯಂ ನಲ್ಲಿ ನಡೆಯಿತು,  ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಬಹು ಹುಸೈನ್ ಎರ್ಮಾಡ್  ಉಸ್ತಾದರ ಅಧ್ಯಕ್ಷತೆ ಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಇಹ್ಸಾನ್ ಅಧ್ಯಕ್ಷ ಬಹು ಉಮರುಲ್ ಫಾರೂಕ್ ಸಖಾಫಿ ಉಸ್ತಾದರ ಬದರ್ ಮೌಲಿದ್ ಪಾರಾಯಣ ದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯ ಅತಿಥಿ ಗಳಾಗಿ ಗೌರವಾನಿತ್ವ ಸಯ್ಯಿದ್ ಹಾಮಿದ್ ಫಝಲ್, ಕೋಯಮ್ಮ ಅಲ್ ಬುಖಾರಿ ತಂಞಳ್  ಕೂರತ್ ರವರ ನೇತೃತ್ವ ಹಾಗೂ ದುವಾ ದೊಂದಿಗೆ ನಡೆದ ಕಾರ್ಯಕ್ರಮವನ್ನು ಕೆಸಿಎಫ್  ಕುವೈಟ್    ಸಂಘಟನಾ ಅಧ್ಯಕ್ಷ ಉಮರ್ ಝುಹುರಿ ಸ್ವಾಗತ ಭಾಷಣ ಮಾಡಿದರು,  ಅದೇ ರೀತಿ ಕೆಸಿಎಫ್ INC ಕೌನ್ಸಿಲರ್ ಬಹು ಅಬ್ದುಲ್ ರಹ್ಮಾನ್ ಸಖಾಫಿ ಉದ್ಘಾಟನೆ ಗೈದು ಆಶಂಸ ಭಾಷಣ ವನ್ನು ICF ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು ಅಬ್ದುಲ್ ಹಕೀಮ್ ದಾರಿಮಿ ಉಸ್ತಾದರು ನಿರ್ವಹಿಸಿದರು. ...

NR ಪುರ: ಕೆಕೆಬಿ ಬಸ್‌ ಹಾಗೂ ಕೆ ಎಸ್ಸ್ ಆರ್ ಟಿ ಸಿ, ಮುಖಾಮುಖಿ ಡಿಕ್ಕಿ,

Image
NR ಪುರ: ಕೆಕೆಬಿ ಬಸ್‌ ಹಾಗೂ ಕೆ ಎಸ್ಸ್ ಆರ್ ಟಿ ಸಿ, ಮುಖಾಮುಖಿ ಡಿಕ್ಕಿ ,   N R,ಪುರ, ನರಸಿಂಹರಾಜಪುರ ಸಮೀಪದ ಲಕ್ಕಿನಕೊಪ್ಪ ಬಳಿಯ ತೋಟದಕೆರೆ ಕ್ರಾಸ್‌ ನಲ್ಲಿ ಇಂದು ಸಂಜೆ ಎರಡು ಬಸ್ಸುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ  ಕೊಪ್ಪ ಕಡೆಗೆ ಸಾಗುತ್ತಿದ್ದ ಕೆಕೆಬಿ ಅನ್ನಪೂರ್ಣ ಬಸ್‌ ಹಾಗೂ ಶೃಂಗೇರಿಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ ಟಿ ಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಕೆಎಸ್ಸಾರ್ಟಿಸಿ ಬಸ್‌ ನಲ್ಲಿ ಸುಮಾರು 42 ಪ್ರಯಾಣಿಕರಿದ್ದು ಚಾಲಕ, ನಿರ್ವಾಹಕ ಸೇರಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಕೆಕೆಬಿ ಬಸ್‌ ನಲ್ಲಿ 30 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಚಾಲಕ ಹಾಗೂ ಬಸ್ಸಿನಲ್ಲಿ ಅಧಿಕ ಸಖ್ಯೆಯಲ್ಲಿದ್ದ ಶಾಲಾ - ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 🖊️ ವೀರಮಣಿ