Posts

Showing posts from November, 2021

ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ, ಸುಳ್ಳುಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ, ಸಚಿವ ಸುಧಾಕರ್

Image
 ಬೆಂಗಳೂರು: ದಕ್ಷಿಣ ಆಫ್ರಿಕಾ ಸೇರಿದಂತೆ ಮತ್ತಿತರ ರಾಷ್ಟ್ರಗಳಲ್ಲಿ ಓಮಿಕ್ರಾನ್ ಹೊಸ ತಳಿಯ ಸೋಂಕು ಕಾಣಸಿಕೊಂಡಿರುವುದರಿಂದ ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಒಂದು ವೇಳೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಒಂದು ಮತ್ತು ಎರಡನೇ ಅಲೆಯಿಂದಾಗಿ ಅನಾರೋಗ್ಯ ಸಮಸ್ಯೆ, ಲಾಕ್ ಡೌನ್ ನಿಂದ ಆರ್ಥಿಕವಾಗಿ ಈಗಾಗಲೇ ಜನರು ಬಹಳಷ್ಟು ನೊಂದಿದ್ದಾರೆ. ಬಹಳ ನಷ್ಟ ಅನುಭವಿಸಿದ್ದಾರೆ. ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಹೀಗಾಗಿ ಮತ್ತೆ ಮತ್ತೆ ಆತಂಕ, ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುವುದಿಲ್ಲ, ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹಬ್ಬುತ್ತಿದೆ. ಹೀಗೆ ಲಾಕ್ ಡೌನ್ ನ ಸುಳ್ಳು ಸುದ್ದಿ ಹಬ್ಬಿಸಿ ಜನರಲ್ಲಿ ಭಯ, ಆತಂಕ ಸೃಷ್ಟಿಸುವುದು ಬೇಡ, ಗೊಂದಲಮಯ ಸುದ್ದಿ ಹಾಕುವುದು ಬೇಡ ಎಂದರು. ಡೆಲ್ಟಾಕ್ಕೆ ಹೋಲಿಸಿದರೆ ಇದರ ಪರಿಣಾಮ ಯಾವ ರೀತಿ ಹಬ್ಬುತ್ತದೆ ಎಂಬುದರ ಬಗ್ಗೆ ಈವರೆಗೂ ದೃಢಪಟ್ಟಿಲ್ಲ. ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ನನಗಿರುವ ಮಾಹಿತಿಯಂತೆ ಡೆಲ್ಟಾಕ್ಕೆ ಹೋಲಿಸಿದರೆ ಓಮಿಕ್ರಾನ್ ವೇಗವಾಗಿ ಹಬ್ಬಿದರೂ ಅಷ್ಟು ಪರಿಣಾಮ ಇರುವುದಿಲ್ಲ ಎಂದು ವೈದ್ಯರು ತಿಳಿಸಿದ್ದ...

ಹೋಟೆಲ್ ಗ್ರೀನ್ ಎಂಬಸ್ಸಿ, ಹಾಗೂ ಸಾಗರದ ಪ್ರತಿಷ್ಟಿತ ಸಂಸ್ಥೆ ಯಾದ SGT ಜಿಂಜರ್, ಮುಖ್ಯಸ್ಥರಿಂದ ರಾಜ್ಯಪಾಲರ ಭೇಟಿ.

Image
  ವರದಿ:-ಮಲೆನಾಡ ರಹಸ್ಯ, *ಶಿವಮೊಗ್ಗ.(ಸಾಗರ):* ಕನಾ೯ಟಕ ಸಕಾ೯ರದ *ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆ ಹ್ಲೋಟ್* ರವರ ಅಧಿಕೃತ ಶಿವಮೊಗ್ಗ ಜಿಲ್ಲೆಯ ಪ್ರವಾಸ ಭೇಟಿಯ ಸಂಧಭ೯ದ ವೇಳೆ *ನವೆಂಬರ 25ರಂದು ವಿಶ್ವವಿಖ್ಯಾತ , ಜೋಗ ಜಲಪಾತಕ್ಕೆ ಕುಟುಂಬ ಸಮೇತ ಆಗಮಿಸಿ ಜಲಪಾತ ವೀಕ್ಷಣೆ ಬಳಿಕ ಶಿವಮೊಗ್ಗದ ಕಾರ್ಯಕ್ರಮಕ್ಕೆ ತೆರಳಿದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರನ್ನು   ಸಾಗರದ ಪ್ರತಿಷ್ಟಿತ ಸಂಸ್ಥೆ ಯಾದ SGT ಜಿಂಜರ್ ಹಾಗೂ ಹೋಟೆಲ್ ಗ್ರೀನ್ ಎಂಬಸ್ಸಿಯ ಮುಖ್ಯಸ್ಥರಾಗಿರುವ ಸಯ್ಯದ್ ಜಹೂರ್ ಮತ್ತು  ಸಯ್ಯದ್ ಶಾಕೀರ್ ರವರು ಶಿವಮೊಗ್ಗದ ಸರ್ಕಿಟ್ ಹೌಸ್ ನಲ್ಲಿ ರಾಜ್ಯಪಾಲರರೊಂದಿಗೆ ಸೌಹಾದ೯ತೆಯ ಭೇಟಿ ಮಾಡಿ* ಮಲೆನಾಡ ಮುಖ್ಯ ಬೆಳೆಗಳ ಬಗ್ಗೆ ವಿವರಿಸಿ, ಮಲೆನಾಡ ಅದರಲ್ಲೂ *ಸಾಗರ ತಾಲ್ಲೂಕಿನ ಪ್ರಮುಖ ಬೆಳೆಗಳಾದ ಅಡಿಕೆ ಮತ್ತು ಶುಂಟಿ ಬೆಳೆಗಳ ಪರಿಸ್ಥಿತಿ ಹಾಗೂ  ರೈತರು ಅನುಭವಿಸುತ್ತಿರವ ವೇದನೆ ಹಾಗೂ ಸಮಸ್ಯೆಗಳನ್ನು ಎಸ್.ಜಿ.ಟಿ. ಸಂಸ್ಥೆಯವರು ಸಮಗ್ರವಾಗಿ ವಿವರಿಸಿದರು, ಸುಮಾರು ಮೂವತ್ತು ನಿಮಿಷಗಳ ಕಾಲ ಇದರ ಬಗ್ಗೆ ಚರ್ಚಿಸಿ. ನಂತರದಲ್ಲಿ ರಾಜ್ಯಪಾಲರು ಸಮಸ್ಯೆಗಳ ಪಟ್ಟಿಯನ್ನು ಅತೀ ಶೀಘ್ರವಾಗಿ ಕಳುಹಿಸಲು  ಸಂಸ್ಥೆಯ ಮುಖ್ಯಸ್ಥರಿಗೆ ತಿಳಿಸಿದರು, ಮಲೆನಾಡ ರೈತರ ಸಂಕಷ್ಟಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಗ್ರೀನ್ ಎಂಬಸ್ಸಿಯ SGT ಮುಖ್ಯಸ್ಥರುಗಳ ನಿಜವಾದ ಕಾಳಜಿ ಶ್ಲಾಫನೀಯ, ರಾಜ್ಯಪ...

ಸೌದಿ ಅರೇಬಿಯಾಕ್ಕೆ ನೇರ ಪ್ರಯಾಣ,ಡಿ,1 ರಿಂದ

Image
 ರಿಯಾದ್( ಸೌದಿ ಅರೇಬಿಯಾ): ಕಳೆದ 2 ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಮರಳಿ ಸೌದಿ ಅರೇಬಿಯಾಗೆ ಬರಲು ಸಂಕಷ್ಟಪಡುತಿದ್ದ ಭಾರತೀಯರಿಗೆ ಸೌದಿ ಸರಕಾರ ಶುಭ ಸುದ್ದಿಯನ್ನು ನೀಡಿದ್ದು ಇನ್ನು ಮುಂದೆ ಯಾವುದೇ ತಡೆಯಿಲ್ಲದೆ ಮರಳಿ ಬರಬಹುದು ಎಂಬ ಅಧಿಕೃತ ಅದೇಶ ಹೊರಡಿಸಿದೆ. ಕೊರೊನಾ ಕಾರಣದಿಂದಾಗಿ ಸೌದಿ ಅರೇಬಿಯಾ ತನ್ನ ದೇಶದ ಪ್ರವೇಶವನ್ನು ತಡೆದು ಹಿಡಿದಿತ್ತು, ತದನಂತರ ವರ್ಷದ ಬಳಿಕ ನೆರಯ ದೇಶಕ್ಕೆ ಪ್ರಯಾಣ ಬಳಿಸಿ ಅಲ್ಲಿ 15 ದಿವಸಗಳ ಕ್ವಾರಂಟೈನ್ ಬಳಿಗೆ ಸೌದಿ ಪ್ರವೇಶಕೆ ಅನುಮತಿ ನೀಡಿತ್ತು. ತುಂಬಾ ದುಬಾರಿ ವೆಚ್ಚದ ಈ ಪ್ರಯಾಣ ಮೊತ್ತವನ್ನು ಭರಿಸಲಾಗದೆ ಲಕ್ಷಾಂತರ ಅನಿವಾಸಿಗಳು ಮರಳಿ ಬರಲಾಗದೆ ಸಂಕಷ್ಟಕ್ಕೆ ಬಿದ್ದಿದ್ದರು.  ಭಾರತ ಸಹಿತ ಈಜಿಪ್ಟ್,ಬ್ರೆಜಿಲ್,ಪಾಕಿಸ್ತಾನ,ಇಂಡೋನೇಷಿಯಾ, ಇನ್ನು ಪ್ರಯಾಣ ಬೆಳೆಸುವವರಿಗೆ ಕೊರೊನಾ ವ್ಯಾಕ್ಸಿನ್ ಕಡ್ಡಾಯವಾಗಿದ್ದು ಸೌದಿ ಅರೇಬಿಯಾದಲ್ಲಿ ಕೇವಲ 5 ದಿನ ಗಳ ಕ್ವಾರಂಟೈನ್ ಪಡೆಯಬೇಕಾಗಿದೆ.

ಗಗನ ಕುಸುಮವಾಗಿ ದಾಖಲೆ ಬರೆದ ಟೊಮೆಟೊ ದರ :ಕೆಜಿಗೆ 150 ರೂ!

Image
  ವರದಿ: ವೇಣುಗೋಪಾಲ್, *ಬೆಂಗಳೂರು* : *ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಪರಿಣಾಮ ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆಜಿಗೆ ಬರೋಬ್ಬರಿ 150 ರೂ ನಂತೆ ಮಾರಾಟವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ.* ಭಾರೀ ಮಳೆಯ ಕಾರಣ ಹೊಲದಲ್ಲಿಯೇ ಟೊಮೋಟೊ ಸೇರಿ ವಿವಿಧ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೇಟೊ ಪೂರೈಕೆಯಾಗುತ್ತಿದೆ. ಇದರ ಪರಿಣಾಮ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ಚಿಲ್ಲರೆ ಮಳಿಗೆಗಳಲ್ಲಿ ಒಂದು ಕೆಜಿಗೆ 150 ರೂ.ನಂತೆ ಮಾರಾಟವಾಗಿದೆ. *ಕಳೆದ 15 -20 ದಿನಗಳಿಂದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ಚಿಲ್ಲರೆ ಮಳಿಗೆಗಳಲ್ಲಿ ಕೆಜಿಗೆ 100 ರೂ.ವರೆಗೂ ತಲುಪಿದ್ದ ದರ ನಂತರ 125 ರೂ.ಗೆ ಈಗ 150 ರೂ.ಗೆ ಏರಿಕೆಯಾಗಿದೆ. ದರ ಇಷ್ಟೊಂದು ಏರಿಕೆ ಆದರೂ ಕೂಡ ಟೊಮೆಟೊ ಬೆಳೆಗಾರರಿಗೆ ಈಗಲೂ ಜುಜುಬಿ ಹಣ ಸಿಗುತ್ತಿದೆ. ದಲ್ಲಾಳಿಗಳು ಮಾತ್ರ ಹಣ ಮಾಡುತ್ತಿದ್ದಾರೆ. ಇತ್ತ ಮಳೆಯಿಂದ ಬೆಳೆ ನಾಶಗೊಂಡು ರೈತರು ತತ್ತರಿಸಿದ್ದಾರೆ.* ಟೊಮೆಟೊ ಮಾತ್ರವಲ್ಲ, ಬಹುತೇಕ ಎಲ್ಲ ತರಕಾರಿಗಳ ದರ ಕೂಡ ಏರಿಕೆಯಾಗಿದೆ. ತರಕಾರಿ ದರ 50 ರಿಂದ 80 ರೂ.ವರೆಗೆ ಇದ್ದು, *ಸೊಪ್ಪಿನ ದರ ಹೆಚ್ಚಳವಾಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ತರಕಾರಿ ಬೆಲೆ ಭಾರಿ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ...

ಮಹಿಳೆಯಿಂದ ಆ್ಯಸಿಡ್ ದಾಳಿ, 28ರ ಹರೆಯದ ಪ್ರಿಯಕರನಿಗೆ,

Image
 *ಇಡುಕ್ಕಿ :* ತಾನು ಮುಂದಿಟ್ಟ ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ ಕಾರಣಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ ಎರಡು ಮಕ್ಕಳ ತಾಯಿಯಾದ 35 ವರ್ಷದ ಮಹಿಳೆ ಆ್ಯಸಿಡ್ ಎರಚಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆಯನ್ನು ಬಂಧಿಸಲಾಗಿದೆ. ಆ್ಯಸಿಡ್ ದಾಳಿಗೆ ಒಳಗಾದ ಅರುಣ್ ಕುಮಾರ್ (28) ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೆಂಬರ್ 16ರಂದು ಶೀಬಾ ಆ್ಯಸಿಡ್ ದಾಳಿ ನಡೆಸಿದ್ದು, ದಾಳಿಗೊಳಗಾದ ವ್ಯಕ್ತಿಯ ದೃಷ್ಟಿ ನಷ್ಟವಾಗುವ ಅಪಾಯ ಇದೆ ಎಂದು ಪೊಲೀಸರು ಹೇಳಿದ್ದಾರೆ. "ಸಂತ್ರಸ್ತ ವ್ಯಕ್ತಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಅರುಣ್ ಹಾಗೂ ಶೀಬಾ ಫೇಸ್‌ಬುಕ್‌ನಲ್ಲಿ ಪರಸ್ಪರ ಪರಿಚಯವಾಗಿದ್ದು, ಮಹಿಳೆಗೆ ವಿವಾಹವಾಗಿ ಇಬ್ಬರು ಮಕ್ಕಳಿರುವುದು ಆ ಬಳಿಕ ಅರುಣ್‌ಗೆ ತಿಳಿದಿದೆ. ಸಂಬಂಧವನ್ನು ಕೊನೆಗೊಳಿಸಲು ಆತ ಬಯಸಿದ್ದ. ಆದರೆ ಮಹಿಳೆ ಆತನನ್ನು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸಿ ಹಣದ ಬೇಡಿಕೆ ಇಟ್ಟಿದ್ದಳು" ಎಂದು ಪೊಲೀಸರು ವಿವರಿಸಿದ್ದಾರೆ. ಕುಮಾರ್ ತಮ್ಮ ಭಾವ ಹಾಗೂ ಸ್ನೇಹಿತನೊಂದಿಗೆ ನವೆಂಬರ್ 16ರಂದು ಆದಿಮಾಲಿ ಚರ್ಚ್‌ಗೆ ತೆರಳಿದ್ದರು. ಅಲ್ಲಿ ಆಕೆ ಹಣಕ್ಕಾಗಿ ಬೇಡಿಕೆ ಇಟ್ಟಳು ಎನ್ನಲಾಗಿದೆ. ಚರ್ಚ್‌ನಲ್ಲಿ ಕುಮಾರ್ ಅವರ ಹಿಂದಿದ್ದ ಮಹಿಳೆ ಮುಂದೆ ಬಂದು ಮುಖಕ್ಕೆ ಆ್ಯಸಿಡ್ ಎರಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಗೂ ಸಣ್ಣಪು...

ಐ ಸಿ ಐ ಸಿ ಐ,ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ನ್ನು ಕೊಚ್ಚಿ ಕೊಲೆಗೈದ ದರೋಡೆಕೋರರು!

Image
ಬಳ್ಳಾರಿ: ಎಟಿಎಂ ದೋಚಲು ಬಂದಿದ್ದ ದುಷ್ಕರ್ಮಿಗಳು ಬ್ಯಾಂಕ್ ಸೆಕ್ಯೂರಿಟಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಐಸಿಐಸಿಐ ಬ್ಯಾಂಕ್ ಎಟಿಎಂ ಬಳಿಯಲ್ಲಿ ನಡೆದಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ರಾತ್ರಿ ವೇಳೆ ಸೆಕ್ಯೂರಿಟಿ ಗಾರ್ಡ್ ಮಲಗಿದ್ದು, ಈ ವೇಳೆ ಬ್ಯಾಂಕ್ ದರೋಡೆಗೆ ಆಗಮಿಸಿದ್ದ ದುಷ್ಕರ್ಮಿಗಳು ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಸವರಾಜ ಎಂಬವರು ಹತ್ಯೆಗೀಡಾದ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಎಟಿಎಂ ಹಾಗೂ ಐಸಿಐಸಿಐ ಬ್ಯಾಂಕ್ ಅಕ್ಕಪಕ್ಕದಲ್ಲೇ ಇದ್ದು, ದರೋಡೆಗೆ ಯತ್ನಿಸಿ ಸೆಕ್ಯೂರಿಟಿ ಗಾರ್ಡ್ ನ್ನು ಹತ್ಯೆ ಮಾಡಿದರೋ ಅಥವಾ ವೈಯಕ್ತಿಕ ವಿಚಾರಕ್ಕೆ ಹತ್ಯೆ ನಡೆದಿದೆಯೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಹತ್ಯೆಗೀಡಾಗಿರುವ ಬಸವರಾಜ್ ಕಳೆದ 10 ತಿಂಗಳಿನಿಂದ ಈ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು:-ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿಯ ಬಂಧನ,

Image
ಮಂಗಳೂರು: ಖಾಸಗಿ ಟಿವಿ ವಾಹಿನಿ ವರದಿಗಾರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಖಾಸಗಿ ಟಿವಿ ವರದಿಗಾರರಾಗಿರುವ ಸುಖ್ ಪಾಲ್ ಪೊಳಲಿ ಅವರ ಮೇಲೆ ಯದುನಂದನ್ ಎನ್ನುವವರು ಸೋಮವಾರ ಸಂಜೆ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಲೆಗೆ ಪೆಟ್ಟು ಬಿದ್ದ ಸುಖ್ ಪಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಯದುನಂದನ್ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ವೈಯಕ್ತಿಕ ವಿಚಾರದ ದ್ವೇಷ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ, ಜಿಲ್ಲಾ ವರದಿಗಾರರಾಗಿರುವ ಸುಖಪಾಲ್ ಪೊಳಲಿ ಅವರ ಮೇಲೆ ಕಳೆದ ರಾತ್ರಿ ಮಾರಣಾಂತಿಕ ಹಲ್ಲೆ ಯನ್ನು ಖಂಡಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಈ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ರನ್ನು ಇಂದು ಭೇಟಿ ಮಾಡಿ ತಪ್ಪಿತಸ್ಥತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಿದೆ, ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓಣಿತೋಟ ರತ್ತಕರ್ ರವರಿಗೆ ಸನ್ಮಾನ,

Image
ಕೊಪ್ಪ:- ದಿನಾಂಕ 18/11/2021 ನೇ ಗುರುವಾರ ಹರಿಹರ ಪುರ ಮಠದ ವತಿಯಿಂದ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಮೂರನೇ ವರ್ಷದ ಅಂಟಿಗೆ-ಪಿಂಟಿಗೆ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಮೂಲ ಪ್ರಾಚೀನ ಜಾನಪದ ಕಲೆಯಾದ ಅಂಟಿಗೆ-ಪಿಂಟಿಗೆ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಸಲುವಾಗಿ ಕ್ಷೇತ್ರದಲ್ಲಿ ಇರುವ ತಂಡಗಳನ್ನು ಹುಡುಕಿ ಪ್ರೋತ್ಸಾಹಿಸಿ ಆ ತಂಡಗಳಿಗೆ ವೇದಿಕೆಯನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಓಣಿ ತೋಟ ರತ್ನಾಕರ್ ರವರನ್ನು ಎಲ್ಲ ತಂಡಗಳ ಪರವಾಗಿ ತಂಡದ ಸದಸ್ಯರು ಗಳು ಹರಿಹರ ಪುರ ಮಠದ ಸ್ವಾಮಿಜಿಯ ಸಾನಿಧ್ಯ ದಲ್ಲಿ ಕರ್ನಾಟಕ ಸರ್ಕಾರದ ಕನ್ನದ ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಸುನಿಲ್ ಕುಮಾರ್ ರವರು ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ. ಡಿ. ರಾಜೇ ಗೌಡ ರವರು ಹಾಗೂ ಇತರೆ ಮುಖ್ಯ ಅತಿಥಿಗಳು ಸನ್ಮಾನಿಸಿದರು.

ಪತ್ರಕರ್ತ ಹರೀಶ್ ಸಹಿತ, ಶನಿವಾರ ಸಂತೆ ಪಾಕಿಸ್ತಾನ್ ಝಿಂದಾಬಾದ್ ಪ್ರಕರಣ : ಪತ್ರಕರ್ತ ಹರೀಶ್ ಸಹಿತ ಮೂವರ ಮೇಲೆ ಎಫ್ ಐ ಆರ್

Image
ಮಡಿಕೇರಿ:- ಶನಿವಾರ ಸಂತೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಂಬೇಡ್ಕರ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿಡಿಯೋ ತಿರುಚಿ ಪಾಕಿಸ್ತಾನ್ ಝಿಂದಾಬಾದ್ ಹೇಳಿದ್ದಾರೆಂದು ವದಂತಿ ಹಬ್ಬಿಸಿದ ಆರೋಪದಲ್ಲಿ ಮೂವರ ಮೇಲೆ ಎಫ್ ಐ ಆರ್ ದಾಖಲಾಗಿದೆ . ರಘು ಎಸ್ ಎನ್ , ಹರೀಶ್ ಹಾಗು ಗಿರೀಶ್ ಆರೋಪಿಗಳು . ಈ ಪೈಕಿ ಹರೀಶ್ ಕನ್ನಡ ಪ್ರಭ ಪತ್ರಿಕೆಯ ಸ್ಥಳೀಯ ವರದಿಗಾರನಾಗಿದ್ದು , ಸೋಮವಾರಪೇಟೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ . ಶನಿವಾರ ಸಂತೆ ಗ್ರಾಮ ಪಂಚಾಯತ್ ಸದಸ್ಯ ರಘು , ಮಾಜಿ ಸದಸ್ಯ ಹಾಗು ಪತ್ರಕರ್ತ ಹರೀಶ್ ಹಾಗು ಕುಶಾಲ್ ನಗರದ ಗಿರೀಶ್ ಕೋಮು ಸೌಹಾರ್ದ ಕದಡುವ ದುರುದ್ದೇಶದಿಂದ ತಿರುಚಿದ ವಿಡಿಯೋ ವಾಟ್ಸ್ ಆಪ್ ನಲ್ಲಿ ಹರಡಿ ಪ್ರತಿಭಟನೆಯ ಸಂದರ್ಭ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ , ಹಿಂದೂ ಸಂಘಟನೆ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಬಂದಿದ್ದಾರೆ . ಹಾಗಾಗಿ ನ .15 ರಂದು ಶನಿವಾರ ಸಂತೆ ಬಂದ್ ಮಾಡುವಂತೆ ಕರೆ ನೀಡಿದ್ದರು ಎಂದು ಎಫ್ ಐ ಆರ್ ನಲ್ಲಿ ಹೇಳಲಾಗಿದೆ . ಪ್ರತಿಭಟನೆಯ ವೇಳೆ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದೂ ಎಫ್ ಐ ಆರ್ ನಲ್ಲಿ ದಾಖಲಾಗಿದೆ . ಇದೀಗ ಮೂವರು ಆರೋಪಿಗಳ ವಿರುದ್ಧ ಐಪಿಸಿ 34 , 153 ಅಡಿಯಲ್ಲಿ ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಬಿಗ್ ಬಾಸ್ ವಿನ್ನರ್ ಮಂಜು ಪವಗಾಡ, ಹುಂಚಕ್ಕೆ ಬೇಟಿ

Image
ಹೊಸನಗರ:- ಹುಂಚ ಪದ್ಮಾವತಿ ದೇವಸ್ಥಾನಕ್ಕೆ ಆಗಮಿಸಿದ ಜಯಕರ್ನಾಟಕ ಸುಮಂತ್, ಬಿಲ್ಲವ ಕನ್ನಡ ಖಾತ್ಯ ಚಲನಚಿತ್ರ ನಟಿ ಶುಭಪುಂಜಾ, ಮಜಾಭಾರತ ಖ್ಯಾತಿಯ ರಾಘವೇಂದ್ರ,ಮತ್ತು ಬಿಗ್ ಬಾಸ್ ವಿನ್ನರ್ ಮಂಜುಪಾವಗಡ ಆಗಮಿಸಿ, ತಾಯಿ ಪದ್ಮಾವತಿಗೆ ಪೂಜೆ ಸಲ್ಲಿಸಿ, ಶ್ರೀ ಗಳ ಆಶೀರ್ವಾದ ಪಡೆದರು, ಈ ಸಂದರ್ಭದಲ್ಲಿ ಜಯಕರ್ನಾಟಕ ಹೊಸನಗರ ತಾಲ್ಲೂಕು ಅಧ್ಯಕ್ಷರಾದ ಚಂದನ್ ಗೌಡ, ಜಯಕರ್ನಾಟಕ ಸಂಘಟನೆಯ ಮುಖಂಡರಾದ ಸತೀಶ್ ಈರಿನಬೈಲು, ಜಯಕರ್ನಾಟಕ ಹುಂಚ ಸಂಘಟನೆಯ ಅಧ್ಯಕ್ಷರಾದ ಮಾಲತೇಶ್ ಕಡಸೂರು, ಜಯಕರ್ನಾಟಕ ಹುಂಚ ಘಟಕದ ಕಾರ್ಯಾಧ್ಯಕ್ಷರಾದ ಭರತ್, ಜಯಕರ್ನಾಟಕ ಹೊಸನಗರ ಸಮಾಜಿಕ ಜಾಲತಾಣದ ಸಂಚಾಲಕರಾದ ಸಿಂಪಲ್ ಅವಿ, ಮತ್ತು ಸಂಘಟನೆಯ ಪ್ರಸನ್ನ, ವೆಂಕಟೇಶ,ವಿಶ್ವನಾಥ್,ವಿಜಯ್, ಗುರುಭಂಡಾರಿ, ಪ್ರವೀಣ್ ಮಂಡ್ಕ, ಶ್ರೀಕಾಂತ್,ಚೇತನ್ (ಗಜ), ಗುರು ಆಟೋ,ಅನೀಲ, ಮತ್ತು ಗ್ರಾಮಸ್ಥರು ಬಾಗಿಯಾಗಿದ್ದರು.

ಗೋಮಾಂಸ ಸಾಗಾಟ ನಡೆಸುತ್ತಿದ್ದ ಆರೋಪಿಯ ಬಂಧನ

Image
🖋ವರದಿ:-ವೀರಮಣಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಗೋಮಾಂಸ ಸಾಗಾಟ ನಡೆಸಿ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಅಲಿ ಎಂಬ 35 ವರ್ಷದವನ್ನು, ಮುತ್ತಿಗೆಪುರದ ಹಂಡಗುಳಿ ದಾರಿಯಲ್ಲಿ ಭಜರಂಗದಳದ ಕಾರ್ಯಕರ್ತರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನು ಈ ಹಿಂದೆ ಗೋ ಮಾಂಸವನ್ನು ಸಾಗಾಟ ನಡೆಸಿದ ಆರೋಪವಿದೆ, ಭಜರಂಗದಳದ ಕಾರ್ಯಕರ್ತರು ಈತನನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಆರೋಪಿಯನ್ನು ಹಾಗೂ ಸಾಗಾಟ ನಡೆಸುತ್ತಿದ್ದ ಮಾಂಸವನ್ನು ವಶಕ್ಕೆ ಪಡೆದ ಪೋಲಿಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ,

ರೈತರು ವಿರೋಧಿಸಿದ ಕೃಷಿ ಕಾನೂನುಗಳನ್ನು ವಾಪಸ್​ ಪಡೆದ ಮೋದಿ ಸರ್ಕಾರ

Image
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ ಸಾಕಷ್ಟು ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರ ಇಂದು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್​ ಪಡೆದಿದೆ. ಇಂದು ಬೆಳಗ್ಗೆ 9 ಗಂಟೆಗೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಹತ್ವದ ಘೋಷಣೆ ಮಾಡಿದರು. ಕಳೆದ ಒಂದು ವರ್ಷಗಳಿಂದ ರೈತರು ನಿರಂತರವಾಗಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿಕೊಂಡು ಬಂದಿದ್ದರು. ಕೊನೆಗೂ ರೈತರ ಪ್ರತಿಭಟನೆಗಳಿಗೆ ಮಣಿದಿರುವ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಯಾವುದೇ ಪ್ರತಿಭಟನೆಗಳು ಮಾಡದಂತೆ ಪ್ರಧಾನಿ ಮೋದಿ ಮನವಿ ಮಾಡಿದರು.

'ಲಾಲ್‌ ಸಲಾಮ್‌' ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ,

Image
🖋ವರದಿ:-ವೀರಮಣಿ 'ಲಾಲ್‌ ಸಲಾಮ್‌' ಮೂಲಕ ಲೇಖಕಿಯಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೇಂದ್ರ ಸಚಿವೆ ಸ್ಮೃತಿ ಜುಬಿನ್‌ ಇರಾನಿ ಅವರು 'ಲಾಲ್‌ ಸಲಾಮ್‌' ಕಾದಂಬರಿಯ ಮೂಲಕ ಲೇಖಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಸ್ಮೃತಿ ಅವರ ಮೊದಲ ಕಾದಂಬರಿ ಹೊರ ಬರುತ್ತಿರುವ ಕುರಿತು ವೆಸ್ಟ್‌ಲೆಂಡ್‌ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. 2010ರ ಏಪ್ರಿಲ್‌ನಲ್ಲಿ ದಾಂತೇವಾಡಾದಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ 76 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಸಾವಿಗೀಡಾಗಿದ್ದರು. ಆ ಘಟನೆಯನ್ನು ಆಧರಿಸಿ ಸ್ಮೃತಿ ಅವರು ಕಾದಂಬರಿ ಹೆಣೆದಿದ್ದಾರೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿನ ಸವಾಲುಗಳನ್ನು ಎದುರಿಸಿ, ದೇಶಕ್ಕಾಗಿ ಜೀವನ ಮುಡುಪಾಗಿಟ್ಟು ಸೇವೆ ಸಲ್ಲಿಸಿರುವ ಅಸಾಧಾರಣ ಪುರಷರು ಹಾಗೂ ಮಹಿಳೆಯರಿಗೆ ಈ ಕೃತಿಯ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ನವೆಂಬರ್‌ 29ರಂದು ಕಾದಂಬರಿಯು ಬಿಡುಗಡೆಯಾಗಲಿದೆ. ರಾಜಕೀಯ ಮತ್ತು ಭ್ರಷ್ಟಾಚಾರದ ಹಿನ್ನೆಲೆಯ ವ್ಯವಸ್ಥೆಯ ವಿರುದ್ಧ ವಿಕ್ರಮ್‌ ಪ್ರತಾಪ್‌ ಸಿಂಗ್‌ ಹೆಸರಿನ ಯುವ ಅಧಿಕಾರಿಯು ಎದುರಿಸುವ ಸವಾಲುಗಳನ್ನು 'ಲಾಲ್‌ ಸಲಾಮ್‌' ಕಥೆ ಒಳಗೊಂಡಿದೆ.

ಮಹಾರಾಷ್ಟ್ರ: ಕೋವಿಡ್‌ ಲಸಿಕೆ ಅಭಿಯಾನಕ್ಕೆ ಸಲ್ಮಾನ್‌ ಖಾನ್‌

Image
ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ವೇಗವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ರನ್ನು ಕೋವಿಡ್‌ ಲಸಿಕೆ ರಾಯಭಾರಿಯನ್ನಾಗಿ ಮಾಡಲು ಬುಧವಾರ ನಿರ್ಧಾರ ಮಾಡಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ ರಾಜ್ಯ ಸಾರ್ವಜನಿಕ ಆರೋಗ್ಯ ಸಚಿವ ರಾಜೇಶ್ ಟೋಪೆ, “ಮುಸ್ಲಿಂ ಸಮುದಾಯವು ಅಧಿಕವಾಗಿ ಇರುವ ಪ್ರದೇಶದಲ್ಲಿ ಕೊರೊನಾ ವೈರಸ್‌ ವಿರುದ್ಧದ ಲಸಿಕೆಯನ್ನು ಪಡೆಯುವುದರಲ್ಲಿ ಹಿಂಜರಿಕೆಯು ಹೆಚ್ಚಾಗಿ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಜನರು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವೊಲಿಸಲು ಮಹಾರಾಷ್ಟ್ರ ಸರ್ಕಾರವು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಸಹಾಯವನ್ನು ಪಡೆಯುತ್ತದೆ,” ಎಂದು ಹೇಳಿದ್ದಾರೆ. “ಮಹಾರಾಷ್ಟ್ರ ಸರ್ಕಾರವು ಕೋವಿಡ್‌ ಲಸಿಕೆ ನೀಡಿಕೆ ಕಾರ್ಯಕ್ರಮದ ವೇಗವನ್ನು ಇನ್ನಷ್ಟು ಅಧಿಕ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ವೇಗವಾಗಿ ಸಾಗುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ವೇಗದಲ್ಲಿ ಹಿನ್ನೆಡೆ ಇದೆ,” ಎಂದು ಕೂಡಾ ಮಹಾರಾಷ್ಟ್ರ ಆರೋಗ್ಯ ಸಚಿವರು ತಿಳಿಸಿದರು.

ಮೆಲ್ಕಾರ್ ನಲ್ಲಿ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ| ಸಿ.ಸಿ.ಟಿವಿ ಯಲ್ಲಿ ಸೆರೆಯಾದ ಭೀಕರ ದೃಶ್ಯ,

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ,ಎನ್ ಕೆ ಶಾಫಿ ಸಅದಿ ಆಯ್ಕೆ,

Image
ಬೆಂಗಳೂರು : ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ಇದರ ನೂತನ ಅಧ್ಯಕ್ಷರಾಗಿ ಎನ್.ಕೆ.ಎಮ್.ಶಾಫಿ ಸಅದಿ ಆಯ್ಕೆಯಾಗಿದ್ದಾರೆ . ವಕ್ಸ್ ಬೋರ್ಡ್ ಅಧ್ಯಕ್ಷರಾಗಿದ್ದ ಡಾ.ಮುಹಮ್ಮದ್ ಯುಸುಫ್ ರವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಬೆಂಗಳೂರು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಸ್ ಬೋರ್ಡ್ ಕಛೇರಿಯಲ್ಲಿ ಚುನಾವಣೆ ನಡೆದಿತ್ತು . ಕರ್ನಾಟಕ ಪ್ರದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಚುನಾವಣೆಯ ಉಸ್ತುವಾರಿ ವಹಿಸಿದ್ದರು . ಇಂದು ಬೆಳಿಗ್ಗೆ 10 : 30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.ಶಾಫಿ ಸಅದಿ ಹಾಗೂ ಮುಹಮ್ಮದ್ ಸಲೀಂ ನಾಮಪತ್ರ ಸಲ್ಲಿಸಿದ್ದರು . ಶಾಫಿ ಸಅದಿಯವರು ಒಟ್ಟು ಹತ್ತು ಮತಗಳಲ್ಲಿ ಆರು ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರೆ , ಮುಹಮ್ಮದ್ ಸಲೀಂ ನಾಲ್ಕು ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದರು . ಸಅದಿಯವರು ಕರ್ನಾಟಕ ರಾಜ್ಯ ಸರಕಾರದಿಂದ ಕಳೆದ ಎರಡು ಅವಧಿಗೆ ಆಲೀಂ ಕೋಟಾದಲ್ಲಿ ರಾಜ್ಯ ವಕ್ಸ್ ಬೋರ್ಡ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದರು . ಸದ್ಯ ಕರ್ನಾಟಕ ಮುಸ್ಲಿಮ್ ಜಮಾಅತ್ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ . ವಕ್ಸ್ ಬೋರ್ಡ್ ಗೆ ಮೊದಲ ಉಲಮಾ ಅಧ್ಯಕ್ಷ : ಉಲಮಾ ( ಮೌಲಾನ ) ಒಬ್ಬರು ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದು , ಕರಾವಳಿಗೂ ಇದು ಮೊದಲ ಆಯ್ಕೆಯಾಗಿದೆ . *ಶಾಫಿ ಸಅದಿ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ ಇಂಡಿಯನ್ ಗ್ರ್ಯಾಂಡ್ ಮ...

ಮನೆಗೆ ತೆರಳುತಿದ್ದ ಬಾಲಕನ ಮೇಲೆರಗಿದ ನಾಯಿ!

Image
  ಮನೆಗೆ ತೆರಳುತಿದ್ದ ಬಾಲಕನ ಮೇಲೆರಗಿದ ನಾಯಿ! ಕಡಬ:- ಮದರಸ ಬಿಟ್ಟು ಮನೆಗೆ ತೆರಳುತಿದ್ದ ಬಾಲಕನಿಗೆ ನಾಯಿಯೊಂದು ಕಡಿದು ಗಾಯಗೊಳಿಸಿದ ಘಟನೆ ಕಡಬ ಪೇಟೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಗಾಯಾಳು ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದ್ದು, ಬಾಲಕನನ್ನು ಕಚ್ಚಿದ ಆ ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದಾರೆ. ನಾಯಿ ಕಡಿತದ ಗಾಯಾಳು, ಮನೆಗೆ ತೆರಳುತ್ತಿದ್ದ ಹೊತ್ತಿನಲ್ಲಿ ನಾಯಿಯೊಂದು ಎರಗಿ ಕೈಗೆ ಕಚ್ಚಿದೆ‌ ಎಂದು ಹೇಳಲಾಗುತ್ತಿದೆ. ತಕ್ಷಣ ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಾಲಕನಿಗೆ ನಾಯಿ ಕಡಿದುದರಿಂದ ಉದ್ರೀಕ್ತಗೊಂಡ ಕೆಲವರು ಆ ನಾಯಿಯನ್ನು ಹೊಡೆದು ಕೊಂದಿದ್ದಾರೆ. ಬಳಿಕ ಈ ಮಾಹಿತಿಯನ್ನು ಸ್ಥಳೀಯ ಪಟ್ಟಣ ಪಂಚಾಯತ್ ಗೆ ಮಾಹಿತಿ ಒದಗಿಸಿದ್ದಾರೆ. ಕಚ್ಚಿದ ನಾಯಿ ಹುಚ್ಚು ನಾಯಿಯೆಂದು ಕೆಲವರು ಆರೋಪಿಸಿದ್ದಾರೆ. ವಾರದ ಹಿಂದೆ ಕಡಬದ ಹಳೇಸ್ಟೇಷನ್ ಸಮೀಪ ಬಾಪೂಜಿ ನಗರದಲ್ಲಿ ಹುಚ್ಚುನಾಯಿ ಹಾವಳಿ ಕಂಡುಬಂದಿತ್ತು. ಹಾಗಾಗಿ ಆ ಪೈಕಿ ಒಂದು ನಾಯಿ ಇದು ಆಗಿರಬಹುದು ಎಂದು ಶಂಕಿಸಲಾಗಿದೆ.

ಅದಲು ಬದಲು ಮಗು,ಆಸ್ಪತ್ರೆಯಲ್ಲಿ ಮೃತ ಪಟ್ಟಿದೆ,

Image
  ಲೇಡಿಗೋಷನ್ ಮಗು ಅದಲು-ಬದಲು ಪ್ರಕರಣ; ಚಿಕಿತ್ಸೆಗೆ ಸ್ಪಂದಿಸದ ಮಗು ಸಾವು By   News Editor 15/11/2021 : 6:54 PM Updated: 15/11/2021 : 6:55 PM No Comments 1 Min Rea ಮಂಗಳೂರು:  ನಗರದಲ್ಲಿ ಸಂಚಲನವನ್ನುಂಟು ಮಾಡಿದ್ದ ಲೇಡಿಗೋಶನ್ ಆಸ್ಪತ್ರೆಯಲ್ಲಿ ತಿಂಗಳ ಹಿಂದೆ ನಡೆದ ನವಜಾತ ಶಿಶು ‘ಅದಲು-ಬದಲು’ ಪ್ರಕರಣದ ಕುರಿತು ಕಾನೂನು ಹೋರಾಟ ನಡೆಯುತ್ತಿರುವ ಹಂತದಲ್ಲೇ ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಲೇಡಿಗೋಶನ್ ಆಸ್ಪತ್ರೆಯಲ್ಲಿ ಅ.15ರಂದು ಕುಂದಾಪುರ ಮೂಲದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಅದಲು-ಬದಲು ಮಾಡಲಾಗಿದೆ, ಹೆಣ್ಣುಮಗು ಎಂದು ಗಂಡುಮಗು ನೀಡಲಾಗಿದೆ ಎಂದು ಮಗುವಿನ ಹೆತ್ತವರು ಆರೋಪಿಸಿದ್ದರು. ಆಸ್ಪತ್ರೆಯ ಸಿಬ್ಬಂದಿ ಮೊದಲು ಮಗು ಹೆಣ್ಣು ಎಂದು ನಮಗೆ ಹೇಳಿದ್ದರು. ದಾಖಲೆಗಳಲ್ಲಿ ಕೂಡ ಹೆಣ್ಣು ಮಗು ಎಂದೇ ನಮೂದಿಸಿದ್ದರು. ಆದರೆ ನಮಗೆ ಗಂಡು ಮಗುವನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಮಗು ಹಾಗೂ ಹೆತ್ತವರ ಡಿಎನ್‌ಎ ಪರೀಕ್ಷೆ ನಡೆಸಿ ಮಾದರಿಯನ್ನು ಹೈದರಾಬಾದಿಗೆ ಕಳುಹಿಸಿಕೊಡಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಮಗು ಮೃತಪಟ್ಟಿದೆ. ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.