Posts

Showing posts from August, 2022

ನ್ಯಾಮತಿ :ಮಹಿಳೆ ಕೊಂದ ಚಿರತೆ ಸೆರೆ.

Image
  ನ್ಯಾಮತಿ: ತಾಲ್ಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದ ಚಿರತೆ ವಾರದ ನಂತರ ಬೋನಿನಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಸೆರೆಗೆ ಸತತ ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿ ಮೊದಲಿಗೆ ಮಹಿಳೆಯನ್ನು ಕೊಂದ ಸ್ಥಳದಲ್ಲಿ 7 ಬೋನುಗಳು, 7 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.ನಂತರ ಅಕ್ಕಪಕ್ಕದ ಗ್ರಾಮಗಳಲ್ಲಿ ಹೆಜ್ಜೆಗುರುತು ಕಂಡು ಬಂದ ಕಾರಣ ಬೋನುಗಳನ್ನು ಸ್ಥಳಾಂತರಿಸಿದ್ದರು.ಶಿವಮೊಗ್ಗ ಮೀಸಲು ಅರಣ್ಯ ಆಲದಹಳ್ಳಿ ವಲಯದ ಬೋನಿಗೆ ಮಂಗಳವಾರ ಮುಂಜಾನೆ ಚಿರತೆ ಬಿದ್ದಿದ್ದು, ಹೆಜ್ಜೆಯ ಗುರುತಿನ ಆಧಾರದ ಮೇಲೆ ಮಹಿಳೆಯನ್ನು ಕೊಂದ ಗಂಡು ಚಿರತೆ ಇದೇ ಎಂದು ಗುರುತಿಸಲಾಗಿದೆ.ಕಾರ್ಯಾಚರಣೆ ವೇಳೆ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನಕುಮಾರ, ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕೆ.ಆರ್‌. ಚೇತನ್, ಉಪ ವಲಯ ಅರಣ್ಯಾಧಿಕಾರಿಗಳಾದ ಬರ್ಕತ್‌ ಅಲಿ ಮತ್ತು ಶಿವಯೋಗಿ, ಅರಣ್ಯ ರಕ್ಷಕರಾದ ಕೃಷ್ಣಮೂರ್ತಿ, ಲಿಂಗರಾಜ ಮತ್ತು ಅರಣ್ಯ ನಿರೀಕ್ಷ ಚಂದ್ರಪ್ಪ, ಶಿವಮೊಗ್ಗ ಅರಣ್ಯ ಮತ್ತು ಶಂಕರ ವಲಯ ಅರಣ್ಯಾಧಿಕಾರಿ, ಸಿಬ್ಬಂದಿ ಇದ್ದರು. 🖊️ ವೀರಮಣಿ ಬಾಳೆಹೊನ್ನುರು,

ಅಕ್ರಮ ಮಾದಕ ವಸ್ತು ಸೇವನೆ,ವ್ಯಕ್ತಿಯ ಬಂಧನ,,

Image
  ಎನ್.ಆರ್.ಪುರ:- ಬಿ . ಹೆಚ್ . ಕೈ ಮರದ ಸಾರ್ವಜನಿಕ ಸ್ಥಳದಲ್ಲಿ ಸಂತೋಷ ಬಿನ್ ವೇಲಾಯುಧನ್ , ವಾಸ ಅಯ್ಯಪ್ಪ ನಗರ , ವಾಸ ಬಿ.ಹೆಚ್ . ಕೈಮರ ನ.ರಾ. ಪುರ ಈತನು ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ , ಸದರಿ ಆಸಾಮಿಯನ್ನು ವಶಕ್ಕೆ ಪಡೆದು , ಸದರಿ ಆಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು , ಆರೋಪಿ ವಿರುದ್ಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ . ಈ ಕಾರ್ಯಾಚರಣೆಗಳಲ್ಲಿ ಎನ್.ಆರ್.ಪುರ ಪೊಲೀಸ್ ಠಾಣಾ ಪಿ . ಎಸ್.ಐ.ದಿಲೀಪ್ ಕುಮಾರ್ ವಿ.ಟಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದಾರೆ . 🖋ಮಜೀದ್ ಕೊಪ್ಪ,

ಸಾಲ ಪಡೆದ ಸ್ನೇಹಿತನ ರುಂಡ ಚೆಂಡಾಡಿದ, ಸ್ನೇಹಿತ .. !

Image
 ಸಾಲ ಪಡೆದ ಸ್ನೇಹಿತನ ರುಂಡ ಚೆಂಡಾಡಿದ, ಸ್ನೇಹಿತ .. ! ಬೆಳಗಾವಿ : ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ . ನಿನ್ನೆ ಸಾಯಂಕಾಲ ತಾರಿಹಾಳದ ಶಿಂದೊಳ್ಳಿ ಮಠ ಗಲ್ಲಿಯ ಗದಗಯ್ಯ ಹಿರೇಮಠ ( 40 ) ಎಂಬಾತನನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು . ಇನ್ನೂ ಕೊಂಡಸಕೊಪ್ಪ ಗ್ರಾಮದ ವಿಠಲ ಸಾಂಬ್ರೆಕರ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ . ಗದಗಯ್ಯ ಹಾಗೂ ವಿಠಲ ಇಬ್ಬರು ಸ್ನೇಹಿತರಾಗಿದ್ದರು . ಇನ್ನೂ ಗದಗಯ್ಯ , ವಿಠಲನ ಹತ್ತಿರ 2 ಲಕ್ಷ ರೂಪಾಯಿ ಪಡೆದಿದ್ದನು . ಆದರೆ ಹಣ ಪಡೆದು 2 ವರ್ಷವಾದರೂ ವಾಪಸ್ಸು ಕೊಟ್ಟಿರಲಿಲ್ಲ ಎನ್ನಲಾಗುತ್ತಿದೆ . ಇದರಿಂದ ಸಿಟ್ಟಾದ ವಿಠಲ 2 ತಿಂಗಳಿನಿಂದ ಗದಗಯ್ಯನ ಕೊಲೆಗೆ ಸ್ಕೆಚ್ ಹಾಕಿದ್ದನು ಎಂದು ತಿಳಿದು ಬಂದಿದೆ .

ಕೊಪ್ಪ, ಸಾರ್ವಜನಿಕ ಗಣೇಶೋತ್ಸವಕ್ಕೆ ನಿಯಮ,ಡಿ ಜೆ,ಹಾಕಲು ಅನುಮತಿಯಿಲ್ಲ,

Image
  ಸಾರ್ವಜನಿಕ ಗಣೇಶೋತ್ಸವಕ್ಕೆ ವಿಧಿಸಿರುವ ನಿಯಮಾವಳಿಗಳು, 1)ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆ ಅನುಮತಿ ಕಡ್ಡಾಯ, 2)ನ್ಯಾಯಾಲಯದ ನಿರ್ದೇಶನದಂತೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ, 3)ಡಿ.ಜೆ. ಹಾಕಲು ಅನುಮತಿಯಿಲ್ಲ . 4) ಬೇರೆ ಧರ್ಮಗಳ ಜನರ ಭಾವನೆಗಳಿಗೆ ಧಕ್ಕೆತರುವಂತೆ ನಡೆದುಕೊಳ್ಳುವಂತಿಲ್ಲ . 5) ಮೂರ್ತಿ ಪ್ರತಿಷ್ಠಾಪನೆ ವೇಳೆ ಮೈಕ್ , ಪೊಲೀಸ್ , ವಿದ್ಯುತ್ ಇಲಾಖೆಯಿಂದ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ . 6)ಪೊಸ್ಟರ್ , ಬ್ಯಾನರ್ ಅಳವಡಿಸಲು ಸ್ಥಳೀಯ ಆಡಳಿತದಿಂದ ಅನುಮತಿ ಕಡ್ಡಾಯ . 7)ಸಂಜೆ 6 ಗಂಟೆಯ ಒಳಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸೂಚನೆ . ಕೇವಲ ಎಂಟು ದಿನಗಳಲ್ಲಿ ದೇಶಾದ್ಯಂತ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ವಿವಿಧ ಸಾರ್ವಜನಿಕ ಮಂಡಳಿ ಹಾಗೂ ಊರಿನ ಜನರು ಭರದಿಂದ ಸಿದ್ಧತೆಗಳನ್ನು ಆರಂಭಿಸಿದ್ದಾರೆ . ಕಳೆದೆರಡು ವರ್ಷಗಳಿಂದ ಕೋವಿಡ್ ಮಹಾಮಾರಿ ಸೋಂಕು ಹೆಚ್ಚಿದ್ದರಿಂದ ಗಣೇಶ ಚತುರ್ಥಿಗೆ ತೀವ್ರ ಕಟ್ಟುನಿಟ್ಟಿನ ಸೂಚನೆಗಳಿದ್ದವು . ಈ ಬಾರಿ ಅದ್ದೂರಿಯಾಗಿ ಗಣೇಶೋತ್ಸವದ ತಯಾರಿಯಲ್ಲಿ ತೊಡಗಿದ್ದ ಮಂಡಳಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೆಲ ನಿಯಮಗಳನ್ನು ವಿಧಿಸಿದ್ದು ಈ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಗಣೇಶೋತ್ಸವ ಆಚರಿಸುವಂತೆ ತಿಳಿಸಲಾಗಿದೆ, ಈ ಕುರಿತಾಗಿ ಬಾಳೆಹೊನ್ನೂರಿನಲ್ಲಿ ನಡೆದ ಜನಸಂಪರ್ಕ ...

ಕೊಪ್ಪ,ಆಟೋ ಚಾಲಕ ಪ್ರದೀಪ್ ಸಾವಿನ ಸುತ್ತ ಅನುಮಾನಗಳ ಹುತ್ತ,

Image
  ಆಟೋ ಚಾಲಕ ದೀಪ್ ಸಾವು ಅನುಮಾನಕ್ಕೆ ಕಾರಣವಾಗಿದೆ . ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ ? . ಕೂಡಲೇ ತನಿಖೆ ನಡೆಸಿ ದೀಪಕ್ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಟೋ ಚಾಲಕರು ಕೊಪ್ಪ ಪೊಲೀಸ್ ಠಾಣೆ ಎದುರು ಜಮಾಯಿಸಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು, ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಚೌಕಿ ಸಮೀಪದ ಕೆಸವೆ ಗ್ರಾಮದ ಆಟೋ ಚಾಲಕ ಪ್ರದೀಪ್ ಸಿ . ( ಚೌಕಿ ಪ್ರದೀಪ್ ) ( 36 ) ಅವರ ಮೃತದೇಹ ಇಂದು ಕೆಸವೆಗೆ ತೆರಳುವ ಮಾರ್ಗದಲ್ಲಿನ ಚೌಕಿ ಲೇಔಟ್ ಸಮೀಪ ಮುಸುರೇಹಳ್ಳದಲ್ಲಿ ಪತ್ತೆಯಾಗಿದೆ . ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ . ಪ್ರದೀಪ್ ಸಾವಿನ ಕುರಿತಾಗಿ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.  🖋 ಮಜೀದ್ ಕೊಪ್ಪ,

ತನ್ನ ಆರಾಧ್ಯದೈವ ಶಿವರಾಜ್ ಕುಮಾರ್ ಅವರನ್ನು ಭೇಟಿಯಾದ ಕಾಫಿನಾಡು ಚಂದು - ಶಿವಣ್ಣನ ಮುಂದೆ ನಿಂತು ಹಾಡು ಹಾಡಿದ ಕಾಫಿನಾಡು ಚಂದು,

Image
  ಕಾಫೀ ನಾಡು ಚಂದು ಬಹುಶಃ ಇದೊಂದು ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದಾನೆ ಚಿಕ್ಕಮಗಳೂರಿನ ಈ ಸಾಮಾನ್ಯ ಆಟೋ ಚಾಲಕ. ಮಾತೆತ್ತಿದರೆ ನಾನು ಶಿವಣ್ಣ ಮತ್ತು ಪುನೀತಣ್ಣನವರ ಅಭಿಮಾನಿ ಎಂದು ಹೇಳುತ್ತಾ ತನ್ನ ವಿಚಿತ್ರ ಬರ್ತ್ ಡೇ ಸಾಂಗ್ ಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದವರು ಕಾಫಿ ನಾಡು ಚಂದು.ಇವರು ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಎಂದರೆ ಈ ಬಾರಿಯ ಬಿಗ್ ಬಾಸ್ ಗೆ ಇವರು ಹೋಗೋದು ಪಕ್ಕಾ ಎಂದು ಹೇಳಲಾಗ್ತಾ ಇತ್ತು. ಆದರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಚಂದು ಹೆಸರು ಮಿಸ್ ಆದರೂ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅಥವಾ ಟಿವಿ ಬಿಗ್ ಬಾಸ್ ಗೆ ಹೋಗೇ ಹೋಗ್ತಾರೆ ಅಂತ ಅವರ ಅಭಿಮಾನಿಗಳು ಭರವಸೆ ಇಟ್ಟಿದ್ದಾರೆ. ಇತ್ತೀಚಿಗೆ ಕಾಫೀ ನಾಡು ಚಂದು ನಾನು ಎಷ್ಟೇ ವಿನಂತಿ ಮಾಡಿದರೂ ನನ್ನನ್ನು ನನ್ನ ಆರಾಧ್ಯ ದೈವ ಶಿವಣ್ಣನಿಗೆ ಒಮ್ಮೆಯೂ ಭೇಟಿ ಮಾಡಿಸಿಲ್ಲ ಎಂದು ಅಳುತ್ತ ಒಂದು ವಿಡಿಯೋ ಮಾಡಿದ್ದರು. ಅದಕ್ಕಾಗಿ ಅವರು ಆ್ಯಂಕರ್ ಅನುಶ್ರೀ ಅವರಿಗೆ ದುಂಬಾಲು ಬಿದ್ದಿದ್ದರು. ಈ ವಿಡಿಯೋ ಕೂಡ ತುಂಬಾ ವೈರಲ್ ಆಗಿತ್ತು . ಇದೀಗ ಅವರ ಬಹುದಿನದ ಕನಸು ಅವರ ಆರಾಧ್ಯ ದೈವ ಹ್ಯಾಟ್ರಿಕ್ ಹೀರೋ ಶಿವಣ್ಣನನ್ನು ಭೇಟಿ ಮಾಡುವ ಸುದಿನ ಕಾಫೀ ನಾಡು ಚಂದು ಗೆ ಬಂದಿದೆ. ಅದೂ ಕೂಡ ಕರ್ನಾಟಕದ ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ಮೂಲಕ,

ಕುವೈತ್,ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕುವೈತ್ ರಾಷ್ಟ್ರೀಯ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

Image
  ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕುವೈತ್ ರಾಷ್ಟ್ರೀಯ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ KSWA ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ದೇಶದ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮವು KSWA ಕುವೈತ್ ರಾಷ್ಟ್ರೀಯ ಅಧ್ಯಕ್ಷ ಮಾಹಿನ್ ಸಖಾಫಿ ಅಯ್ಯಂಗೆರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯ ಮೊದಲಿಗೆ kswa ಕುವೈಟ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಮಾಹಿನ್ ಸಖಾಫಿ ಉಸ್ತಾದ್ ರವರು ದುಃಅ ನೆರೆವೇರಿಸಿದರು ನಂತರ ಪ್ರ ಕಾರ್ಯದರ್ಶಿ ಜನಾಬ್ ಇಸ್ಮಾಯಿಲ್ ಅಯ್ಯಂಗೇರಿ ಸ್ವಾಗತ ಕೋರಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಮಾತನಾಡಿದರು ಹಾಗು ಶಿಕ್ಷಣ ವಿಬಾಗ ಅಧ್ಯಕ್ಷರಾದ ಬಹು ಬಶೀರ್ ಸಖಾಫಿ ಉಸ್ತಾದ್ ರವರು ಮಾತನಾಡಿದರು ವೇದಿಕೆಯಲ್ಲಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ರಹೀಮ್ ಕೊಳಕೇರಿ .ಅಬ್ದುಲ್ ರಹಮಾನ್ ಪಾರಪಳ್ಳಿ ಮುಂತಾದ ಕಾರ್ಯಕರ್ತರು ಪಾಲ್ಗೊಂಡಿದ್ದರು. ವರದಿ ಬಾದುಷಾ ಸಖಾಫಿ ಮಾದಾಪುರ
Image
  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅರಳಿಕೊಪ್ಪ ನಿವಾಸಿ ಸುರೇಶ್ ಕೆ.ಕೆ ಎಂಬುವವರ ಮನೆಯ ಗಾಡೇಜ್ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಸರ , ಕಿವಿ ಓಲೆ , 03 ಉಂಗುರಗಳು , 1 ಗ್ರಾಂ ನ ಗುಂಡು , ಕಿವಿಯ ಬುಗುಡಿ , ಹಾಗೂ 35000 ರೂಪಾಯಿ ನಗದನ್ನು ಕಳ್ಳತನ ನಡೆಸಿ ಎಸ್ಕೆಪ್ ಆಗಿದ್ದಾರೆ ಎಂಬುದಾಗಿ ಮನೆಯವರು ದೂರು ನೀಡಿದ್ದಾರೆ . ಯಾವುದೇ ಸುಳಿವು ಅಥವಾ ಕಳ್ಳತನ ಆದ ಕುರಿತಾದ ಯಾವುದೇ ಮಾಹಿತಿಗಳು ಲಭ್ಯವಾಗದಂತೆ ಕಳ್ಳರು ಕೈಚಳಕ ತೋರಿದ್ದಾರೆ . ಆಗಸ್ಟ್ 16 ರಂದು ಮನೆಯ ಬೆಡ್ ರೂಮ್ ನಲ್ಲಿರುವ ಗಾಡೇಜ್ ಬೀರೂವನ್ನು ಸುರೇಶ್ ಅವರು ನೋಡಿದಾಗ ಹಣ ಹಾಗೂ ಆಭರಣ ಇಲ್ಲದೇ ಇರುವುದು ಗೊತ್ತಾಗಿದೆ . ಈ ಸಂಬಂಧ ಬಾಳೆಹೊನ್ನೂರು ಠಾಣೆಗೆ ದೂರು ನೀಡಿರುವ ಅವರು ಆಗಸ್ಟ್ 10 ರಿಂದ 16 ರ ಬೆಳಗ್ಗೆ 7.30 ರ ಒಳಗೆ ಕಳ್ಳತನ ನಡೆದಿದೆ , ಅಂದಾಜು 175,500 ರೂಪಾಯಿ ಮೌಲ್ಯದ ಒಡವೆಗಳು ಹಾಗೂ 35,000 ರೂಪಾಯಿ ನಗದು ಇವುಗಳನ್ನು ಕಳ್ಳರು ಕದ್ದೊಯ್ದಿದ್ದು ಈ ಕೃತ್ಯವನ್ನು ಎಸಗಿದ ಕಳ್ಳನನ್ನು ಪತ್ತೆ ಮಾಡಿ ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ್ದಾರೆ . ಘಟನಾ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಬಾಳೆಹೊನ್ನೂರು ಠಾಣೆಯ ಪೊಲೀಸರು ಈ ಸಂಬಂಧ ಹೆಚ್ಚಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ, 🖊️ ವೀರಮಣಿ ಬಾಳೆಹೊನ್ನುರು

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಕಾರ್ಯಕ್ರಮ,

Image
ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಕಾರ್ಯಕ್ರಮ, ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ದೇಶದ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮವು KCF ಕುವೈತ್ ರಾಷ್ಟ್ರೀಯ ಅಧ್ಯಕ್ಷ ಹುಸೈನ್ ಎರ್ಮಡ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ಅಧ್ಯಕ್ಷರಾದ ಬಹು ಸಾವುಲ್ ಹಮೀದ್ ಸಅದಿ ಝುಹುರಿ ಉಸ್ತಾದ್ ರವರು ದುಃಅ ನೆರೆವೇರಿಸಿದರು ನಂತರ ಇಹ್ಸಾನ್ ಅಧ್ಯಕ್ಷ ಬಹು ಉಮರುಲ್ ಫಾರೂಕ್ ಸಖಾಫಿ ಸ್ವಾಗತ ಕೋರಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಮಾತನಾಡಿದರು ಹಾಗುಸಂಘಟನಾ ವಿಭಾಗ ಅಧ್ಯಕ್ಷರಾದ ಬಹು ಉಮರ್ ಝುಹುರಿ ಉಸ್ತಾದ್ ರವರು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಉದ್ಘಾಟನೆ ಗೈದು ಸವಿ ವಿವರವಾಗಿ ಮಾತನಾಡಿದರು ಅದೇ ರೀತಿ ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು ಹುಸೈನ್ ಎರ್ಮಡ್ ಉಸ್ತಾದರು ಅಧ್ಯಕ್ಷ ಭಾಷಣ ಗೈದು ವೇದಿಕೆಯಲ್ಲಿ ರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗದ ಕಾರ್ಯದರ್ಶಿಜನಾಬ್ ಅಬ್ದುಲ್ ಮಲಿಕ್ ಸೂರಿಂಜೆ ಹಾಜರಿದ್ದು ಆಶಂಸ ಭಾಷಣ ವನ್ನು ರಾಷ್ಟ್ರೀಯ ಸಮಿತಿಯ ಪಬ್ಲಿಕೇಶನ್ ವಿಭಾಗದ ಕಾರ್ಯದರ್ಶಿ ಜನಾಬ್ ಇಬ್ರಾಹಿಂ ವೇಣೂರು ರಾಷ್ಟ್ರೀಯ ಸಮಿತಿ ಸದಸ್ಯರಾದ ಜನಾಬ್ ಸಂಸುಂದ್ದಿನ್ ಬೆಜ್ಜವಳ್ಳಿ, ಸೌತ್ ಝೋನ್ ಕಾರ್ಯದರ್ಶಿ ಜನಾಬ್ ಮುನೀರ್ ಕ...

ಗ್ಯಾಸ್ ಕಟರ್ ನಿಂದ ಕಿಟಕಿಯ ರಾಡು ತುಂಡರಿಸಿ ಲಕ್ಷಾಂತರ ರೂಪಾಯಿ ಹಣವನ್ನು ಎಗರಿಸಿದ ಖದೀಮರು,

Image
  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಿರೇಗದ್ದೆ ಇಲ್ಲಿನ ಕಿಟಕಿಯ ಸರಳುಗಳನ್ನು ಗ್ಯಾಸ್ ಕಟರ್ ನಿಂದ ತುಂಡುಮಾಡಿ , ಕಳ್ಳರು ಆಫೀಸಿನ ಕ್ಯಾಶ್ ಬೋರ್ಡ್ ನಲ್ಲಿದ್ದ 325,000 ರೂಪಾಯಿ ನಗದು ಹಾಗೂ 8000 ರೂಪಾಯಿ ಬೆಲೆ ಬಾಳುವ ಹಾರ್ಡ್ ಡಿಸ್ಕ್ ನ್ನು ಕಳ್ಳತನ ನಡೆಸಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ಜಿ.ಆರ್ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ . ಸ್ವಾತಂತ್ರ್ಯ ದಿನಾಚರಣೆಯಾದ ನಿನ್ನೆ ಇಲ್ಲಿನ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಧ್ವಜಾರೋಹಣ ನಡೆಸಿ ಬೆಳಗ್ಗೆ 10.30 ಕ್ಕೆ ನಿರ್ಗಮಿಸಿದ್ದು ಈ ಅವಧಿಯಿಂದ ಇಂದು ಬೆಳಗ್ಗೆ 10.30 ರ ಒಳಗಿನ ಅವಧಿಯಲ್ಲಿ ಕಳ್ಳರು ಹಣವನ್ನು ದೋಚಿರಬಹುದು ಎನ್ನಲಾಗಿದೆ . ಘಟನಾ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು , ಪ್ರಕರಣದ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ತನಿಖೆಯ ಬಳಿಕವಷ್ಟೇ ಈ ಕುರಿತಾದ ಸಂಪೂರ್ಣ ಮಾಹಿತಿ ಹೊರಬೀಳಲಿದೆ . 🖊️ ವೀರಮಣಿ,ಬಾಳೆಹೊನ್ನುರು 

ಕೊಪ್ಪ, ರಾಘವೇಂದ್ರ ನಗರದ ನೂರುಲ್ ಆಲಂ ಜುಮ್ಮಾ ಮಸೀದಿಯಲ್ಲಿ,ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

Image
  ಕೊಪ್ಪ, ರಾಘವೇಂದ್ರ ನಗರದ ನೂರುಲ್ ಆಲಂ ಜುಮ್ಮಾ ಮಸೀದಿಯಲ್ಲಿ,ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಸೀದಿಯ ಕಾರ್ಯದರ್ಶಿಗಳಾದ ಶಫಿ ಅಹ್ಮದ್ ರವರು, ಸ್ವಾಗತಾ ಭಾಷಣವನ್ನು ಕೋರಿದರು. ಕಾರ್ಯಕ್ರಮದ ಗೌರವಾಧ್ಯಕ್ಷತೆನ್ನು ವಹಿಸಿದ್ದ ಅಹ್ಮದ್ ಹಾಜಿಯವರ ನೇತೃತ್ವದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಸಮವಸ್ತ್ರಧಾರಿಗಳಾಗಿದ್ದ ಮದರಸ ಮಕ್ಕಳೊಂದಿಗೆ, ಸಭಿಕರೆಲ್ಲರೂ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ರಾಷ್ಟ್ರಧ್ವಜಕ್ಕೆ ಗೌರವಾರ್ಪಿಸಿದರು. ಮಸೀದಿಯ ಮುಖ್ಯ ಗುರುಗಳಾದ ಅಬ್ದುಲ್ಲ ದಾರಿಮಿ ಸ್ವಾತಂತ್ರ್ಯೋತ್ತರ ಭಾರತದ ಚರಿತ್ರೆಯನ್ನು ನೆನಪಿಸುತ್ತಾ,ಸ್ವಾತಂತ್ರ್ಯಕ್ಕಾಗಿ ಜೀವವನ್ನು ಮುಡಿಪಾಗಿಟ್ಟ ಹೋರಾಟಗಾರರಿಗೆ ಪ್ರಾರ್ಥಿಸುವುದರ ಮೂಲಕ ಗೌರವ ನಮನಗಳನ್ನು ಸಲ್ಲಿಸಿ ಮಾದರಿಯಾದರು. ಮಸೀದಿಯ ಅಧ್ಯಕ್ಷರಾಗಿದ್ದ ಹಂಝ ಏ.ಬಿ.ಏ ,ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ನಾರ್ವೆ(ಅದ್ಧಾಕ),ಖಜಾಂಚಿಗಳು  ಹಾಗೂ ಗ್ರಾಮಪಂಚಾಯತಿ ಮಾಜಿ ಉಪಾಧ್ಯಕ್ಷರು,ಹಾಲಿ ಸದಸ್ಯ ಸ್ಥಾನವನ್ನು ಅಲಂಕರಿಸಿರುವ ಫೈರೋಝ್,ಗ್ರಾಮಪಂಚಾಯತಿ ಸದಸ್ಯರುಗಳಾದ ಪದ್ಮ ಟೀಚರ್,ಶೃತಿಯವರುಗಳು ಸಭೆಯನ್ನುದ್ದೇಶಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲಘುಉಪಹಾರದೊಂದಿಗೆ ಸಿಹಿ ಹಂಚಲಾಯಿತು. ✒️...ಮುಹಮ್ಮದ್ ಸುಫೈದ್ ಕೊಪ್ಪ

ಕಾರ್ಕಳ,ಮದರಸತುಲ್ಲ್ ಬದ್ರಿಯಾ ಜುಮ್ಮಾ ಮಸೀದಿ,ಜರಿಗುಡ್ಡೆ

Image
  ಕಾರ್ಕಳ:- ಅಲ್ ಮದರಸತುಲ್ಲ್ ಬದ್ರಿಯಾ ಜುಮಾ ಮಸೀದಿ (ರಿ ) ಜರಿಗುಡ್ಡೆ ಕಾರ್ಕಳ ಉಡುಪಿ ಜಿಲ್ಲೆ ಇವರ ವತಿಯಿಂದ ಮಾದರಿ ಸ್ವಾತಂತ್ರ್ಯ ಸ್ವರ್ಣ ಮಹೋತ್ಸವ ಸಲುವಾಗಿ ಬೆಳಿಗ್ಗೆ ಸಮಯ 7 ಕ್ಕೆ ಸರಿಯಾಗಿ ಧ್ವಜಾರೋಹಣ ನಡೆಸಲಾಗುವುದು ಎಂದು ಬದ್ರಿಯಾ ಮಸೀದಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಝಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು,                     ಈ ಕಾರ್ಯಕ್ರಮಕ್ಕೆ ಶುಭ ಕೋರುವವರು                                 ಯಾಕೂಬ್ ಕಾರ್ಕಳ   ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ

ನಿಶ್ಚಿತಾರ್ಥದ ಬೆನ್ನಲ್ಲೇ ಪ್ರಿಯಕರನ ಆತ್ಮಹತ್ಯೆ: ವಿಷಯ ತಿಳಿದು ಯುವತಿಯೂ ನೇಣಿಗೆ ಶರಣು

Image
  ಬೀದರ್: ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗಾಂಧಿಗಂಜ್ ನಲ್ಲಿ ಕಳೆದ ರಾತ್ರಿ ನಡೆದಿದೆ. ಗಾಂಧಿಗಂಜ್ ನ ಲಾಡಗೇರಿ ಬಡಾವಣೆಯ ಶರತ್ (28) ಹಾಗೂ ಸಂಗೀತಾ (26) ಆತ್ಮಹತ್ಯೆಗೆ ಶರಣಾದವರು. ಇಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಸಂಗೀತಾ ನಿಶ್ಚಿತಾರ್ಥ ಬೇರೊಂದು ಹುಡುಗನ ಜತೆ ನಡೆದಿತ್ತು. ಶೀಘ್ರದಲ್ಲಿ ಮದುವೆ ಸಹ ನಡೆಯಬೇಕಿತ್ತು. ಇದರಿಂದ ಮನನೊಂದು ಶರತ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಪ್ರಿಯಕರನ ಸಾವಿನ ಸುದ್ದಿ ಕೇಳಿ ಸಂಗೀತಾ ತನ್ನ ಮನೆಯಲ್ಲಿನ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯಯಿಂದ ಎರಡು ಕುಟುಂಗಳ ಸದಸ್ಯರು ಕಂಗಾಲಾಗಿದ್ದಾರೆ. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಸಿಎಫ್ ಕುವೈಟ್ ನೋರ್ತ್ ಝೋನ್ ವತಿಯಿಂದ ಹಿಜರಿ ಸಂದೇಶ ಕಾರ್ಯಕ್ರಮ ಹಾಗೂ ಆತ್ಮೀಯ ಸಂಗಮ

Image
  ಕೆಸಿಎಫ್ ಕುವೈಟ್ ನೋರ್ತ್ ಝೋನ್ ವತಿಯಿಂದ ಹಿಜರಿ ಸಂದೇಶ ಕಾರ್ಯಕ್ರಮ ಹಾಗೂ ಆತ್ಮೀಯ ಸಂಗಮ   ಹಿಜರಿ ಇಸ್ಲಾಂ ಚರಿತ್ರೆಯ ಮೈಲುಗಲ್ಲು ಕೆಸಿಎಫ್ ಕುವೈತ್ ನೋರ್ತ್ ಝೋನ್ ವತಿಯಿಂದ ಹಿಜರೀ ಸಂದೇಶ ಕಾರ್ಯಕ್ರಮ, ದಿನಾಂಕ: 05/08/2022 ಶುಕ್ರವಾರ ಸ್ಥಳ ಫರ್ವನಿಯಾ ತಾಜುಲ್ ಉಲಮಾ ಕೆಸಿಎಫ್ ಸೆಂಟರ್ ನಲ್ಲಿ ಕೆಸಿಎಫ್ ನೋರ್ತ್ ಝೋನ್  ಶಿಕ್ಷಣ ಅಧ್ಯಕ್ಷ ಬಹು ಬಶೀರ್ ಸಖಾಫಿ   ಅಧ್ಯಕ್ಷತೆ ಯಲ್ಲಿ ಹಾಗೂ ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷ ಬಹುಮಾನ್ಯ   ಉಮರ್ ಝುಹುರಿ ರವರ ಪ್ರಾಥನೆ ಯೊಂದಿಗೆ ನೋರ್ತ್ ಝೋನ್ ಸಂಘಟನಾ ಕಾರ್ಯದರ್ಶಿ ಇಲ್ಯಾಸ್ ಮೊಂಟುಗೋಳಿ ರವರು ಸ್ವಾಗತಿಸಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಡ್ ರವರು ಉದ್ಘಾಟಿಸಿ ಅಧ್ಯಕ್ಷ ಭಾಷಣ ವನ್ನು ಬಹು ಬಸೀರ್ ಸಖಾಫಿ ಮಾಡಿದರು ಹಿಜಿರಾ ಸಂದೇಶ ವನ್ನು ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಅಧ್ಯಕ್ಷ ಬಹುಮಾನ್ಯ ಬಾದುಶಾ ಸಖಾಫಿ ಸವಿ ವಿವರವಾಗಿ  ತಿಳಿಸಿದರು,  ಅಸಂಸ  ಭಾಷಣ ವನ್ನು   ರಾಷ್ಟ್ರೀಯ ಸಮಿತಿಯ ಪಬ್ಲಿಕೇಶನ್ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿ ಅದೇ ರೀತಿ    ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷರಾದ ಬಹುಮಾನ್ಯ ಉಮರ್ ಝುಹುರಿ ಉಸ್ತಾದ್  ಮತ್ತು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಹಾಜಿ ಮೂಸ ಇಬ್ರಾ...

ಕೆಸಿಎಫ್ ಕುವೈಟ್ ಈದ್ ಮಿಲಾದ್ ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಆಯ್ಕೆ.

Image
ಕೆಸಿಎಫ್ ಕುವೈಟ್ ಈದ್ ಮಿಲಾದ್ ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಆಯ್ಕೆ. ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಅಕ್ಟೋಬರ್  14 ರಂದು  ನಡೆಯುವ  ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು  ದಿನಾಂಕ 05/08/22 ಶುಕ್ರವಾರ ಅಸರ್ ನಮಾಝ್ ನ ನಂತರ ಫರ್ವಾನಿಯ ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷರಾದ ಬಾದುಶ ಸಖಾಫಿ ಮಾದಪುರ ಯವರ ದುವಾದೊಂದಿಗೆ ಆರಂಭವಾಯಿತು.ಕೆಸಿಎಫ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಉಮರ್ ಝುಹ್ರಿ ಸ್ವಾಗತ ಕೋರಿದರು. ಚೇರ್ಮ್ಯಾನ್ : _ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ _ ವೈಸ್  ಚೇರ್ಮ್ಯಾನ್ : _ ಅಬ್ಬಾಸ್ ಬಳಂಜ _ ಜನರಲ್ ಕನ್ವೀನರ್ :   _ ಯಾಕೂಬ್ ಕಾರ್ಕಳ _ ಜೊತೆ ಕನ್ವೀನರ್ : _ ಸಮೀರ್ ಕೆ,ಸಿ ರೋಡ್ _ ಫೈನಾನ್ಸಿಯಲ್ ಛೇರ್ಮನ್ :ಮೂಸ ಇಬ್ರಾಹಿಂ ಕನ್ವಿನರ್ :ಇಕ್ಬಾಲ್ ಕಂದಾವರ ಸೊವನೀರ್ ಜಾಹಿರಾತು ಚೇರ್ಮ್ಯಾನ್ :  ಬಾದುಶ ಸಖಾಫಿ ಮಾದಪುರ ಕನ್ವೀನರ್ : ಇಬ್ರಾಹಿಮ್ ವೇಣೂರ್ ಮಾಲಿಕ್ ಸೂರಿಂಜೆ ವಹೀಬ್ ಕೆ.ಸಿ.ರೋಡ್ ಮೀಡಿಯಾ ಮತ್ತು ಪ್ರಚಾರ ವಿಭಾಗ ಚೇರ್ಮ್ಯಾನ್ :  ಮುಸ್ತಫ ಉಳ್ಳಾಲ ಕನ್ವೀನರ್ : ಇಸ್ಮಾಯಿಲ್ ಅಯ್ಯಂಗೇರಿ ಹಸೈನಾರ್ ಮೊಂಟೆಪದವು ಊಟೋಪಚಾರದ ವ್ಯವಸ್ಥೆ...

ಚಿಕ್ಕಮಗಳೂರು:- ನೂತನ ಪೊಲೀಸ್ ವರಿಷ್ಠಾಧಿಕಾರಿ ಆಗಿ ಉಮಾ ಪ್ರಶಾಂತ್ ನೇಮಕ,

Image
ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕರಾಗಿದ್ದ ಅಕ್ಷಯ್ ಎಂ ಹಾಕೆ , IPS ಅವರನ್ನು ಚಿಕ್ಕಮಗಳೂರಿನಿಂದ ವರ್ಗಾವಣೆಗೊಳಿಸಿ ಸರ್ಕಾರದ ಆದೇಶ ಹೊರಡಿಸಿದೆ . ಚಿಕ್ಕಮಗಳೂರಿನ ನೂತನ ಎಸ್ಪಿಯಾಗಿ ಎಸಿಬಿ ವಿಭಾಗದ ಉಮಾ ಪ್ರಶಾಂತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ . ಮಹಿಳಾ ಐಪಿಎಸ್ ಉಮಾ ಪ್ರಶಾಂತ್ ಅವರು ಎಸಿಬಿ ಬೆಂಗಳೂರಿನ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು, ಚಿಕ್ಕಮಗಳೂರು ಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದ ಅಕ್ಷಯ್ ಹಾಕೆ ಅವರು ವರ್ಗಾವಣೆಗೊಂಡಿದ್ದು , ಅವರಿಂದ ತೆರವಾದ ಸ್ಥಾನಕ್ಕೆ ಮಹಿಳಾ ಎಸ್ಪಿ ಉಮಾ ಪ್ರಶಾಂತ್ ನೇಮಕಗೊಂಡಿದ್ದಾರೆ . ಈ ಹಿಂದೆ ಉಮಾ ಪ್ರಶಾಂತ್ ಅವರ ನೇತೃತ್ವದ 100 ಕ್ಕೂ ಹೆಚ್ಚು ಅಧಿಕಾರಿಗಳನ್ನು ಹೊಂದಿದ್ದ ಎಸಿಬಿ ಅಧಿಕಾರಿಗಳ ತಂಡವು ಏಕಕಾಲದಲ್ಲಿ ಬೆಂಗಳೂರಿನ 09 ಕಡೆಗಳಲ್ಲಿ ದಾಳಿ ನಡೆಸಿದ್ದರು, 🖊️ ವೀರಮಣಿ  

ಜಯಪುರ,ಬೈಕಿಗೆ ಡಿಕ್ಕಿ ಹೊಡೆದ ಕಾರ್, ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಘಟನೆ ಶಾಂತಿಪುರದಲ್ಲಿ ನಡೆದಿದೆ,

Image
  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಪುರದ ಬಳಿ ಮಾರುತಿ ರಿಟ್ಸ್ ಕಾರು ಹಾಗೂಪಲ್ಸರ್ ಬೈಕ್ ನಡುವೆ ಭೀಕರ ಅಪಘಾತ, ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಗುದ್ದಿದ್ದ ಕಾರು ರಸ್ತೆ ಬದಿಯಲ್ಲಿದ್ದ ಮನೆಯೊಂದಕ್ಕೆ ಗುದ್ದಿ ಮಗುಚಿ ಬಿದ್ದಿದೆ . ಕಾರು ಗುದ್ದಿದ ರಭಸಕ್ಕೆ ಮನೆಯ ಗೋಡೆ ಕುಸಿದು ಬಿದ್ದಿದ್ದು , ಮನೆಯಲ್ಲಿದ್ದವರಿಗೆ ಯಾವುದೇ ಅಪಾಯಕ್ಕೊಳಗಾಗಾದೆ ಸುರಕ್ಷಿತವಾಗಿದ್ದಾರೆ . ಶುಕ್ರವಾರ ಮಧ್ಯಾಹ್ನ ಬಾಳೆಹೊನ್ನೂರು ಕಡೆಯಿಂದ ಬರುತ್ತಿದ್ದ ಕಾರು ಜಯಪುರ ಕಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಭದ್ರಾವತಿ ಮೂಲದ ಬೈಕಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು , ಆತನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ . ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು , ಕಾರಿನ ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ . 🖋 ವೀರಮಣಿ
Image
  ಡಿವೈಎಸ್ಪಿ ಹುದ್ದೆಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಎಂ ಎ ನಟರಾಜ್ ಮಂಗಳ ಪದೋನ್ನತಿ. -ತೀರ್ಥಹಳ್ಳಿ ತಾಲೂಕಿಗೆ ಮತ್ತೊಂದು ಗರಿ -ಎಲ್ಲೆಡೆ ನಟರಾಜ್ ರವರಿಗೆ ಮೆಚ್ಚುಗೆ    ಶಿವಮೊಗ್ಗ :ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಸಮೀಪದ ಮಂಗಳದ ಶ್ರೀ ಅಣ್ಣಪ್ಪ ಗೌಡ್ರು ಮತ್ತು ಶ್ರೀಮತಿ ಕಮಲಮ್ಮ ಅವರ ಸುಪುತ್ರ ಎಂಎ ನಟರಾಜ್ ಅವರು ಪಿಎಸ್ಐ ಮೂಲಕ ಪೋಲಿಸ್ ಇಲಾಖೆಗೆ ಸೇರಿ ಶೃಂಗೇರಿ,ಸಾಗರ,ದಾವಣಗೆರೆ ಚಿತ್ರದುರ್ಗ,ಬೆಂಗಳೂರು ಸುರತ್ಕಲ್,  ಮಂಗಳೂರಿನಲ್ಲಿ  ಪೋಲಿಸ್ ಇಲಾಖೆಯ  ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಮೆಚ್ಚುಗೆಯ ಪಾತ್ರರಾಗಿದ್ದು, ಇಲಾಖೆಯ  ಪ್ರಶಂಸೆಗೂ ಕಾರಣರಾಗಿದ್ದಾರೆ. ಎಂ ಎ  ನಟರಾಜ್ ಅವರು ಶೃಂಗೇರಿ ಸಮೀಪದ ಮೆಣಸಿನಹಾಡ್ಯದಲ್ಲಿ ನಡೆದ ನಕ್ಸಲ್ ನಾಯಕ ಸಾಕೆತ್ ರಾಜನ್  ಎನ್ಕೌಂಟರ್ ಮಾಡಿದ ಒಂದು ತಂಡದ ಮುಖ್ಯಸ್ಥರಾಗಿದ್ದರು ಎನ್ನುವುದು ಸಹ ತೀರ್ಥಹಳ್ಳಿ ಜನತೆಗೆ ಅತ್ಯಂತ ಪ್ರಶಂಸನೀಯ  ವಿಚಾರ,ಪ್ರಸ್ತುತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ, ಬಳ್ಳಾರಿ ಜಿಲ್ಲೆಗೆ ಪದೋನ್ನತಿ ಗೊಂಡಿದ್ದು ಮುಂದಿನ ಅವರ ವೃತ್ತಿ ಜೀವನ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇವೆ...‌ ಸಂಗ್ರಹ:-ವೀರಮಣಿ