Posts

Showing posts from June, 2022

ಚಾಲಕನ ನಿಯಂತ್ರಣ ತಪ್ಪಿ,ಭೀಕರ ಅಪಘಾತಕ್ಕೆ ಏಳುಮಂದಿ ಬಲಿ,

Image
  ಬೆಳಗಾವಿ: ಭೀಕರ ರಸ್ತೆ ಅಪಘಾತಕ್ಕೆ ಏಳು ಮಂದಿ ಬಲಿ ಮೂವರು ಗಂಭೀರ, ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಕ್ರೂಸರ್ ವೊಂದು ನಾಲೆಗೆ ಉರುಳಿಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ಘಟನೆ ತಾಲೂಕಿನ ಕಣಬರಗಿ ಸಮೀಪ ರವಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ದಿನಗೂಲಿ ಕೆಲಸಕ್ಕೆಂದು ಗೋಕಾಕ್ ತಾಲೂಕಿನ ಅಕ್ಕತಂಗಿಯರ ಹಾಳ ಗ್ರಾಮದಿಂದ ಬೆಳಗಾವಿಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಗಾಲೆಗೆ ಉರುಳಿಬಿದ್ದಿದೆ. ಈ ವೇಳೆ ಕ್ರೂಸರನಲ್ಲಿದ್ದವರ ಪೈಕಿ ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕ್ರೂಸರ್ ನಲ್ಲಿ 12 ಮಂದಿ ಇದ್ದರೆನ್ನಲಾಗಿದೆ. ಅಪಘಾತಕ್ಕೀಡಾದ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಾರಿಹಾಳ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿದ್ದಾರೆ.

ಶಾಲಾ ಮಕ್ಕಳಿಗೆ ಶಾಸನಬದ್ಧವಾದ ಚುನಾವಣಾ ಮಾದರಿಯಲ್ಲಿಯೇ ಬ್ಯಾಲೆಟ್ ಪೇಪರ್ ಮೂಲಕ ಮತದಾನ

Image
ಶಾಲಾ ಮಕ್ಕಳಿಗೆ ಶಾಸನಬದ್ಧವಾದ ಚುನಾವಣಾ ಮಾದರಿಯಲ್ಲಿಯೇ ಬ್ಯಾಲೆಟ್  ಪೇಪರ್ ಮೂಲಕ ಮತದಾನ, ದಿನಾಂಕ : 24-06-2022 ರಂದು ನ.ರಾ.ಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ  ಕರ್ಕೇಶ್ವರ ಶಾಲೆಯಲ್ಲಿ " ಶಾಲಾ ಮಕ್ಕಳ ಸಂಸತ್ತು " ರಚನೆಗೆ ಸಂಬಂಧಿಸಿದಂತೆ ಶಾಲಾ ಆವರಣದಲ್ಲಿ ಚುನಾವಣೆಯನ್ನು ನಡೆಸಲಾಯಿತು. ಈ ಚುನಾವಣೆಯಲ್ಲಿ ಒಟ್ಟು 11 ಸ್ಥಾನಗಳಿಗೆ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ಮಕ್ಕಳಿಗೆ ಶಾಸನಬದ್ಧವಾದ ಚುನಾವಣಾ ಮಾದರಿಯಲ್ಲಿಯೇ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಿಸಲಾಯಿತು. ಶಾಲಾ ಮಕ್ಕಳು ಬಹಳ ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸಿ ಮತಗಳನ್ನು ಹಾಕಿದರು. ಈ ಚುನಾವಣೆಯಲ್ಲಿ ಚುನಾವಣಾ ಕಮೀಷನರ್ ಆಗಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಬಾಲಚಂದ್ರ. PRO ಆಗಿ ಶಾಲೆಯ ಸಹ ಶಿಕ್ಷಕರಾದ ಶ್ರೀಯುತ ನಟರಾಜ. APRO ಆಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಸುಬ್ಬರಾಯ. PO ಗಳಾಗಿ ಕುಮಾರಿ. ಸ್ವಪ್ನಾ ಹಾಗೂ ಶ್ರೀಮತಿ ಸುಮತಿಯವರು ಕಾರ್ಯವನ್ನು ನಿರ್ವಹಿಸಿದರು. ಚುನಾವಣಾ ಸಂಧರ್ಭದಲ್ಲಿ ಸೆಕ್ಟರ್ ಆಫೀಸರ್ ಆ ಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಸುರೇಶಪ್ಪ.ಹೆಚ್.ವಿ.ರವರು. ಮೈಕ್ರೋ ಅಬ್ಜೋವರ್ ಯಾಗಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಮಾಲತೇಶ್ ಗಾಣದ್ ರವರು ಮತ್ತು ಕರ್ಕೇಶ್ವರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಯುತ ರಾಜೇಶ್ ರವರು ಹಾಗೂ ಪಿ.ಡಿ.ಓ.ರವರಾದ ಶ್ರೀಮತಿ ವನಿತ...

ಕೊಪ್ಪ, ಫಲಾನಭವಿಗಳಿಗೆ ಅರಣ್ಯ ಇಲಾಖೆಯಿಂದ ಸಸಿ ವಿತರಣೆ,

Image
ಕೊಪ್ಪ ತಾಲೂಕಿನ ಸಾಮಾಜಿಕ ಅರಣ್ಯವತಿಯಿಂದ ವನಮಹೋತ್ಸವ ಮತ್ತು ಫಲಾನುಭವಿಗಳಿಗೆ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು . ಈ ಸಂದರ್ಭದಲ್ಲಿ ಶಾಸಕ ಟಿ ಡಿ ರಾಜೇಗೌಡ , ಜಿಲ್ಲಾ ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪ್ರಭು , ಕೊಪ್ಪ ತಾಲ್ಲೂಕು ಪಂ . ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್ , ಅರಣ್ಯ ಇಲಾಖೆಯ ಅಧಿಕಾರಿಗಳು , ಹರಂದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕೊಪ್ಪ ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು .   ತಾಲೂಕಿನ ಹರಂದೂರು ಗ್ರಾಮದಲ್ಲಿ ನಡೆದ ವಿಶ್ವ ಪರಿಸರ ದಿನದ ಅಂಗವಾಗಿ " ಹಸಿರು ಗ್ರಾಮ ಅಭಿಯಾನ " ಕಾರ್ಯಕ್ರಮದಲ್ಲಿ ಶಾಸಕ ಟಿ ಡಿ ರಾಜೇಗೌಡ ಭಾಗವಹಿಸಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಜಿಲ್ಲಾ ಪಂ.ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳಾದ ಶ್ರೀ ಪ್ರಭು , ಕೊಪ್ಪ ಇ.ಒ ಶ್ರೀ ನವೀನ್ , ಅರಣ್ಯ ಇಲಾಖೆಯ ಅಧಿಕಾರಿಗಳು , ಮತ್ತು ಹರಂದೂರು ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು . 🖋 ಮಜೀದ್ ಕೊಪ್ಪ 

ಮೇಲ್ಪಾಲ್ ಹೈಸ್ಕೂಲ್,ಸ್ನೇಹಿತರಿಂದ ಪುಸ್ತಕ ವಿತರಣೆ,

Image
 23/06/2022,ಎನ್ ಆರ್,ಪುರ:- ತಾಲ್ಲೂಕಿನ ಮೇಲ್ಪಾಲ್ ಹೈಸ್ಕೂಲ್ ನಲ್ಲಿ ಪುಸ್ತಕ ವಿತರಣೆ, ಈ ಕಾರ್ಯಕ್ರಮವನ್ನು ಗುಬ್ಬೂರಿನ ಸ್ನೇಹಿತರೆಲ್ಲರೂ ಸೇರಿ ಸುಮಾರು 12 ಸಾವಿರ ರೂಗಳ ಪುಸ್ತಕವನ್ನು ವಿತರಿಸಲಾಯಿತು, ಹಿರಿಯರಾದ ಎ ಜಿ ಶ್ರೀನಿವಾಸಗೌಡರು, ಸತೀಶ್, ಕೆಎಸ್ ಉಪೇಂದ್ರ, ಎ ಎಂ ಸುನಿಲ್, ಎನ್ ಸಿ ಜೈಪಾಲ್, ಕೆ ಸಿ ರಂಜನ್, ಎನ್ ಸಿ ರಾಘವೇಂದ್ರ, ಎ ಎಸ್ ರಾಜೇಂದ್ರ, ಎ ಎನ್ ಶ್ರೀಪಾಲ್, ಕೆ ಸಿ ಶ್ರೀಧರ್, ಕೆ ಎಸ್ ಸಾತ್ವಿಕ್, ಕೆ ಆರ್ ಸುಮುಖ, ಕೆ ಆರ್ ಪೂರ್ಣಿಮಾ ಮತ್ತು ಸತೀಶ್ ಇವರೆಲ್ಲರ ಸಹಕಾರದೊಂದಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನೆರವೇರಿತು ಇವರೆಲ್ಲರಿಗೂ ಹೈಸ್ಕೂಲ್ ಶಿಕ್ಷಕ ವೃಂದ ಧನ್ಯವಾದ ಅರ್ಪಿಸಿದರು. 🖊️ ವೀರಮಣಿ

ಚಿಕ್ಕಮಗಳೂರು:-ಅಗ್ನಿಪತ್ ವಿರೋಧಿಸಿ ಬಿಜೆಪಿ ವಿರುದ್ಧ ಪ್ರತಿಭಟನೆ ಕಾಂಗ್ರೆಸ್ ಕುತಂತ್ರ ..ಬಿಜೆಪಿ ವಾಗ್ದಾಳಿ

Image
  ಚಿಕ್ಕಮಗಳೂರು:-ಅಗ್ನಿಪತ್ ವಿರೋಧಿಸಿ ಬಿಜೆಪಿ ವಿರುದ್ಧ ಪ್ರತಿಭಟನೆ ಕಾಂಗ್ರೆಸ್ ಕುತಂತ್ರ ..ಬಿಜೆಪಿ ವಾಗ್ದಾಳಿ ಮೂಡಿಗೆರೆ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ  ಯುವಕರನ್ನು ದಾರಿತಪ್ಪಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದ ಯುವಕರ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉತ್ತಮ ಕಾರ್ಯ ವಿರೋಧಿಸಿ ಕಾಂಗ್ರೆಸ್ನಿಂದ ಪೂರ್ವನಿಯೋಜಿತ ಕಾರ್ಯ ಬಿಜೆಪಿ ಪಕ್ಷವು ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದು ಇದನ್ನು ಸಹಿಸಲಾರದ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತದೆಂದು ಆರೋಪಿ ಸುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು ಈಗಾಗಲೇ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು ಬಿಜೆಪಿ ಪಕ್ಷದಲ್ಲಿ ಯಾವುದೇ ನಾಯಕರುಗಳು ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಹಿಂದೆ ಇದ್ದ ಕಾಂಗ್ರೆಸ್ ಪಕ್ಷವು ಸಾಲು ಸಾಲು ಹಗರಣಗಳಲ್ಲಿ ಭಾಗಿಯಾಗಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ.. ಬಿಜೆಪಿ ತಾಲ್ಲೂಕ್ ಅಧ್ಯಕ್ಷರು.j s ರಘು ...ವಕ್ತಾರ ನಯನ್ ತಳವಾರ   ಇದ್ದರು,, 🖋 ವೀರಮಣಿ

ಕುವೈಟ್:ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾಗಿ ಹುಸೈನ್ ಮುಸ್ಲಿಯಾರ್ ಎಮ್ಮೆಮಾಡು ಆಯ್ಕೆ

Image
ಕುವೈಟ್:ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಕುವೈಟ್ ರಾಷ್ಟ್ರೀಯ  ಅಧ್ಯಕ್ಷರಾಗಿ ಹುಸೈನ್ ಮುಸ್ಲಿಯಾರ್ ಎಮ್ಮೆಮಾಡು ಆಯ್ಕೆ .          ಕುವೈಟ್ ಬದರ್ ಅಲ್ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ  ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಸಖಾಫಿವವರ ಅಧ್ಯಕ್ಷತೆ ಯಲ್ಲಿ  2022-23 ನೆ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.        ಪ್ರ.ಕಾರ್ಯದರ್ಶಿಯಾಗಿ ಯಾಕೂಬ್ ಕಾರ್ಕಳ ಆಯ್ಕೆಯಾದರು. ನಿಕಟಪೂರ್ವ ಕೋಶಾಧಿಕಾರಿ  ಮೂಸ ಇಬ್ರಾಹಿಂ ಕೋಶಾಧಿಕಾರಿಯಾಗಿ ಪುನರಾಯ್ಕೆಯಾದರು..  ಸಂಘಟನಾ ವಿಭಾಗದ  ಅಧ್ಯಕ್ಷರಾಗಿ ಉಮರ್ ಝುಹರಿ ಕಾರ್ಯದರ್ಶಿ ಸಮೀರ್ ಎಂಜಿನಿಯರ್  ಶಿಕ್ಷಣ ವಿಭಾಗದ  ಅಧ್ಯಕ್ಷರಾಗಿ ಬಾಧುಶ ಸಖಾಫಿ ಮಾದಾಪುರ ಕಾರ್ಯದರ್ಶಿ ಮುಸ್ತಫಾ ಉಳ್ಳಾಲ. ಸಾಂತ್ವನ ವಿಭಾಗದ ಅಧ್ಯಕ್ಷ ರಾಗಿ ಇಕ್ಬಾಲ್ ಕಂದಾವರ ಕಾರ್ಯದರ್ಶಿ ಮಲಿಕ್ ಸೂರಿಂಜೆ . ಅಡ್ಮಿನ್ ವಿಭಾಗದ ಅಧ್ಯಕ್ಷ ರಾಗಿ ಅಬ್ಬಾಸ್ ಬಳಂಜ ಕಾರ್ಯದರ್ಶಿ  ಉಸ್ಮಾನ್ ಕೋಡಿ .ಪ್ರಕಾಶ ನ ವಿಬಾಗದ ಅಧ್ಯಕ್ಷ ರಾಗಿ ಶಾಹುಲ್ ಹಮೀದ್  ಸಅದಿ ಝುಹ್ರಿ  ಕಾರ್ಯದರ್ಶಿ ಇಬ್ರಾಹಿಂ ವೇನೂರ್. ಇಹ್ಸಾನ್ ವಿಭಾಗದ ಅಧ್ಯಕ್ಷ ರಾಗಿ ಫಾರೂಕ್ ಸಖಾಫಿ ಕಾರ್ಯದರ್ಶಿ ತೌಫೀಕ್ ಕಾರ್ಕಳ ನೇಮಕಗೊಂಡರು  ಸಭೆಯ ನಿಯಂತ್ರಕ(ಆರ್ ಓ) INC ಸಾಂತ್ವನ ವಿಭಾಗ ಅಧ್ಯಕ್ಷರಾದ ಅಲಿ...

ಮರಿಯ ಬೇಕರಿ ಮೇಲೆ ದಾಳಿ,ಹೋಂ ಮೇಡ್ ವೈನ್ ವಶ,

Image
  ಬಾಳೆಹೊನ್ನುರು:- ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಮರಿಯ ಬೇಕರಿ ಮೇಲೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ಹೋಂ ಮೇಡ್ ವೈನ್ ನ್ನು ವಶಕ್ಕೆ ಪಡೆದಿದ್ದಾರೆ.  ಬೇಕರಿಯ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೇಕರಿ ಮೇಲೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು 16.50 ಲೀಟರ್ ಹೋಂ ಮೇಡ್ ವೈನ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು ಆರೋಪಿ ಲಿಯೊನಾರ್ಡೋ ಡಿಸೋಜಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.  ಘಟನಾ ಸಂಬಂಧ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಎಚ್ಚರಿಕೆ ನೀಡಿರುವ ಅಧಿಕಾರಿಗಳು, ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಶೇಖರಣೆ ಮಾಡುವುದು ಕಂಡು ಬಂದಲ್ಲಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ತಿಳಿಸಿದ್ದಾರೆ.  ಈ ಕಾರ್ಯಾಚರಣೆಯಲ್ಲಿ ಅಬಕಾರಿ ಇನ್ಸ್ಪೆಕ್ಟರ್ ವಿಠಲ ಪಿ, ಜೀರಂಕಲಗಿ. ಸಬ್ ಇನ್ಸ್ಪೆಕ್ಟರ್ ಎಸ್.ಹೆಚ್ ರೇಖಾ, ಎಂ.ವಿ ಲೋಕೇಶ್, ಕಿಜಾರ್ ಅಹ್ಮದ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. 🖊️ ವೀರಮಣಿ

ಖಾಂಡ್ಯ,ಬಿದರೆಗ್ರಾಮ ಆಶ್ರಯ ನಿವೇಶನಕ್ಕಾಗಿ ಟೆಂಟ್ ಹಾಕಿ ಪ್ರತಿಭಟನೆ,

Image
  ಚಿಕ್ಕಮಗಳೂರು ಜಿಲ್ಲೆ ಹಾಗೂ ತಾಲ್ಲೂಕು ) ಬಾಂಡ್ಯ ಹೋಬಳಿ , ಬಿದರ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಿದರೆ ಗ್ರಾಮದ ಸರ್ವೆ ನಂಬರ್ 292 ರಲ್ಲಿ 4,00 ಏಕರೆ ವಿಸ್ತೀರ್ಣದ ಜಮೀನನ್ನು ಆಶ್ರಯ ನಿವೇಶನಕ್ಕಾಗಿ ಕಾಯ್ದಿರಿಸಿ ಮಾನ್ಯ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಇವರು ದಿನಾಂಕ : 04 / 01 / 2013 ರಂದು ಆದೇಶಿಸಿರುತ್ತಾರೆ . ಆದೇಶದ ಪ್ರತಿಯಲ್ಲಿ ತಿಳಿಸಿದಂತೆ ಸದರಿ ಜಾಗದಲ್ಲಿ ಮರಗಳಿದ್ದಲ್ಲಿ ಅರಣ್ಯ ಇಲಾಖೆಯಿಂದ ತೆರವು ಮಾಡಿಕೊಡುವುದು ಎಂಬುದಾಗಿ ತಿಳಿಸಿ ಸಂಬಂಧಪಟ್ಟ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು , ಚಿಕ್ಕಮಗಳೂರು ವೃತ್ತ , ಚಿಕ್ಕಮಗಳೂರು ಇವರಿಗೂ ಮಾಹಿತಿ ನೀಡಿರುತ್ತಾರೆ . ಆದರೂ ಇದುವರೆಗೂ ಮರಗಳನ್ನು ತೆರವುಗೊಳಿಸಿರುವುದಿಲ್ಲ , ಚಿಕ್ಕಮಗಳೂರು:- ತಾಲ್ಲೂಕಿನ ಖಾಂಡ್ಯ ಹೋಬಳಿಯ ಬಿದರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಂದ್ರವಳ್ಳಿ ಎಂಬಲ್ಲಿ ಅಶ್ರಯ ನಿವೇಶನ ರಹಿತರು ಸಾರ್ವಜನಿಕ ಅಶ್ರಯ ಸಮಿತಿಗೆ ಮೀಸಲಿಟ್ಟ ಜಾಗದಲ್ಲಿ 100 ಕ್ಕೂ ಹೆಚ್ಚು ಜನ 80 ಫಲಾನುಭವಿಗಳು 60 ಟೆಂಟ್ ಹಾಕಿ ಪ್ರತಿಭಟನೆ ನಡೆಸಿದರು. ಇವರು ಸುಮಾರು 80 ವರ್ಷದಿಂದ ಕೂಲಿ ಕಾರ್ಮಿಕರಾಗಿ ಕರಡಿಖಾನ್ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಚುನಾವಣಾ ಗುರುತಿನ ಚೀಟಿ ಆಧಾರ್ ಕಾರ್ಡ್ ಪಡಿತರ ಚೀಟಿ ಹೊಂದಿದ್ದು, ಇವರಿಗೆ ಆಶ್ರಯ ನಿವೇಶನಕ್ಕೇ ಮೀಸಲಿಟ್ಟ 4 ಎಕರೆ ಪ್ರದೇಶವನ್ನು ಡಿಮೂಡ್ ಎಂದು ಅರಣ್ಯ ಇಲಾಖೆಯವರು ಒಪ್ಪಿಗೆ ನೀಡುತ್ತಿಲ್ಲ. ಹಾಗೂ ಸ...

ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಹೊಸ ಕಾರ್ಯಕ್ರಮ

Image
ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಹೊಸ ಕಾರ್ಯಕ್ರಮ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಹೊಸ ಕಾರ್ಯಕ್ರಮ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ವಿದ್ಯುತ್ ಅದಾಲತ್ 18/06/2022ರಂದು ನುಗ್ಗಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೆರವೇರಿತು ಕಾರ್ಯಕ್ರಮದಲ್ಲಿ ನುಗ್ಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಉಪಾಧ್ಯಕ್ಷರಾದ ಹೆಚ್ ಆರ್ ಜಗದೀಶ್ ನುಗ್ಗಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಬಿ. ಸಹಾಯಕ ಕಾರ್ಯಪಾಲಕ ಇಂಜಿನಿಯರ್. ಮಾರ್ತಾಂಡಪ್ಪ ಆರ್ ಕರಿಯಪ್ಪನವರ್.ಸಹಾಯಕ  ಇಂಜಿನಿಯರ್ ರ್ಸುಧೀರ್ ಪಾಟೀಲ್. ಸಹಾಯಕ ಲೆಕ್ಕಾಧಿಕಾರಿ ಮಂಜುನಾಥ ಗುದಗಿ.ಸಹಾಯಕ ಇಂಜಿನಿಯರ್ ಶಶಿಕಾಂತ್ ರಾಥೋಡ್. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ  ಪ್ರಸನ್ನ ಕೆ, ನರಸಿಂಹಮೂರ್ತಿ , ಹಲವಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು ಹಲವಾರು ಜನ ಗ್ರಾಮಸ್ಥರ ಹಲವಾರು ರೀತಿಯ ಸಮಸ್ಯೆಗಳಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಒಂದು ವಾರದೊಳಗೆ ಎಲ್ಲಾ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿ ಕೊಡುವುದಾಗಿ ತಿಳಿಸಿದರು ಹಾಗೆ ಈ ಹಿಂದೆ ನುಗ್ಗಿ ಹಾಗೂ ಹೊಸೂರು ಭಾಗದಲ್ಲಿ ಮೆಸ್ಕಾಂ ಇಲಾಖೆಯಿಂದ ನಡೆಸಿದ ಹಲವಾರು ಅಭಿವೃದ್ಧಿ ಕಾಮಗಾರಿಗಳ ವರದಿಯನ್ನು ಮಂಡನೆ ಮಾಡಲಾಯಿತು ಈ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದಲ್ಲಿ ಈಗಾಗಲೇ ನಡೆಸಿರುವ ಕಾಮಗಾರಿಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು, 🖋 ವೀರಮಣಿ  

ಕೊಪ್ಪ, ಯೂತ್ ಫಾರ್ ಸೇವಾ ಸಂಸ್ಥೆಯಿಂದ ಶಾಲಾಮಕ್ಕಳಿಗೆ ಕಿಟ್ ವಿತರಣೆ,

Image
ಕೊಪ್ಪ, ಯೂತ್ ಫಾರ್ ಸೇವಾ ಸಂಸ್ಥೆಯಿಂದ ಶಾಲಾಮಕ್ಕಳಿಗೆ ಕಿಟ್   ವಿತರಣೆ ,   18/06/2022 ರಂದು, ಯೂತ್ ಫಾರ್ ಸೇವಾ,  ಸಂಘ ಬೆಂಗಳೂರು ಇವರು ನುಗ್ಗಿ ಗ್ರಾಮದ ಬಪ್ಪುಂಜಿ ಹಿರಿಯ ಪ್ರಾಥಮಿಕ ಶಾಲೆ ದೇವನ್ ಎಸ್ಟೇಟ್  ಕಿರಿಯ ಪ್ರಾಥಮಿಕ ಶಾಲೆ,  H ಹೊಸೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ,ಬೇರುಕೂಡುಗೆ ಕಿರಿಯ ಪ್ರಾಥಮಿಕ ಶಾಲೆ, ನುಗ್ಗಿ ಕಿರಿಯ ಪ್ರಾಥಮಿಕ ಶಾಲೆ, ಈ ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ಬುಕ್  ಪೆನ್ ಪೆನ್ಸಿಲ್ ಜಾಮಿಟ್ರಿ ಮಳೆಗಾಲದಲ್ಲಿ ಹಾಕುವ ರೈನ್ ಕೊಟ್ಟು ಸ್ಕೂಲ್ ಬ್ಯಾಗ್ ಇನ್ನಿತರೇ ಶಾಲಾ ಮಕ್ಕಳಿಗೆ ಉಪಯೋಗವಾಗುವ ವಸ್ತುಗಳನ್ನು ಉಚಿತವಾಗಿ ನೀಡಿದರು, ಈ ಸಂದರ್ಭದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ನಿರ್ದೇಶಕರು ಹಿರಿಯರಾದ ಶ್ರೀ ಮತಿ ಚಾಯಕ್ಕ ನವರು ಬೆಂಗಳೂರು. ಹಾಗು ನಿವೃತ್ತ ಕಾವೇರಿ ಗ್ರಾಮೀಣ ಬ್ಯಾಂಕ್ ಉದ್ಯೋಗಿ ಕೃಷ್ಣಕೊಪ್ಪ ರವರು, ನಿವೃತ್ತ ಅಂಚೆ ಇಲಾಖೆಯ ಅಧಿಕಾರಿಗಳದ  ಅನಂತರಾಮ್  ಕೊಪ್ಪ,ಮಂಜೇಶ್ ಬಾಳಗಡಿ ಕೊಪ್ಪ, ಹರೀಶ್,    ಹೆಚ್ ಆರ್ ಜಗದೀಶ್  ಮತ್ತು ಇತರರು ಎಲ್ಲ   ಶಾಲೆಗಳಿಗೆ ಖುದ್ದು ತೆರಳಿ ವಿತರಿಸಿದರು... ಗ್ರಾಮೀಣ ಮಟ್ಟದ  ಮಕ್ಕಳು ಕೂಡ ಈ ದೇಶದ ಉನ್ನತ ವ್ಯಾಸಂಗವನ್ನು ಮಾಡಬೇಕು ಈ ದೇಶದ ಉನ್ನತ ಪ್ರಜೆಗಳಾಗಬೇಕು ಎಂದು ಯೂತ್  ಫಾರ್ ಸೇವಾ ಸಂಘದವರು ಉಚಿತವಾಗಿ ನೀಡಿರುವ ವಸ್ತುಗಳನ್ನು ಉತ್ತ...

ಸಂಚಾರಿ ಶೌಚಾಲಯ ಕಟ್ಟಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್

Image
ಸಂಚಾರಿ ಶೌಚಾಲಯ ಕಟ್ಟಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್   "ತನ್ನ ತಾಯಿಗಾದ ಆ ಅನುಭವ ಬೇರೆ ಯಾರ ತಾಯಂದಿರಿಗೂ ಆಗದಿರಲಿ." ಇಲ್ಲಿ ಗಂಡಸರು, ಹೆಂಗಸರಿಗೆ ಮಾತ್ರವಲ್ಲ, ಮಂಗಳಮುಖಿಯರಿಗೂ ಪ್ರತ್ಯೇಕ ಕೊಠಡಿಗಳಿವೆ ಗೊರಗುಂಟೆ ಪಾಳ್ಯದಲ್ಲಿ ನಿರ್ಮಾಣವಾದ ಸಾರ್ವಜನಿಕ ಉಚಿತ ಸಂಚಾರಿ ಶೌಚಾಲಯ ಸ್ವಂತ ಖರ್ಚಿನಲ್ಲಿ ಸಂಚಾರಿ ಶೌಚಾಲಯ ನಿರ್ಮಿಸಿದ ಪಿಎಸ್ ಐ ಶಾಂತಪ್ಪ ಜಡೆಮ್ಮನವರ್, ಶಾಂತಪ್ಪ ಜಡೆಮ್ಮನರ್ ಪಿ ಎಸ್ ಐ ಕೆಣಿಗಲ್ಲ್ ಗ್ರಾಮದ,ಕುರುಗೋಡ್ ತಾಲ್ಲೂಕ್, ಬಳ್ಳಾರಿ ಜಿಲ್ಲೆ ತನ್ನ ಸ್ವಂತ ಹಣದಿಂದಬೆಂಗಳೂರಿನ‌ ಗೊರಗುಂಟೆಪಾಳ್ಯ ಬಸ್ ಸ್ಟ್ಯಾಂಡ್ ನಲ್ಲಿ  ಮೊಬೈಲ್ ಶೌಚಾಲಯ ನಿರ್ಮಿಸಿದ ಮಾದರಿ ವ್ಯಕ್ತಿ.  ಹೊರಗಿನ ಊರುಗಳಿಂದ  ಬೆಂಗಳೂರಿಗೆ ಬರುವ ಮಹಿಳೆಯರು ಶೌಚಾಲಯಕ್ಕಾಗಿ ಪರದಾಡುತ್ತಿದ್ದನ್ನ ಗಮನಿಸಿ  ಈ ವಿಚಾರದ ಬಗ್ಗೆ ಬಿಬಿಎಂಪಿ ಹಾಗೂಸ್ಥಳೀಯ ಆಡಳಿತ ವ್ಯವಸ್ಥೆಗಳಿಗೆ ಸಾಕಷ್ಟು  ಮನವಿ ಸಲ್ಲಿಸಿದ ನಂತರದಲ್ಲಿಅವರುಗಳು  ತೋರಿದ ತಾತ್ಸಾರದ ಮನೋಭಾವನೆಗೆ ಬೇಸತ್ತು, ತನ್ನ ಸ್ವಂತ ಹಣದಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸಿದ ಮಹಿಳೆಯರ ಪಾಲಿಗೆಆಪಧ್ಬಾಂಧವನಾದ  ಮೇರು ವ್ಯಕ್ತಿತ್ವ, ಪೊಲೀಸರ ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದಾಗಿ ಬಿಂಬಿಸುತ್ತಾ  ದಿನಗಟ್ಟಲೇ ಬಾಯಿಬಡಿದುಕೊಳ್ಳುವ ಮಾಧ್ಯಮಗಳಿಗಾಗಲೀ - ಸೋಷಿಯಲ್ ಮೀಡಿಯಾಖಾತೆದಾರರಿಗಾಗಲೀ ಪೊಲೀಸರ ಮಾನವೀಯ ಕೆಲಸಗಳು ಕಣ್ಣಿಗೆ ಕಾಣದಂತಾಗುವುದು,ಮಹಾ...

ಶೃಂಗೇರಿ,ಸ್ಕೂಲ್ ಟ್ರಿಪ್ ವಾಹನ ಅಪಘಾತ,ಅದೃಷ್ಟವಶಾತ್‌ ಮಕ್ಕಳು ಅಪಾಯದಿಂದ ಪಾರು,

Image
  ಶೃಂಗೇರಿ:- ತಾಲೂಕಿನ ಮೆಣಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಶಿಡ್ಲೆ ಗಣಪತಿ ದೇವಸ್ಥಾನದ ಬಳಿ ಶಾಲಾ ಮಕ್ಕಳಿದ್ದ ಸ್ಕೂಲ್ ಟ್ರಿಪ್ ಓಮಿನಿ ಕಾರಿಗೆ ಇನೋವಾ ಕಾರ್ ಗುದ್ದಿದ ಪರಿಣಾಮ ಓಮಿನಿ ಕಾರ್ ಪಲ್ಟಿಯಾಗಿದ್ದು ಅದೃಷ್ಟವಶಾತ್ ವಾಹನದಲ್ಲಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ʼʼವೈಟ್ ಬೋರ್ಡ್ ಕಾರಿನಲ್ಲಿ ಸ್ಕೂಲ್ ಟ್ರಿಪ್,, ಅನಾಹುತವಾದಲ್ಲಿ ಜವಾಬ್ದಾರರು ಯಾರು ?  ಸಂಬಂಧ ಪಟ್ಟ ಅಧಿಕಾರಿಗಳು ಉತ್ತರಿಸಿ, ಓಮ್ನಿ ಹಾಗೂ ಇನೋವಾ ನಡುವಿನ ಅಪಘಾತದಲ್ಲಿ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ವೈಟ್ ಬೋರ್ಡ್ ಹೊಂದಿದ ಓಮ್ನಿ ಕಾರಿನಲ್ಲಿ ಸುಮಾರು 10 ಮಂದಿ ಶಾಲಾ ಮಕ್ಕಳಿದ್ದರು ಎಂದು ಹೇಳಲಾಗಿದೆ. ಒಂದು ವೇಳೆ ಯಾರಾದರೂ ತೀವ್ರತರವಾದ ಗಾಯಕ್ಕೀಡಾದಲ್ಲಿ ಅಥವಾ ಬೇರಾವುದೇ ಅಪಾಯಗಳಾಗಿದ್ದಲ್ಲಿ ಯಾವುದೇ ವಿಮೆ ಸಿಗುವುದಿಲ್ಲ, ಅಂತಹ ಸಂಧರ್ಭದಲ್ಲಿ ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬಂದಿದೆ. ಈ ರೀತಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗಾಗಿ ಬಳಸುತ್ತಿರುವುದರ ಕುರಿತು RTO ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕಿದೆ. 🖋 ಮಜೀದ್ ಕೊಪ್ಪ 

ಕೊಪ್ಪ, ಗಾಂಜ ಸೇವನೆ ಆರೋಪಿಯ ಬಂಧನ

Image
  ಕೊಪ್ಪ:- ಹರಂದೂರು ಕುವೆಂಪುನಗರದ ಮೂರಾರ್ಜಿ ಶಾಲೆಯ ಹತ್ತಿರದ ರಸ್ತೆಯಲ್ಲಿ ರಾಮಚಂದ್ರ ಬಿನ್ ಶಿವಮೂರ್ತಿ ಕುವೆಂಪು ನಗರ ಹರಂದೂರು ಇವರು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದರು . ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯದಲ್ಲಿ ದೃಢಪಟ್ಟಿದ್ದು , ಅರೋಪಿ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ . ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣಾ ಪಿಎಸ್‌ಐ ಶ್ರೀನಾಥ ರೆಡ್ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು, 🖊️ಮಜೀದ್ ಕೊಪ್ಪ

ಚಿಕ್ಕಮಗಳೂರು ಮೂಲದ ಗಣೇಶ್ ಎಂಬ ಯೋಧನ ಮೃತ ದೇಹವು ಬಿಹಾರದಲ್ಲಿ ಪತ್ತೆ,

Image
  ಚಿಕ್ಕಮಗಳೂರು:- ತಾಲೂಕಿನ ಖಾಂಡ್ಯ ಹೋಬಳಿಯ ಮಸೀಗದ್ದೆ ಮೂಲದ ಭಾರತೀಯ ಸೇನೆಯ ಯೋಧ ಗಣೇಶ್ ಅವರು ಏಪ್ರಿಲ್ 24 ರಂದು ಊರಿಗೆ ಬಂದಿದ್ದು ಜೂನ್ 09 ರಂದು ಮನೆಯಿಂದ ವಾಪಸ್ ಕರ್ತವ್ಯದ ಸಲುವಾಗಿ ತೆರಳಿದ್ದರು ಎನ್ನಲಾಗಿದೆ . ವಾಪಸ್ ಗುವಾಹಟಿಗೆ ಸಾಗುವಾಗ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಅವರ ಸಾವಿಗೆ ನಿಖರ ಕಾರಣಗಳೇನು ಎಂದು ಈ ವರೆಗೆ ತಿಳಿದುಬಂದಿಲ್ಲ .  ಗಣೇಶ್ ಅವರು ಮಸಿಗದೆಯಿಂದ ವಾಪಸ್ ಗುವಾಹಟಿಗೆ ಸಾಗುವಾಗ ಮೃತಪಟ್ಟಿದ್ದಾರೆ . ಕಿಶನ್‌ಗಂಜ್ ಪ್ರದೇಶದಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದೇವೆ ಎಂದು ಸೇನೆಯ ತಂಡದವರು ತಿಳಿಸಿದ್ದಾರೆ . ಪಾರ್ಥಿವ ಶರೀರವನ್ನು ಇನ್ನು ಎರಡು ದಿನದಲ್ಲಿ ಕಳಿಸಬಹುದು, ಸಂಬಂಧಪಟ್ಟವರೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದೇವೆ ,  ತಾಲೂಕಿನ ಖಾಂಡ್ಯ ಹೋಬಳಿ ಮಸೀಗದ್ದೆಯ ಯೋಧ ಗಣೇಶ್ ಅವರು ಬಿಹಾರದಲ್ಲಿ ಆಕಸ್ಮಿಕವಾಗಿ ಮೃತಪಟ್ಟಿದ್ದ ವಿಚಾರ ತಿಳಿದು ವೀರ ಯೋಧ ಗಣೇಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಶಾಸಕ ಟಿ ಡಿ ರಾಜೇಗೌಡ ಹಾಗೂ ಮಾಜಿ ಶಾಸಕ ಡಿ ಎನ್ ಜೀವರಾಜ್,  ಸಾಂತ್ವಾನ ಹೇಳಿದ್ದಾರೆ.ಸೇನಾ ಕಮಾಂಡೆಂಟ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಮೃತ ಯೋಧನ ಪಾರ್ಥಿವ ಶರೀರವನ್ನು ಊರಿಗೆ ತರುವ ವ್ಯವಸ್ಥೆಯ ಮತ್ತು ಅಂತಿಮ ಸಂಸ್ಕಾರ ನಡೆಸುವ ಕುರಿತು ಚರ್ಚೆ ನಡೆಸಿದೆ ಎಂದು ತಿಳಿಸಿದ್ದಾರೆ . 🖊️ ವೀರಮಣಿ,

ರಾಜ್ಯದಲ್ಲಿ ಸರ್ಕಾರಿ ಗೋ ಶಾಲೆ,

Image
  ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗೆ ಒತ್ತು ನೀಡುವ ಸಲುವಾಗಿ ಹಾಗೂ ಗೋವುಗಳ ಉಳಿವಿಗಾಗಿ ಹೆಜ್ಜೆಯಿಟ್ಟಿರುವ ರಾಜ್ಯ ಸರ್ಕಾರ ಜುಲೈ ತಿಂಗಳಿನಲ್ಲಿ ಐದು ಗೋಶಾಲೆಗಳನ್ನು ಲೋಕಾರ್ಪಣೆ ಮಾಡಲಿದೆ . ಗೋಹತ್ಯಾ ನಿಷೇಧ ಕಾಯ್ದೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅನುಷ್ಟಾನಕ್ಕೆ ತಂದು ಒಂದೆಡೆಯಿಂದ ಗೋವುಗಳ ಉಳಿವಿಗಾಗಿ ಒಂದು ಹೆಜ್ಜೆ ಇಟ್ಟಿದ್ದರೆ , ಇನ್ನೊಂದೆಡೆ ಅವುಗಳ ಮೇವು ಹಾಗೂ ಸುರಕ್ಷತೆಯ ಸಲುವಾಗಿ ಗೋಶಾಲೆಗಳ ನಿರ್ಮಾಣ ಮಾಡುತ್ತಿದೆ . ಪ್ರಾಥಮಿಕ ಹಂತದಲ್ಲಿ ಜುಲೈ ತಿಂಗಳಿನಲ್ಲಿ ಚಿಕ್ಕಮಗಳೂರು , ವಿಜಯಪುರ , ಹಾವೇರಿ , ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗೋಶಾಲೆಯನ್ನು ಲೋಕಾರ್ಪಣೆ ಮಾಡುವ ಸಲುವಾಗಿ ಸಿದ್ಧತೆಗಳು ಆರಂಭವಾಗಿದೆ . ನಿರ್ಮಾಣ ಮಾಡಿರುವ ಈ ಗೋಶಾಲೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದು ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ , ಕೊಟ್ಟಿಗೆಗಳನ್ನು ನಿರ್ಮಾಣ ಮಾಡಲಾಗಿದೆ . ಗೋವುಗಳ ಆರೋಗ್ಯದ ಮೇಲೆ ನಿಗಾವಹಿಸಲು ಪಶುವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ . ಪ್ರತಿಯೊಂದು ಗೋಶಾಲೆ ಪ್ರಾರಂಭ ಮತ್ತು ನಿರ್ವಹಣೆಗೆ 50 ಲಕ್ಷ ರೂ . ಗಳನ್ನು ಸರ್ಕಾರ ನಿಗದಿಪಡಿಸಿದೆ . ಪ್ರತಿಯೊಂದು ಗೋಶಾಲೆಗಳಲ್ಲಿ 100 ರಿಂದ 150 ಗೋವುಗಳ ಪೋಷಣೆಗೆ ಅಗತ್ಯವಿರುವಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ . 🖊️ ವೀರಮಣಿ

ಆಟೋ ಪಲ್ಟಿ:- 4 ಪುಟಾಣಿಮಕ್ಕಳಿಗೆ ಗಾಯ,

Image
  ಆಟೋ ಪಲ್ಟಿ:- 4 ಪುಟಾಣಿಮಕ್ಕಳಿಗೆ ಗಾಯ, ಕೊಪ್ಪ:- ಪಟ್ಟಣದ ಅರಳಿಕಟ್ಟೆ ಗಣಪತಿ ದೇವಾಲಯದ ಹಿಂಬಾಗದಲ್ಲಿರುವ ಎಸ್‌ವಿಟಿ ರಸ್ತೆಯಲ್ಲಿ ಇಂದು ಸಂಜೆ ಶಾಲಾಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾದ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡಿದ್ದು, ದೊಡ್ಡ ದುರಂತವೊಂದು ತಪ್ಪಿದೆ. ಸೆಂಟ್ ಜೋಸೆಫ್‌ ಕಾನ್ವೆಂಟ್‌ ನಿಂದ 8 ಶಾಲಾಮಕ್ಕಳನ್ನು ತುಂಬಿಸಿಕೊಂಡು ಇಳಿಜಾರು ರಸ್ತೆಯಲ್ಲಿ ಸಾಗುತ್ತಿರುವಾಗ ಏಕಾಏಕಿ ಬ್ರೇಕ್‌ ಫೇಲ್ ಆಗಿ ಆಟೋ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಚಾಲಕ ರಾಘವೇಂದ್ರನಗರದ ಪಳನಿ ಸ್ವಾಮಿ(ಮಣಿ) ತಕ್ಷಣವೇ ಅಟೋವನ್ನು ಸಮತಟ್ಟಾದ ಎಲ್‌ಐಸಿ ರಸ್ತೆಯ ಕಡೆಗೆ ತಿರುಗಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.  ಈ ಸಂದರ್ಭದಲ್ಲಿ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಚಾಲಕ ಹಾಗೂ ನಾಲ್ವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ರಸ್ತೆಯಲ್ಲಿ ಕಾನ್ವೆಂಟ್‌ ಶಾಲೆ ಹಾಗೂ ಜಿಜೆಸಿ ಹೈಸ್ಕೂಲುಗಳು ಆಸುಪಾಸಿನಲ್ಲಿದ್ದು ಸಂಜೆ ಶಾಲೆಬಿಡುವ ಸಂದರ್ಭದಲ್ಲಿ ಏಕಕಾಲದಲ್ಲಿ ನೂರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚಾರಿಸುತ್ತಾರೆ‌. ಇದೇ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು ಅದೃಷ್ಟವಶಾತ್‌ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ.  ಗಾಯಗೊಂಡಿದ್ದ ಪುಟಾಣಿಗಳಿಗೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೊಪ್ಪ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. 🖋 ಮಜೀದ್ ಕೊಪ್ಪ...

ನಕಲಿ ಸ್ವಾಮೀಜಿಗಳ ಬಂಧನ, ವೇಷ ಹಾಕಿಕೊಂಡು ಸುತ್ತಾಡುತ್ತಿದ್ದ ಮೂವರು ಅರೆಸ್ಟ್

Image
  ನಕಲಿ ಸ್ವಾಮೀಜಿಗಳ ಬಂಧನ, ವೇಷ ಹಾಕಿಕೊಂಡು ಸುತ್ತಾಡುತ್ತಿದ್ದ ಮೂವರು ಅರೆಸ್ಟ್ ನೆಲಮಂಗಲ:ಸ್ವಾಮೀಜಿ ವೇಷಭೂಷಣ ತೊಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಮೂವರು ನಕಲಿ ಮಠಗಳ ಹೆಸರು ಹೇಳಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು. ಸ್ವಾಮೀಜಿಯ ವೇಷಭೂಷಣ ತೊಟ್ಟು ನೇರವಾಗಿ ಮನೆಗೆ ನುಗ್ಗುತ್ತಿದ್ದರು. ಹಣ ಕೊಟ್ಟಿಲ್ಲ ಅಂದರೆ ನಿಂದಿಸಿತ್ತಿದ್ದರು. ಆರೋಪಿಗಳು ವಾರಕ್ಕೊಮ್ಮೆ ಒಂದೊಂದು ಏರಿಯಾದಲ್ಲಿ ಗುರುತಿಸಿಕೊಳ್ಳುತ್ತಿದ್ದರಂತೆ. ಮಲ್ಲಸಂದ್ರಕ್ಕೆ ಬಂದು ಗೂಂಡಾವರ್ತನೆ ತೋರುತ್ತಿದ್ದಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ರಾಷ್ಟ್ರ ಕವಿಗೆ ಅವಮಾನ,ಸೂಕ್ತ ಕ್ರಮ ಕೈಗೊಳ್ಳಲು ಒಕ್ಕಲಿಗರ ವೇದಿಕೆ ಆಗ್ರಹ,

Image
  ರಾಷ್ಟ್ರ ಕವಿಗೆ ಅವಮಾನ,ಸೂಕ್ತ ಕ್ರಮ ಕೈಗೊಳ್ಳಲು ಒಕ್ಕಲಿಗರ ವೇದಿಕೆ ಆಗ್ರಹ, ಶೃಂಗೇರಿ:-  ಕುವೆಂಪು ಅವರ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವ ಆರೋಪಿಗಳ ವಿರುದ್ಧ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಯುವ ಒಕ್ಕಲಿಗರ ವೇದಿಕೆ ಪದಾಧಿಕಾರಿಗಳು ತಹಶೀಲ್ದಾರ್ ಅವರನ್ನು ಆಗ್ರಹಿಸಿದ್ದಾರೆ . ಯುಗದಕವಿ , ಜಗದಕವಿ , ವಿಶ್ವ ಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ತಿರುಚಿದ ಅಪಮಾನ ಮಾಡಿದ ಆರೋಪ ಹೊಂದಿರುವ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದ ಲಕ್ಷ್ಮಣ್ ಆಕಾಶ್ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಯುವ ಒಕ್ಕಲಿಗರ ವೇದಿಕೆಯ ಪದಾಧಿಕಾರಿಗಳು ಶೃಂಗೇರಿಯ ತಹಶೀಲ್ದಾರ್ ಅವರನ್ನು ಕೋರಿದರು . ರೋಹಿತ್ ಚಕ್ರತೀರ್ಥ ಪರಿಷ್ಕರಣೆ ನಡೆಸಿರುವ ಪಠ್ಯವನ್ನು ತಡೆಹಿಡಿದು , ಹಳೇ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಬೇಕೆಂದು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರು . ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು . ಈ ಸಂದರ್ಭಲ್ಲಿ ಯುವ ಒಕ್ಕಲಿಗ ವೇದಿಕೆ ತಾಲ್ಲೂಕು ಅ...