Posts

Showing posts from May, 2022

ನರಸಿಂಹರಾಜಪುರ, ನಿಯಂತ್ರಣ ತಪ್ಪಿದ ಬೈಕ್,ಸ್ಥಳದಲ್ಲೇ ಅಸುನೀಗಿದ ಸವಾರ

Image
ನಿಯಂತ್ರಣ ತಪ್ಪಿದ ಬೈಕ್,ಸ್ಥಳದಲ್ಲೇ ಅಸುನೀಗಿದ ಸವಾರ   ನರಸಿಂಹರಾಜಪುರ:- ತಾಲೂಕಿನ ಅಳೆಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದ್ದು ಬೈಕ್ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ . ಮೃತ ದುರ್ದೈವಿಯನ್ನು ಕಳಸದ ಬಾಳೆಹೊಳೆ ಮೂಲದ ವಿಶ್ವನಾಥ್ ಹೊಳ್ಳ ( 55 ) ಎಂದು ಗುರುತಿಸಲಾಗಿದೆ. ಶಿವಮೊಗ್ಗದಿಂದ ಬಾಳೆಹೊಳೆ ಕಡೆಗೆ ತೆರಳುವಾಗ ಬೈಕ್ ನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ .  ಘಟನಾ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . 🖊️ ವೀರಮಣಿ,

ಸವಮಿ ಯ ಜೀವ ಉಳಿಸಿಕೊಳ್ಳುಲು ದಾನಿಗಳ ನಿರೀಕ್ಷೆ ಯಲ್ಲಿ ಬಡ ಕುಟುಂಬ,

Image
ಕೊಪ್ಪ:- ತಾಲ್ಲೂಕಿನ ಯುವತಿಯೊಬ್ಬರು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಮೊದಲೇ ಬಡತನದ ಕಷ್ಟದಲ್ಲಿದ್ದ ಕುಟುಂಬಕ್ಕೆ ಭಗವಂತ ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದಾನೆ. ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಆಕೆಯ ಪಾಲಕರು ಪ್ರತಿನಿತ್ಯ ಒದ್ದಾಡುತ್ತಿದ್ದಾರೆ. 20 ವರ್ಷ ಪ್ರಾಯದ ಸವಮಿ ಗೌಡಳ ಜೀವ ಉಳಿಸಲು ಕಳಕಳಿ. ಸಾವಿರಾರು ಕನಸುಗಳನ್ನು ಹೊತ್ತಿದ್ದ ಚಿಗುರು ಜೀವದ ಕನಸುಗಳು ನಂದಿ ಹೋಗದಿರಲಿ.. ನವಮಿಯ ಜೀವಕ್ಕೆ ಬೆಲೆ ಕಟ್ಟು ಓ ಸಮಾಜ... ಪೈನಲ್ ಈಯರ್ ಡಿಗ್ರಿ ವಿದ್ಯಾರ್ಥಿನಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮಂಡಲ ಗ್ರಾಮದ ನವಮಿ ಗೌಡ ಮಾರಕ ಬೋನ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಈ ಸಹೋದರಿಯ ಜೀವಕ್ಕಾಗಿ ಕುಟುಂಬವು ಈಗಾಗಲೇ ಲಕ್ಷಾಂತರ ರುಪಾಯಿ ಹಣ ಚಿಕಿತ್ಸೆಗೆ ವ್ಯಯಿಸಿದೆ. ಮತ್ತು ಲಕ್ಷಾಂತರ ರುಪಾಯಿ ಸಾಲಕ್ಕೆ ಗುರಿಯಾಗಿ ಇದೀಗ ಕೊನೆಯದಾಗಿ ಸಮಾಜದ ಹೃದಯವಂತ ದಾನಿಗಳ ಮುಂದೆ ಸಹಾಯ ಯಾಚಿಸಿದೆ. Name : NIKSHITH HV Ac nu : 50100506104387 IFSC code : HDFC0005226 Branch : Koppa Branch Google pay phone pay & contact number 9113630282 ಹೆಚ್ಚಿನ ಮಾಹಿತಿಗಾಗಿ,ಕಾರುಣ್ಯ ನಿಧಿ ಕರ್ನಾಟಕ ® ಹರ್ಷದ್ ಕೊಪ್ಪ  +91 89714 35963 ಜಲೀಲ್ ಮೋನು, +91 86180 81627 ನಿಚ್ಚು,ಮಂಗಳೂರ್ +91 84950 00313 🖋 ವೀರಮಣಿ,  

ಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಯುವಕ ಮೃತವಾಗಿ ಪತ್ತೆ,

Image
  ನರಸಿಂಹರಾಜಪುರ:- ಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯುಲು ಹೋಗಿದ್ದ ಯುವಕ ಆಕಸ್ಮಿಕವಾಗಿ ಸಾವನಪ್ಪಿದ್ದು, ಮೃತ ದೇಹ ಭದ್ರಾ ಹಿನ್ನೀರಿನಲ್ಲಿ ತೇಲುವ ರೂಪದಲ್ಲಿ ಮೀನುಗಾರರಿಗೆ ಕಂಡುಬಂದಿದ್ದು ಈ ವಿಷಯ ತಿಳಿದು ಮಾನ್ಯ ಶಾಸಕರು  ಪೋಲಿಸ್ ಇಲಾಖೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹದವನ್ನು ಕುಟುಂಬದವರಿಗೆ ಹಸ್ತಾಂತರಿಸುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ‌ ಸೂಚನೆ ನೀಡಿದರು, 🖋ವೀರಮಣಿ

ಕೈ ಪಾಲಾದ ಹರಿಹರಪುರ ಗ್ರಾಮ ಪಂಚಾಯಿತಿ ಅಧಿಕಾರ,

Image
  ಹರಿಹರಪುರ ಪಂಚಾಯಿತಿ ಯಲ್ಲಿ 5 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 4 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು . ಈ ಹಿಂದೆ ಅಧ್ಯಕ್ಷರಾಗಿದ್ದ ಮೊಹಮ್ಮದ್ ಶರೀಫ್ ಅವರ ಅಧ್ಯಕ್ಷ ಅವಧಿ ಮುಗಿದ ನಂತರ ವೆಂಕಟೇಶ್ ಎಂಬುವವರು ಅಧ್ಯಕ್ಷರಾಗಬೇಕಿತ್ತು , ಆದರೆ ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಈ ಬೆಳವಣಿಗೆಯಲ್ಲಿ ನಾಲ್ವರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ಮೊಹಮ್ಮದ್ ಶರೀಫ್ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ . ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ನಂತರ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿ ಬೆಂಬಲಿತ ಮೊಹಮ್ಮದ್ ಶರೀಫ್ ಅವರು ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ದಿಢೀರ್ ಬೆಳವಣಿಗೆಯಲ್ಲಿ ಕಮಲಕ್ಕೆ ಗುಡ್ ಬೈ ಹೇಳಿ ಬಿಜೆಪಿಗೆ ಹೂ ಮುಡಿಸಿ ಕಾಂಗ್ರೆಸ್ ಜೊತೆಗೆ ಸ್ನೇಹ ಚಾಚಿದ್ದಾರೆ . ಈ ಮೂಲಕ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಪುನಃ ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ . 🖊️ ವೀರಮಣಿ

ಕೊಪ್ಪ :ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕನಿಂದ ಮಹಿಳೆಯ ಮೇಲೆ ಹಲ್ಲೆ,

Image
  ಮಹಿಳೆ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಆಕೆಯ ಬಳಿ ಲಗೇಜ್ ಹಾಗೂ ಪುಟ್ಟ ಮಕ್ಕಳು ಮಲಗಿದ್ದ ಕಾರಣ ಮತ್ತು ಸೀಟಿನ ಕೆಳಭಾಗದಲ್ಲಿ ಅವರ ಚಪ್ಪಲಿಗಳು ಸಿಲುಕಿಕೊಂಡಿದ್ದರಿಂದ ಇಳಿಯುವುದು ತಡವಾಗಿದೆ ಈ ಸಂದರ್ಭದಲ್ಲಿ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ . :- ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಬೆಂಗಳೂರಿನ ಯಶವಂತಪುರಕ್ಕೆ ಕೆ.ಎಸ್ . ಆರ್.ಟಿ.ಸಿ ರಾಜಹಂಸ ಬಸ್ಸಿನ ಮೂಲಕ ತೆರಳುತ್ತಿದ್ದ ಸಿರಾಜ್ ಉನ್ನೀಸಾ ಎಂಬ ಮಹಿಳೆಯ ಮೇಲೆ ಬೆಳಗ್ಗಿನ ಜಾವ ಬಸ್ ನಿರ್ವಾಹಕ ರವಿಕುಮಾರ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಹಲ್ಲೆಗೀಡಾದ ಮಹಿಳೆ ಮಾಡಿದ್ದಾರೆ . ಬಸ್ಸಿನಿಂದ ಕೆಳಗೆ ಇಳಿದು ತಮ್ಮ ಬಸ್ಸಿನ ಡಿಕ್ಕಿಯಲ್ಲಿಟ್ಟಿದ್ದ ತಮ್ಮ ಲಗೇಜ್ ನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ , ಬಸ್ಸಿನ ಮೇಲೆ ಹತ್ತಿ ಬೂಟು ಕಾಲಿನಿಂದ ಆಕೆಯ ಹೊಟ್ಟೆಗೆ ಒದ್ದು ಆಕೆಯ ಮುಖಕ್ಕೂ ಒದ್ದಿದ್ದಾನೆ ಎಂದು ಹಲ್ಲೆಗೀಡಾದ ಮಹಿಳೆ ತಿಳಿಸಿದ್ದಾರೆ . ಘಟನೆ ನಡೆಯುತ್ತಿದ್ದಂತೆಯೆ ಆಟೋ ಚಾಲಕರು , ಹೂ ವ್ಯಾಪಾರಿಗಳು ಸ್ಥಳಕ್ಕೆ ಬಂದು ಬಸ್ಸನ್ನು ಬದಿಗೆ ಹಾಕಿಸಿದರು ಈ ಸಂದರ್ಭದಲ್ಲಿ ನಾನು ನಿರ್ವಾಹಕನ ಬಳಿಯಿದ್ದ ಟಿಕೆಟ್ ಮಿಷನ್ ಅನ್ನು ಕಿತ್ತುಕೊಂಡೆ ನಂತರದಲ್ಲಿ ಪೊಲೀಸರು ಆಗಮಿಸಿದಾಗ ಅವರಿಗೆ ನೀಡಿರುವುದಾಗಿ ತಿಳಿಸಿದರು . ಘಟನಾ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದ...
Image
  ಬಾಳೆಹೊನ್ನೂ:- ಬನ್ನೂರು ಶಿವಣ್ಣ ಗೌಡ ಎಂಬುವವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಅಂದಿನ ಕೆಲಸ ಮುಗಿಸಿ ರಾತ್ರಿ ಮದ್ಯಪಾನ ಮಾಡುವ ಸಂದರ್ಭದಲ್ಲಿ ಕಾರ್ಮಿಕನ ಮೇಲೆ ಹಲ್ಲೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ . ರಾತ್ರಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಮಣಿ , ಶಿವಕುಮಾರ್ , ಕೃಷ್ಣ ಈ ತೋಟದ ಕೆಲಸ ಬಿಟ್ಟು ಬೇರೆ ಕಡೆಗೆ ಹೋಗೋಣ ಎಂದಿದ್ದಾರೆ . ಆದರೆ ಏಕಾಏಕಿ ಹೀಗೆ ಮಾಡುವುದು ಸಮಂಜಸವಲ್ಲ ಕೆಲಸ ಬಿಡುವ ವಿಚಾರ ಮಾಲೀಕರಿಗೆ ತಿಳಿಸೋಣ ಎಂದು ಹಲ್ಲೆಗೀಡಾದ ರವಿ ಹೇಳಿದ್ದಾನೆ , ಇಷ್ಟಕ್ಕೇ ಕೋಪಗೊಂಡ ಮಣಿ , ಶಿವಕುಮಾರ್ , ಕೃಷ್ಣ ಎಂಬ ಕಾರ್ಮಿಕರು ಕತ್ತಿ , ದೊಣ್ಣಿಯಿಂದ ರವಿ ಮೇಲೆ ಹಲ್ಲೆ ನಡೆಸಿದ್ದಾರೆ . ಗಾಯಾಳು ರವಿಗೆ ಬಾಳೆಹೊನ್ನೂರು ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು , ಘಟನಾ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ . 🖊️ವೀರಮಣಿ

ಕಳ್ಳಬಟ್ಟಿ ಅಡ್ಡೆಯ ಮೇಲೆ ಪೊಲೀಸರ ದಾಳಿ,ಆರೋಪಿಗಳು ಪರಾರಿ,!

Image
ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ, ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಕಾಫಿ ತೋಟದಲ್ಲಿ ಅಕ್ರಮವಾಗಿ ತಯಾರಿಕೆ ನಡೆಸುತ್ತಿದ್ದ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ . ಕೊಟ್ಟಿಗೆಹಾರ:-ಜಾವಳಿ ಸಮೀಪದ ಕಾಳಿಕಟ್ಟೆ ಗ್ರಾಮದಲ್ಲಿ ಕಳ್ಳಭಟ್ಟಿ ಅಡ್ಡೆಯ ಮೇಲೆ ಬಾಳೂರು ಪೋಲಿಸರು ದಾಳಿ ನಡೆಸಿ ಕಳ್ಳಭಟ್ಟಿ ವಶ ಪಡಿಸಿಕೊಂಡಿದ್ದಾರೆ. ಕಾಳಿಕಟ್ಟೆ ಗ್ರಾಮದ ಸುರೇಶ್ ಎಂಬುವವರ ತೋಟದಲ್ಲಿದ್ದ ಕಳ್ಳಭಟ್ಟಿ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿ ೨ ಲೀಟರ್ ಕಳ್ಳಭಟ್ಟಿ ಹಾಗೂ ಸಲಕರಣೆಗಳನ್ನು ವಶಪಡಿಸಿಕೊಂಡು ೧೦೦ ಲೀಟರ್ ಕಳ್ಳಭಟ್ಟಿ ಕೊಳೆಯನ್ನು ನಾಶ ಪಡಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಾಳೂರು ಠಾಣೆ ಪಿಎಸ್‌ಐ ಪವನ್ ಕುಮಾರ್ ಸಿ.ಸಿ, ಸಿಬ್ಬಂದಿಗಳಾದ ಮಹೇಶ್, ವಸಂತ್, ಮನು, ಪ್ರವೀಣ್, ಅಭಿಜಿತ್, ಸತೀಶ್, ಓಂಕಾರ್, ಹೇಮಂತ್, ಪ್ರದೀಪ್ ಇದ್ದರು. 🖊️ವೀರಮಣಿ,  

ಸಿಂಹದ ಬಾಯಿಗೆ ಬೆರಳಿಟ್ಟ, ಕೊನೆಗೆ ಏನಾಯಿತು ಈ ವಿಡಿಯೋ ನೋಡಿ,

Image
  ಜಮೈಕಾ:- ಝೂ ಕೀಪರ್ ನಿರ್ಲಕ್ಷ್ಯ ದಿಂದ ತನ್ನ ಬೆರಳನ್ನು ಕಳೆದುಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ,  ಸಿಂಹದ ಕುತ್ತಿಗೆಯನ್ನು ಮತ್ತು ತಲೆಯನ್ನು ಸವರುತ್ತಿರುವಾಗ ಅಕಸ್ಮಾತ್ ಸಿಂಹದ ಬಾಯಿಗೆ ಬೆರಳು ತಾಗಿತು ಇದನ್ನು ಬಿಡದ ಸಿಂಹ ಬೆರಳನು ತಿಂದೆ ಬಿಟ್ಟಿತು,

ಭಾರತ ಸೇರಿದಂತೆ 16 ದೇಶಗಳಿಗೆ ಸೌದಿ ಪ್ರಜೆಗಳ ಪ್ರಯಾಣ ನಿಷೇಧ,!

Image
 ರಿಯಾದ್ : ಸೌದಿ ಪ್ರಜೆಗಳು ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ . ಈ ದೇಶಗಳಲ್ಲಿನ ಕೋವಿಡ್ ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ ನಿಷೇಧವನ್ನು ವಿಧಿಸಲಾಗಿದೆ . ಪಾಸ್‌ಪೋರ್ಟ್‌ಗಳ ನಿರ್ದೇಶನಾಲಯ ( ಜವಾಝಾತ್ ) ಶನಿವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ . ಸೌದಿ ಪ್ರಜೆಗಳು ಭಾರತ , ಲೆಬನಾನ್ , ಸಿರಿಯಾ , ಟರ್ಕಿ , ಇರಾನ್ , ಅಫ್ಘಾನಿಸ್ತಾನ , ಯೆಮೆನ್ , ಸೊಮಾಲಿಯಾ , ಇಥಿಯೋಪಿಯಾ , ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ , ಲಿಬಿಯಾ , ಇಂಡೋನೇಷಿಯಾ , ವಿಯೆಟ್ನಾಂ , ಅರ್ಮೇನಿಯಾ , ಬೆಲಾರಸ್ ಮತ್ತು ವೆನೆಜುವೆಲಾಗಳಿಗೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ . ಈ ದೇಶಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಪ್ರತಿದಿನ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನಿಷೇಧ ಹೇರಲಾಗಿದೆ . ಆದಾಗ್ಯೂ , ಸೌದಿ ಅರೇಬಿಯಾದಲ್ಲಿ ಮಂಗನ ಕಾಯಿಲೆಯ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ .

ಜೋಡಿ ಮೃತ ದೇಹ ಪತ್ತೆ,ಕಾರಿನೊಳಗೆ ಬೆಂಕಿ ಹಚ್ಚಿಕೊಂಡ ಜೋಡಿ,

Image
ಉಡುಪಿ: ಬೆಂಗಳೂರು ಮೂಲದ ಜೋಡಿಯೊಂದು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಹೆಗ್ಗುಂಜೆಯ ಕೊತ್ತೂರಿನಲ್ಲಿ ಸಂಭವಿಸಿದೆ. ಮೃತರನ್ನು ಯಶವಂತ್‌ ಯಾದವ್‌ (22) ಮತ್ತು ಜ್ಯೋತಿ (20) ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮೂರು ದಿನಗಳ ಹಿಂದೆ ಹೆಬ್ಬಾಳದಿಂದ ನಾಪತ್ತೆಯಾಗಿದ್ದರು. ಇವರಿಬ್ಬರ ಮದುವೆಗೆ ಎರಡು ಕುಟುಂಬಗಳ ವಿರೋಧವಿದ್ದ ಹಿನ್ನೆಲೆ ಮನೆ ಬಿಟ್ಟು ಎರಡು ದಿನಗಳ ಹಿಂದೆ ಮದುವೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೃತ ಯಶವಂತ್ ಯಾದವ್ ಮತ್ತು ಜ್ಯೋತಿ ಭಾನುವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗಿರಬೇಕೆಂದು ಸ್ಥಳಕ್ಕೆ ದೌಡಾಯಿಸಿದ್ದು, ಈ ಸಂದರ್ಭ ಕಾರೊಂದು ಹೊತ್ತಿ ಉರಿಯುತ್ತಿತ್ತು. ಇತ್ತ ಈ ಜೋಡಿಗಳು ಮೃತ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದರು. ಯಶವಂತ್ ಯಾದವ್ ಮತ್ತು ಜ್ಯೋತಿ ಜೋಡಿ ಬೆಂಗಳೂರಿನಿಂದ ಮಂಗಳೂರಿನವರೆಗೆ ಬೈಕ್‌ನಲ್ಲಿ ಬಂದಿದ್ದು, ಬೆಂಗಳೂರಿನಿಂದ ಹೊರಟಾಗಲೇ ಅಲ್ಲಿ ಕಾರು ಬಾಡಿಗೆಗೆ ನಿಗದಿ ಮಾಡಿದ್ದಾರೆ. ಮಂಗಳೂರಿನ ಅಲ್ಮಿಸ್ಬಾ ಕಾರ್ ರೆಂಟಲ್ ಸರ್ವಿಸ್‌ನಲ್ಲಿ ಕಾರನ್ನು ಬಾಡಿಗೆಗೆಂದು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿ ಬೆಂಗಳೂರಿನಿಂದ ಮಂಗಳೂರಿಗೆ ಬೈಕಿನಲ್ಲಿ ಬಂದು ಕಾರ್ ರೆಂಟಲ್ ಸರ್ವಿಸ್‌ನ ಎದುರು ಬೈಕ್‌ನ್...

ಅತ್ಯಾಚಾರ- ಕೊಲೆ ಆರೋಪಿಗಳ ಎನ್ ಕೌಂಟರ್ ನಕಲಿ,ಸುಪ್ರೀಂಕೋರ್ಟ್ ಸಮಿತಿ ಸ್ಪೋಟಕ ವರದಿ

Image
  ಹೈದ್ರಾಬಾದ್ ಪಶು ವೈದ್ಯೆಯ ಅತ್ಯಾಚಾರ- ಕೊಲೆ ಆರೋಪಿಗಳ ಎನ್ ಕೌಂಟರ್ ನಕಲಿ; ಸುಪ್ರೀಂಕೋರ್ಟ್ ಸಮಿತಿ ಸ್ಪೋಟಕ ವರದಿ ಹೈದರಾಬಾದ್‌;2019ರಲ್ಲಿ ನಡೆದ ಪಶುವೈದ್ಯೆಯ‌‌ ಸಾಮೂಹಿಕ ಅತ್ಯಾಚಾರ- ಕೊಲೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ʼನಕಲಿʼ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ಹೇಳಿದೆ. ಆರೋಪಿಗಳಲ್ಲಿ ನಾಲ್ವರಲ್ಲಿ ಮೂವರು ಅಪ್ರಾಪ್ತ ವಯಸ್ಕರಾಗಿದ್ದರು. ಪ್ರಕರಣದ ತನಿಖೆಯಲ್ಲಿ ಎದ್ದುಕಾಣುವ ಲೋಪಗಳನ್ನು ಆಯೋಗವು ಎತ್ತಿ ತೋರಿಸಿದೆ ಮತ್ತು 10 ಪೊಲೀಸರನ್ನು ಕೊಲೆಗಾಗಿ ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದೆ. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಮೂವರು ಸದಸ್ಯರ ಸಮಿತಿ ಈ ಕುರಿತು ಸುಪ್ರೀಂಕೋರ್ಟ್ ಗೆ ವರದಿ ನೀಡಿದೆ. ಬಾಂಬೆ ಹೈಕೋರ್ಟ್ನ ಮಾಜಿ ನ್ಯಾಯಾಧೀಶೆ ರೇಖಾ ಸೊಂಡೂರ್ ಬಲ್ಡೋಟಾ ಮತ್ತು ಸಿಬಿಐನ ಮಾಜಿ ನಿರ್ದೇಶಕ ಡಿ.ಆರ್.ಕಾರ್ತಿಕೇಯನ್ ಆಯೋಗದ ಇತರ ಸದಸ್ಯರಾಗಿದ್ದಾರೆ. ಪಶುವೈದ್ಯೆಯ ಅತ್ಯಾಚಾರ- ಕೊಲೆ ಆರೋಪಿಗಳ ಎನ್ ಕೌಂಟರನ್ನು ಕೆಲವರು ಸಂಭ್ರಮಿಸಿದ್ದರು. ಕೆಲವರು‌ ನ್ಯಾಯಾಲಯ ಶಿಕ್ಷೆ ವಿಧಿಸುವ ಮೊದಲು ಪೊಲೀಸರ ಎನ್ ಕೌಂಟರ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ನೈಜ ಆರೋಪಿಗಳ ರಕ್ಷಣೆಗೆ ಎನ್ ಕೌಂಟರ್ ನಡೆದಿದೆ ಎಂಬ ಟೀಕೆ ಕೂಡ ವ್ಯಕ್ತವಾಗಿತ್ತು.

ಕಟ್ಟಡ ಕಾರ್ಮಿಕರ,ಕಲ್ಯಾಣ ಮಂಡಳಿ ವತಿಯಿಂದ ತಮ್ಮ ಮಕ್ಕಳ ಸಾಧನೆಗೆ ಪ್ರೋತ್ಸಾಹ ಧನ,

Image
  ಕಟ್ಟಡ ಕಾರ್ಮಿಕರ,ಕಲ್ಯಾಣ ಮಂಡಳಿ ವತಿಯಿಂದ ತಮ್ಮ ಮಕ್ಕಳ ಸಾಧನೆಗೆ ಪ್ರೋತ್ಸಾಹ ಧನ, ಕಟ್ಟಡ ಕಾರ್ಮಿಕರ ಗಮನಕ್ಕೆ, ಕೊಪ್ಪ:- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ,ತಮ್ಮ ಮಕ್ಕಳ ಸಾಧನೆಗೆ ಅಗತ್ಯ ಪ್ರೋತ್ಸಾಹ ನೀಡುವ ಸಂಬಂಧ, 2021-22ನೇ( ಪ್ರಸಕ್ತ )  ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಲ್ಲಿ, ಈ ಕೆಳಕಂಡ ದಾಖಲೆಗಳನ್ನು ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿ, ಕೊಪ್ಪ ವೃತ್ತ, ಕೊಪ್ಪ, ಇಲ್ಲಿಗೆ ದಿನಾಂಕ:26-05-2022 ರೊಳಗೆ ಸಲ್ಲಿಸಲು ಸೂಚಿಸಿದೆ.  ದಾಖಲಾತಿಗಳು ೧.ಲೇಬರ್ ಕಾರ್ಡ್  ೨.ಎಸ್. ಎಸ್.ಎಲ್.ಸಿ ಫಲಿತಾಂಶ ಶೀಟ್ (ಅಂಕಪಟ್ಟಿ) ೩.ಮಗುವಿನ ಆಧಾರ್ ಕಾರ್ಡ್  ೪.ರೇಷನ್ ಕಾರ್ಡ್  ಆದಷ್ಟು ಬೇಗ ದಾಖಲೆಗಳನ್ನು ಕಛೇರಿಗೆ ಸಲ್ಲಿಸಲು ಈ ಮೂಲಕ ಸೂಚಿಸಿದೆ.  ಹಿರಿಯ ಕಾರ್ಮಿಕ ನಿರೀಕ್ಷಕರ, ಕಛೇರಿ.ಕೊಪ್ಪ ವೃತ್ತ, ಕೊಪ್ಪ. 🖊️, ಮಜೀದ್ ಕೊಪ್ಪ

ಕನ್ನಡಿಗನ ರಣ ಕಹಳೆ, ಕೆನಡಾ ಪಾರ್ಲಿಮೆಂಟಿನಲ್ಲಿ ಕನ್ನಡದಲ್ಲೇ ಆರಂಭಿಸಿದ ಮಾತು,

  ಕೆನಡಾ : ಕೆನಡಾ ಪಾರ್ಲಿಮೆಂಟ್ ನಲ್ಲಿ ಸಂಸದ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿದ್ದು , ಇದೇ ಮೊದಲ ಬಾರಿಗೆ ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡದ ಕಹಳೆ ಮೊಳಗಿದೆ . ನಾನು ನನ್ನ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದ ಸಂಸದ ಚಂದ್ರ ಆರ್ಯ ಅವರು ಕನ್ನಡದಲ್ಲಿ ಮಾತನಾಡಿದ್ದಾರೆ . ಎಲ್ಲಾದರೂ ಇರು , ಎಂತಾದರು ಇರು , ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳುವ ಮೂಲಕ ಕನ್ನಡದಲ್ಲಿ ತಮ್ಮ ಭಾಷಣವನ್ನು ಮುಗಿಸಿದ್ದಾರೆ .

ಎರಡನೇ ಮದುವೆಯಾಗಿ ಪತ್ನಿಯ ಮೇಲೆ ದೈಹಿಕ ಕಿರುಕುಳ ನೀಡುತ್ತಿರುವ ಆರೋಪವೊಂದು ಕೇಳಿ ಬಂದಿದೆ,!

Image
  ಎರಡನೇ ಮದುವೆಯಾಗಿ ಪತ್ನಿಯ ಮೇಲೆ ದೈಹಿಕ ಕಿರುಕುಳ ನೀಡುತ್ತಿರುವ ಆರೋಪವೊಂದು ಕೇಳಿ ಬಂದಿದೆ,!  ಕೊಪ್ಪ:' ತಾಲೂಕಿನ ಕಾರಗದ್ದೆ ನಿವಾಸಿ ರಂಗಪ್ಪಗೌಡ ಎಂಬುವವರು ಎರಡನೆಯ ಮದುವೆಯಾಗಿ ಪತ್ನಿಯು ಎರಡು ಬಾರಿ ಗರ್ಭವನ್ನು ಧರಿಸಿದಾಗಲೂ ಕೂಡ ಗರ್ಭಪಾತ ಮಾಡಿಸಿ ದೌರ್ಜನ್ಯ ಎಸಗಿದ್ದಾರೆ ಹಾಗೂ ಅವರ ಮೊದಲನೇ ಹೆಂಡತಿಯ ಮಕ್ಕಳನ್ನು ಸೇರಿಸಿಕೊಂಡು ತೀವ್ರತರವಾದ ದೌರ್ಜನ್ಯವನ್ನು ಎಸಗಿದ್ದಾರೆ ಎಂಬ ಆರೋಪವನ್ನು ಎರಡನೆಯ ಪತ್ನಿ ಮಾಡಿದ್ದಾರೆ, ಗಂಡ ಹಾಗೂ ಮಕ್ಕಳು ನೀನು ಮನೆಯ ಕೆಲಸದವಳು , ನಾವು ಹೇಳಿದ್ದನ್ನು ಕೇಳಿಕೊಂಡು ಮನೆಯಲ್ಲಿ ಬಿದ್ದಿರಬೇಕು ಎಂದು ಧಮ್ಮಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನಾವಶ್ಯಕವಾಗಿ ಜಗಳ ತೆಗೆಯುತ್ತಾರೆ ಹಾಗೂ ನಾಯಿಯನ್ನು ಬಿಟ್ಟು ಕಚ್ಚಿಸಿ ಕಿರುಕುಳ ನೀಡಿರುತ್ತಾರೆ ಎಂದು ರಂಗಪ್ಪಗೌಡ ಅವರ ಪತ್ನಿ ಆರೋಪಿಸಿ ಠಾಣೆಗೆ ದೂರು ಸಲ್ಲಿಸಿದ್ದಾರೆ . ಕುಟುಂಬದಲ್ಲಿ ಕಲಹ ಉಂಟುಮಾಡಿ ನಾಲ್ವರೂ ಕೂಡ ಹಲ್ಲೆಮಾಡಿ ರಂಗಪ್ಪಗೌಡ ಅವರ ಪುತ್ರನಾದ ಅಮಿತ್ ಅವರ ಜೀಪಿನಲ್ಲಿ ತುಂಬಿಕೊಂಡು ಹೋಗಿ ಸಾರಗೋಡು ಭಾಸ್ಕರ್ ಅವರ ತೋಟದ ಮನೆಯ ಗೇಟ್ ಮುಂದೆ ಜೀಪಿನಿಂದ ಎಳೆದು ಹೊರಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನು ಸಂತ್ರಸ್ತ ಮಹಿಳೆ ಮಾಡಿದ್ದಾರೆ, ಈ ಕುರಿತು ದೂರು ದಾಖಲು ಮಾಡಿರುವ ಅವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾರೆ . ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ...

ಠಾಣೆಯ ಮೆಟ್ಟಿಲೇರಿದ ಇಬ್ಬರು ಯುವತಿಯರು ನಮಗೆ ವಿವಾಹ ಮಾಡಿಸಿಕೊಡಿ ಎಂದು

Image
  ತುಮಕೂರು: ಇಬ್ಬರು ಯುವತಿಯರು ನಮಗೆ ಮದುವೆ ಆಗಿ ಪರಸ್ಪರ ಒಟ್ಟಿಗೆ ಬದುಕಲು ಅವಕಾಶ ಮಾಡಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ‌. ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಇಬ್ಬರೂ ತುಮಕೂರಿನಲ್ಲೇ ವಾಸಿಸುತ್ತಿದ್ದರು. ಕೆಲದಿನಗಳ ಹಿಂದೆ ಕಾಣೆಯಾಗಿದ್ದ ಈ ಯುವತಿಯರು ಬಳಿಕ ತುಮಕೂರಿಗೆ ಆಗಮಿಸಿ ಮದುವೆಯಾಗುವುದಾಗಿ ತೀರ್ಮಾನಿಸಿ ಪೊಲೀಸರಲ್ಲಿ ರಕ್ಷಣೆ ಕೋರಿದ್ದಾರೆ. ಆದರೆ ಇದಕ್ಕೆ ಪೊಲೀಸರು ನಿರಾಕರಿಸಿದ್ದಾರೆ‌. ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆ ಯುವತಿಯರು ಬೆದರಿಕೆ ಹಾಕಿದ್ದಾರೆ‌. ಬಳಿಕ ಇಬ್ಬರನ್ನು ಕೂಡ ಅವರವರ ಪೋಷಕರು ಕರೆದುಕೊಂಡು ಹೋಗಿದ್ದಾರೆ.

ಮೋದಿ ಕ್ಯಾಂಟೀನ್ ತೆರೆದ ಮಾಜಿ ಐಎಎಸ್ ಅಧಿಕಾರಿ, ಕೆ ಶಿವರಾಂ,

Image
 ಬೆಂಗಳೂರು; ಮಾಜಿ ಐಎಎಸ್ ಅಧಿಕಾರಿ ಕೆ.‌ಶಿವರಾಂ ಆನೇಕಲ್‌ನಲ್ಲಿ ಮೋದಿ ಕ್ಯಾಂಟೀನ್ ತೆರೆದು ಸುದ್ದಿಯಾಗಿದ್ದಾರೆ. ಆನೇಕಲ್‌ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ‌ ಆನೇಕಲ್ ನಲ್ಲಿ ಮೋದಿ ಕ್ಯಾಂಟೀನ್ ತೆರೆದಿದ್ದಾರೆ. ತಾಲೂಕು ಕಚೇರಿಯ ಬಳಿಯಲ್ಲಿ ಮೋದಿ ಕ್ಯಾಂಟೀನ್ ತೆರೆದಿರುವ ಕೆ.ಶಿವರಾಂರವರು ಬಡ ಹಾಗೂ ಮಧ್ಯಮ ಕಾರ್ಮಿಕರು, ಜನಸಾಮಾನ್ಯರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ರೈತರು, ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಮೋದಿ ಕ್ಯಾಂಟೀನ್ ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಊಟದ ವ್ಯವಸ್ಥೆಗೆ ಸಜ್ಜಾಗಿದ್ದಾರೆ. ಬೆಳಗ್ಗೆ , ಮಧ್ಯಾಹ್ನ, ರಾತ್ರಿಯಲ್ಲೂ ಊಟದ ವ್ಯವಸ್ಥೆಯನ್ನು ಮಾಡಿದ್ದು ಬೆಳಗ್ಗೆ 10ರೂಪಾಯಿ, ಮಧ್ಯಾಹ್ನ ರಾತ್ರಿ15ರೂಪಾಯಿ, ಕಾಫಿ, ಟೀ 5ರೂಪಾಯಿ ಮೋದಿ ಕ್ಯಾಂಟೀನ್ ನಲ್ಲಿ ಸಿಗಲಿದೆ ಎಂದು ಬೋರ್ಡ್‌ ಹಾಕಲಾಗಿದೆ,

ಎನ್ ಆರ್ ಪುರ, ದೈವಸಿರಿಗಳ ಸಿಂಗಾರದ ನೇಮೋತ್ಸವ,

Image
ಚಿಕ್ಕಮಗಳೂರು:-  N R ಪುರ ತಾಲ್ಲೂಕಿನ ಕರ್ಕೇಶ್ವರ ಗ್ರಾಮದ :-  ಕೈಮರ IBC ಎಸ್ಟೇಟ್ ನಲ್ಲಿ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ಚಾಮುಂಡೇಶ್ವರಿ & ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ  07/05/22 ರಾತ್ರಿ 11:00 ಬಬ್ಬು ಸ್ವಾಮೀ ನೇಮೋತ್ಸವ ಅದೇ ದಿನ ರಾತ್ರಿ  02:00 ಗಂಟೆಗೆ ತನಿಮಾನಿಗ ನೇಮೋತ್ಸವನ್ನು IBC ಎಸ್ಟೇಟ್ ನ ಮಾಲೀಕರು ಹಾಗೂ IBC ಎಸ್ಟೇಟ್ ನ ಕಾರ್ಮಿಕರು  ಹಾಗೂ ಕರ್ಕೇಶ್ವರ ಕೈಮರ ದ ಊರಿನ ಎಲ್ಲಾ ಗ್ರಾಮಸ್ಥರು, ಅತೀ ಹೆಚ್ಚಿನಲ್ಲಿ ಜನ ಪಾಲ್ಗೊಂಡಿದ್ದು ನೇಮೋತ್ಸವನ್ನು ವಿಜೃಂಭಣೆಯಲ್ಲಿ ಆಚರಿದ್ದರು. 08/05/22 ಭಾನುವಾರ ಬೆಳ್ಳಿಗ್ಗೆ : 11:00 ಗಂಟೆಗೆ  ಚಾಮುಂಡೇಶ್ವರಿ ಮತ್ತು ಪರಿವಾರ ದೈವಗಳ ನೇಮೋತ್ಸವ   ಮತ್ತೆ ಅದೇ ದಿನ ಸಂಜೆ 06:00 ಗಂಟೆಗೆ ಜುಮಾದಿ ಬಂಟ ನೇಮೋತ್ಸವ ನಡೆಯಿತು, 🖋ವೀರಮಣಿ,  

ಚಿಕಿತ್ಸೆ ಫಲಿಸದೆ,ಅಪಘಾತಕ್ಕೀಡಾದ ಬೈಕ್ ಸವಾರನ ದುರ್ಮರಣ,

Image
  ಕೊಪ್ಪ:- ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ದುರ್ಮರಣ , ಕೊಪ್ಪ:-ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೊಪ್ಪದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದಿದ್ದಾರೆ . ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಅಚ್ಚರಡಿ ನಿವಾಸಿ ಕೃಪಾಕರ,22 ಮೃತಪಟ್ಟ ಯುವಕ . ಕೃಪಾಕರ ಗುರುವಾರ ರಾತ್ರಿ ನರಸಿಂಹರಾಜಪುರ ಪಟ್ಟಣಕ್ಕೆ ಅಪಾಚೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಪಟ್ಟಣದ ಕುದುರೇಗುಂಡಿ ಸಮೀಪ ಎಮ್ಮೆಯೊಂದು ಅಡ್ಡಬಂದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿತ್ತು . ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಕೃಪಾಕರ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು . ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವುಬದುಕಿನ ಮಧ್ಯೆ ಹೋರಾಡುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ, ಘಟನೆಗೆ ಸಂಬಂಧಿಸಿದ ಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, 🖋ಮಜೀದ್ ಕೊಪ್ಪ 

ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಇನ್ನಿಲ್ಲ...ಕಂಬನಿ ಮಿಡಿದ ಕನ್ನಡ ಚಿತ್ರರಂಗ,

Image
  ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಇನ್ನಿಲ್ಲ...ಕಂಬನಿ ಮಿಡಿದ ಕನ್ನಡ ಚಿತ್ರರಂಗ ,  ಬೆಂಗಳೂರು:- ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಅವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮೋಹನ್ ಅವರ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಣ್ಣೀರು ಮಿಡಿದಿದ್ದಾರೆ.  ನೂರಾರು ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರ ಮಾಡಿರುವ ಮೋಹನ್ ಅವರು ಹಾಸ್ಯ ಪಾತ್ರದಲ್ಲಿ ಹೆಚ್ಚು ಮಿಂಚಿದ್ದರು. ಕೆಜಿಎಫ್ ಚಿತ್ರದಲ್ಲಿ ಕೂಡ ಪಾತ್ರ ಮಾಡಿದ್ದ ಮೋಹನ್ ಅವರು ಜನರ ಮನಸ್ಸನ್ನು ಗೆದ್ದಿದ್ದರು.  ನಿನ್ನೆ ರಾತ್ರಿ ಮೋಹನ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರನ್ನು ತಕ್ಷಣವೇ ಚಿಕ್ಕಬಾಣಾವರ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. 🖊️,ವೇಣು ಗೋಪಾಲ್

ವಾಟ್ಸ್ಆಪ್, ಗ್ರೂಪ್ ಅಡ್ಮಿನ್‌ಗೆ ಇತರರು ಕಳುಹಿಸಿದ ಸಂದೇಶ ಡಿಲಿಟ್ ಮಾಡಲು ಅವಕಾಶ,

Image
  ವಾಟ್ಸ್ಆಪ್, ಗ್ರೂಪ್ ಅಡ್ಮಿನ್‌ಗೆ ಇತರರು ಕಳುಹಿಸಿದ ಸಂದೇಶ ಡಿಲಿಟ್ ಮಾಡಲು ಅವಕಾಶ, ಈ ವೈಶಿಷ್ಟ್ಯವನ್ನ ಕಳೆದ ವರ್ಷ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಬಹಿರಂಗ ಪಡಿಸಲಾಗಿದೆ. ಇನ್ನು ಮೆಸೇಜಿಂಗ್ ಅಪ್ಲಿಕೇಶನ್ ಬೇರೆಯವರು ಕಳುಹಿಸಿದ ಸಂದೇಶ ಇನ್ಯಾರೋ ಅಳಿಸಲು ಕೂಡ ಅವಕಾಶ ನೀಡುವ ಬಗ್ಗೆ ಕೂಡ ಸಿದ್ದತೆ ಮಾಡುತ್ತಿದೆ ಎಂದು ತಿಳಿದು ಬಂದಿದೆ, ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ಹೊಸ ತಂತ್ರಗಾರಿಕೆಯ ಅವಕಾಶವನ್ನು ಬಳಕೆದಾರರಿಗೆ ಪರಿಚಯಿಸಲಿದೆ. ಇದು ಗ್ರೂಪ್ ಅಡ್ಮಿನ್‌ಗೆ ಗುಂಪಿನ ಪ್ರತಿಯೊಬ್ಬ ಸದಸ್ಯನ ಯಾವುದೇ ಸಂದೇಶವನ್ನು ಅಳಿಸಲು ಅನುಮತಿಸುತ್ತದೆ. ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ಮೆಸೇಜಿಂಗ್ ಅಪ್ಲಿಕೇಶನ್ ಹೊಸ ನವೀಕರಣವನ್ನು ಹೊರ ತರಲು ಎಲ್ಲಾ ಸಿದ್ಧತೆ ನಡೆಸುತ್ತಿದೆ ಎಂದು ಡಬ್ಲ್ಯುಎಬೆಟಾಇನ್ಫೋ ವೆಬ್ಸೈಟ್ ವರದಿ ಮಾಡಿದೆ.

ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,,

Image
ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,  ಕತಾರ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಕೆರಳಿಗರು ಸಾವನ್ನಪ್ಪಿದ್ದಾರೆ . ಈದ್ ರಜಾದಿನಗಳನ್ನು ಆಚರಿಸಲು ತೆರಳುತ್ತಿದ್ದಾಗ ಕುಟುಂಬಗಳು ಪ್ರಯಾಣಿಸುತ್ತಿದ್ದ ವಾಹನವು ಮಿಸೈದ್ ನಲ್ಲಿ ಅಪಘಾತಕ್ಕೀಡಾಯಿತು. ಮೃತರಲ್ಲಿ ಇಬ್ಬರು ಮಲಪ್ಪುರಂ ಮೂಲದವರಾಗಿದ್ದು , ಒಬ್ಬರು ಆಲಪ್ಪುಝ ಮೂಲದವರಾಗಿದ್ದಾರೆ . ಮಲಪ್ಪುರಂನ ಮಹಮೂದ್ ಎಂಬವರ ಪುತ್ರ ಎಂ.ಕೆ.ಶಮೀಮ್,35  ಪೊನ್ನನಿ ಮಾರಂಚೇರಿ ಮುಹಮ್ಮದ್ ಅಲಿ ಅವರ ಪುತ್ರ ರಜಾಕ್,31 ಮತ್ತು ಅಲಪ್ಪುಝ ನಿವಾಸಿ ಸಜಿತ್ ಮಂಗತ್ ಸುರೇಂದ್ರನ್,37 ಮೃತ ದುರ್ದೈವಿಗಳು.

ಮಾನವೀಯತೆ ಮೆರೆದ ಸಚಿವ ಸುನಿಲ್ ಕುಮಾರ್,ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ,

Image
  ಮಾನವೀಯತೆ ಮೆರೆದ ಸಚಿವ ಸುನಿಲ್ ಕುಮಾರ್,ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ, ಚಿಕ್ಕಮಗಳೂರು:- ಜಿಲ್ಲೆಯ ಕೊಪ್ಪ ಮೆಸ್ಕಾಂ ಕಟ್ಟಡ , ಹಾಗೂ ಶೃಂಗೇರಿ ಶಾರದಾಮಾತೆಯ ದರ್ಶನ ಹಾಗೂ ಉಭಯ ಶ್ರೀಗಳ ದರ್ಶನ ಪಡೆದು ಶೃಂಗೇರಿಯಿಂದ ಕಾರ್ಕಳದ ಕಡೆಗೆ ತಮ್ಮ ವಾಹನದಲ್ಲಿ ಕುಟುಂಬದ ಸದಸ್ಯರೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯುವಕನೋರ್ವ ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಯಾರೂ ಸಹಾಯಕ್ಕೆ ಮುಂದೆ ಬಾರದ ಈ ಪರಿಸ್ಥಿತಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ಅವರು ಮಾನವೀಯತೆ ಮೆರೆದು ಆತನನ್ನು ತುರ್ತಾಗಿ ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಸಹಕರಿಸಿದ್ದಾರೆ, ಅಪಘಾತಕ್ಕೀಡಾದ ಯುವಕ ಬಾಳೆಹೊನ್ನೂರು ಮೂಲದವನು ಎಂದು ಗುರುತಿಸಲಾಗಿದ್ದು , ಸಚಿವರ ಹಿಂದಿದ್ದ ಬೆಂಗಾವಲು ವಾಹನದಲ್ಲಿ ಆತನನ್ನು ಕಾರ್ಕಳದ ಆಸ್ಪತ್ರೆಗೆ ದಾಖಲು ಮಾಡಿ ಅಗತ್ಯವಾಗಿದ್ದ ಚಿಕಿತ್ಸೆ ದೊರೆಯುವಂತೆ  ಮಾಡಿದ  ಸಚಿವ ಸುನಿಲ್ ಕುಮಾರ್ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. 🖊️ವೀರಮಣಿ,