Posts

Showing posts from March, 2022

ವಾಟ್ಸ್ಆಪ್ ನಲ್ಲಿ ಬದಲಾವಣೆ,ಹೊಸ ಅಪ್‌ಡೇಟ್‌,

Image
   ಗ್ರಾಹಕರು ಬಹುದಿನಗಳ ಕಾಲ ನಿರೀಕ್ಷಿಸಿದ ಅಪ್ ಡೇಟ್ ನೊಂದಿಗೆ ವಾಟ್ಸಪ್ ಬರ್ತಿದೆ. ಸಂದೇಶಗಳನ್ನು ಕಳುಹಿಸುವುದು ಪ್ರಾಥಮಿಕ ಉದ್ದೇಶವಾಗಿದ್ದರೆ ದೊಡ್ಡ ಫೈಲ್‌ಗಳನ್ನು ಕಳುಹಿಸುವ ಬಿಕ್ಕಟ್ಟು ವಾಟ್ಸಾಪ್ ಗೆ ಒಂದು ಅಡ್ಡಿಯಾಗಿತ್ತು.ಆದರೆ ಮೆಟಾ (Meta)ಅಧಿಕಾರಿಗಳು ಈ ಬಿಕ್ಕಟ್ಟಿಗೆ ಪರಿಹಾರವನ್ನು ಹುಡುಕುತ್ತಿದ್ದಾರೆ. ಈಗ ವಾಟ್ಸಾಪ್ ಮೂಲಕ ಕೇವಲ 100 ಎಂಬಿ ಫೈಲ್ ಗಾತ್ರವನ್ನು ಕಳುಹಿಸಲು ಸಾಧ್ಯವಾದರೆ, ಅದನ್ನು 2 GBಗೆ ಹೆಚ್ಚಿಸುವ ಕ್ರಮಗಳು ನಡೆಯುತ್ತಿವೆ. ಅರ್ಜೆಂಟೀನಾದ ಕೆಲವು ಬೀಟಾ ಬಳಕೆದಾರರು ಇಷ್ಟೋತ್ತಿಗಾಗಲೇ ಇದರ ಉಪಯೋಗ ಪಡೆದಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ. Gmail ನಲ್ಲಿ 25MB ವರೆಗೆ ಮಾತ್ರ ಕಳುಹಿಸಬಹುದು ಎಂಬ ವಾಸ್ತವದ ಹೊರತಾಗಿಯೂ, WhatsApp ಎಲ್ಲಾ ಇತರ ಅಪ್ಲಿಕೇಶನ್‌ಗಳನ್ನು ಮೀರಿಸುವ ದೈತ್ಯಾಕಾರದ ಕ್ರಮದೊಂದಿಗೆ ಬರುತ್ತದೆ. ಅತ್ಯಂತ ಜನಪ್ರಿಯ WhatsApp ಅಪ್ಲಿಕೇಶನ್ ಪ್ರಪಂಚದಾದ್ಯಂತ ಸರಾಸರಿ ಎರಡು ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್ ಕೇವಲ 1.3 ಬಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ವೀ-ಚಾಟ್ ಕೇವಲ 1.2 ಬಿಲಿಯನ್ ಬಳಕೆದಾರರನ್ನು ಹೊಂದಿದೆ ವಾಟ್ಸಪ್ ಬಳಕೆಯಲ್ಲಿ ಭಾರತೀಯ ಗ್ರಾಹಕರು ಮುಂಚೂಣಿಯಲ್ಲಿದ್ದಾರೆ. ಭಾರತದಲ್ಲಿ WhatsApp 487 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ನಡೆದುಕೊಂಡು ಹೋಗುವಾಗ ಕರೆಂಟ್ ಶಾಕ್ ಹೊಡೆದು,ಯುವಕ ಮೃತಪಟ್ಟಿದ್ದಾರೆ.

Image
ವರದಿ:-🖋ವೀರಮಣಿ  ಚಿಕ್ಕಮಗಳೂರು:- ಜಿಲ್ಲೆಯ ಕೊಪ್ಪ ತಾಲೂಕಿನ ಕುಂಚೂರು ಗ್ರಾಮದ ಸಚಿನ್ ಎಂಬ ಯುವಕನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ, ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಟ್ರಾನ್ಸಾರ್ಮರ್ ನಲ್ಲಿ ಉಂಟಾದ ಅವಘಡದಿಂದ ಸಚಿನ್ ರವರಿಗೆ ಕರೆಂಟ್ ಶಾಕ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ . ಸಚಿನ್ ಅವರನ್ನು ಕೂಡಲೇ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಚಿನ್ ಕೊನೆಯುಸಿರೆಳೆದಿದ್ದಾರೆ, ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಬಳಿ ಅನೇಕರು ಜಮಾವಣೆಗೊಂಡಿದ್ದರು .  

ಅಪರಿಚಿತನ ಕೈಚಳಕ, ಎಟಿಎಂನಲ್ಲಿ ಹಣ ಡ್ರಾ ಮಾಡಲು ಕಾರ್ಡ್ ನೀಡಿ 19 ಸಾವಿರ ರೂ . ಕಳೆದುಕೊಂಡು ಠಾಣೆ ಮೆಟ್ಟಿಲೇರಿದರು !

Image
 ಕೊಳ್ಳೇಗಾಲ : ಎಟಿಎಂ ಉಪಯೋಗಿಸಲು ಬಾರದಿದ್ದ ವ್ಯಕ್ತಿ ಅಪರಿಚಿತನಲ್ಲಿ ಕಾರ್ಡ್ ಕೊಟ್ಟು ಹಣ ಡ್ರಾ ಮಾಡಲು ಹೇಳಿ ವಂಚನೆಗೊಳಗಾದ ಘಟನೆ ಕೊಳ್ಳೇಗಾಲದದಲ್ಲಿ ನಡೆದಿದೆ . ಕೊಳ್ಳೇಗಾಲದ ಕೆನರಾ ಬ್ಯಾಂಕ್ ಎಟಿಎಂಗೆ 2-3 ದಿನಗಳ ಹಿಂದೆ ಜಾಗೇರಿ ಗ್ರಾಮದ ಶೇಶುರಾಜ್ ಎಂಬವರು ಹಣ ಡ್ರಾ ಮಾಡಲು ಹೋಗಿದ್ದಾರೆ . ಆದರೆ ಅವರಿಗೆ ಎಟಿಎಂ ಬಳಕೆ ಮಾಡಲು ಬಾರದಿದ್ದ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಅಪರಿಚಿತನ ಕೈಗೆ ಕಾರ್ಡ್ ನೀಡಿ 500 ರೂ . ಡ್ರಾ ಮಾಡಿಕೊಡಲು ಹೇಳಿದ್ದಾರೆ . ಅದರಂತೆ ಆತ ಹಣ ಡ್ರಾ ಮಾಡಿ ನೀಡಿದ್ದು , ಇವರು ಪಡೆದು ಕೊಂಡು ಮನೆಗೆ ಬಂದಿದ್ದಾರೆ . ಆದರೆ ಅದಾಗಿ ಒಂದು ದಿನದ ಬಳಿಕ ಶೇಶುರಾಜ್ ಖಾತೆಯಿಂದ 19 ಸಾವಿರ ರೂ . ಡ್ರಾ ಆಗಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿದೆ . ತನ್ನ ಬಳಿಯೇ ಎಟಿಎಂ ಕಾರ್ಡ್ ಇದ್ದರೂ ಹೇಗೆ ಹಣ ಯಾವ ರೀತಿ ಡ್ರಾ ಆಗಿದೆ ಎಂದು ಶೇಶುರಾಜ್‌ಗೆ ಆಶ್ಚರ್ಯವಾಗಿದೆ . ತಕ್ಷಣ ಅವರು ತಮ್ಮ ಎಟಿಎಂ ಕಾರ್ಡ್ ಪರಿಶೀಲನೆ ನಡೆಸಿದಾಗ ಅದು ಬೇರೆ ಎಟಿಎಂ ಕಾರ್ಡ್ ತನ್ನದಲ್ಲ ಎಂದು ಗೊತ್ತಾಗಿದೆ . ಜಾಹೀರಾತು,  ಈ ಹಿಂದೆ ಯಾರ ಕೈಗೆ ಎಟಿಎಂ ಕಾರ್ಡ್ ಕೊಟ್ಟಿದ್ದೆ ಎಂದು ಜ್ಞಾಪಿಸಿದ್ದಾರೆ . ಆಗ ಈ ವಿಚಾರ ತಿಳಿದು ಬಂದಿದೆ . ಈ ಹಿನ್ನೆಲೆಯಲ್ಲಿ ಮಾ .24 ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶೇಶುರಾಜ್ ದೂರು ದಾಖಲಿಸಿದ್ದಾರೆ . 2-3 ದಿನಗಳ ಹಿಂದೆ ಎಟಿಎಂಗೆ ತೆರಳಿ 500 ರೂ . ತೆಗೆದುಕೊಡೋಕೆ ಎಂದು ಅಪರಿಚಿತನಲ್ಲಿ ಕಾರ...

ಕುದ್ರೆಗುಂಡಿಯಲ್ಲಿ ಸೌಹಾರ್ದಯುತ ಉರೂಸ್ ಮಾರ್ಚ್ 28 ರಿಂದ,

Image
ವರದಿ:-🖋ಮಜೀದ್ ಕೊಪ್ಪ   28:03:2022ರಿಂದ ಕುದ್ರೆಗುಂಡಿಯಲ್ಲಿ ಸೌಹಾರ್ದಯುತ ಉರುಸ್ ಸಂದಲ್ , ದಫ್ , ಸರ್ವಧರ್ಮ ಸಮ್ಮೇಳನ:-ಫಕೀರ್ ಅಹ್ಮದ್ ಸುದ್ದಿಗೋಷ್ಠಿಯಲ್ಲಿ ಉರುಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು ಕೊಪ್ಪ . ತಾಲೂಕಿನಕುದುರೆಗುಂಡಿಯ ಹಜ್ರತ್‌ಸಯ್ಯದ್‌ಸಾದತ್ ಷರೀಫುಲ್ಲಔಲಿಯಾ ( ಖ.ಸಿ ) ಮಖಾಂನ 92 ನೇ ವರ್ಷದಸೌಹಾರ್ದ ಉರೂಸ್ ಕಾರ್ಯಕ್ರಮಮಾ .28 ರಿಂದಮೂರು ದಿನಗಳ ಕಾಲ ಜರುಗಲಿದೆ ಎಂದು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಫಕೀರ್ ಅಹ್ಮದ್ ಹೇಳಿದರು . ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , 28 ರಂದು ಮುತ್ತಿನಕೊಪ್ಪದ ಸೈಯ್ಯದ್ ಹುಸೇನ್‌ ಜಮಲುಲೈ ಲಿತಂಬಳ್ ಅವರನೇತೃತ್ವದಲ್ಲಿ ಸ್ವಲಾತ್ ವಾರ್ಷಿಕೋತ್ಸವ , 29 ಕ್ಕೆಕಿನ್ಯ ಕೆ.ಎಸ್.ತಂಬಳ್ ಅಲ್‌ಹೈದ್ರೋಸ್‌ನೇತೃತ್ವದಲ್ಲಿ ಕುತುಬಿಯ್ಯತ್ , ಆ .30 ರಂದು ಬೆಳಗ್ಗೆ 10.30 ಗಂಟೆಗೆ ಕುದ್ರೆಗುಂಡಿ ಬಿಜೆಎಂ ಖತೀಬರಾದ ನೌಫಲ್ ಹಿಮಮಿ ಅಲ್ ಹಾದಿಯವರ ನೇತೃತ್ವದಲ್ಲಿ ಮೌಲಿದ್ ಮಜ್ಜಿಸ್ ನಡೆಯಲಿದೆ . 30 ರಂದು ಸಂಜೆ 7 ರಿಂದ ಮಲೆನಾಡಿನಸುಪ್ರಸಿದ್ಧಕಲಾವಿದರಿಂದದಫ್‌ ಕಾರ್ಯಕ್ರಮ , ಪವಿತ್ರ ಸಂದಲ್‌ಪ್ರಾರ್ಥನೆ ಮತ್ತು ಮೆರವಣಿಗೆ , ರಾತ್ರಿ 8 ಗಂಟೆಗೆ ಅಹ್ಮದ್ ನಂ ಫೈಝಿ ಅವರಿಂದ ಮುಖ್ಯ ಪ್ರಭಾಷಣ , ಧಾರ್ಮಿಕ ಪ್ರವಚನ , ಸರ್ವಧರ್ಮ ಸಮ್ಮೇಳನಗಳು ನಡೆಯಲಿವೆ ಎಂದು ತಿಳಿಸಿದರು . ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ತೀರ್ಥಹಳ್ಳಿಯ ಸಯ್ಯದ್ ಅಬೂಬಕ್...

ಶೃಂಗೇರಿ : ಪಿಕಪ್ ಅಪಘಾತ 12 ಮಂದಿ ಆಸ್ಪತ್ರೆಗೆ ದಾಖಲು,

Image
 ವರದಿ:-ಮಜೀದ್ ಕೊಪ್ಪ  ಶೃಂಗೇರಿ :- ತೋಟದ ಕಾರ್ಮಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪಿಕಪ್ ಅಪಘಾತ ಉಂಟಾದ ಕಾರಣ 12 ಮಂದಿ ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದ ಯಡದಳ್ಳಿಯ ಬಳಿ ಕೆಲಸಗಾರರನ್ನು ತೋಟದ ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪಿಕಪ್ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಗಾಯಗೊಂಡವರಿಗೆ ಶೃಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು  ಗಂಭೀರವಾಗಿ ಗಾಯಗೊಂಡ ಐವರನ್ನು ಬೇರೆ ಆಸ್ಪತ್ರೆಗಳಿಗೆ ರವಾನಿಸಲು ವೈದ್ಯರು ಸೂಚನೆ ನೀಡಿದ್ದಾರೆ.

ಉಡುಪಿ, ಕೋಡಿಯ ಸಮುದ್ರದಲ್ಲಿ ಮತ್ತೇ ನೀಲಿ ಅಲೆಗಳು,

Image
 ಉಡುಪಿ: ಇಲ್ಲಿನ ಸಮೀಪದ ಕೋಡಿ ಸಮುದ್ರದಲ್ಲಿ ನೀಲಿ ಅಲೆಗಳು ತೀರಕ್ಕೆ ಅಪ್ಪಳಿಸಿದ್ದು, ಸ್ಥಳೀಯರು, ಮೀನುಗಾರರು ಅಪರೂಪದ ಈ ವಿದ್ಯಮಾನವನ್ನು ಕಣ್ತುಂಬಿಕೊಂಡಿದ್ದಾರೆ. 2020ರಲ್ಲಿ ಇದೇ ರೀತಿಯ ದೃಶ್ಯ ಕೋಡಿ, ಗಂಗೊಳ್ಳಿ, ಬೀಜಾಡಿ ಪರಿಸರದಲ್ಲಿ ಕಂಡುಬಂದಿತ್ತು. ಗಂಗೊಳ್ಳಿ ಗ್ರಾಮದ ಮಡಿ ಎಂಬಲ್ಲಿ ಹಸಿರು ಅಲೆಗಳ ಅಪ್ಪಳಿಸುವಿಕೆ ನಾಗರಿಕರಲ್ಲಿ ಕುತೂಹಲ ಮೂಡಿಸಿತ್ತು. 2 ವರ್ಷ ನಂತರ ಮತ್ತೆ ಕೋಡಿ ಬೀಚ್‌ನಲ್ಲಿ ನೀಲಿ ಅಲೆಗಳು ಕಂಡುಬಂದಿವೆ. ಕೋಡಿಯಿಂದ ಬೀಜಾಡಿವರೆಗಿನ ಕಡಲತೀರದಲ್ಲಿ ನೀಲಿ ಅಲೆಗಳು ಕಂಡುಬಂದಿವೆ. ಕಡಲಿನ ಅಲೆಗಳು ಕರಾವಳಿಯಲ್ಲಿ ವೈವಿಧ್ಯಮಯ ವರ್ಣಕ್ಕೆ ತಿರುಗುತ್ತಿರುವುದು ಕುತೂಹಲ ಮೂಡಿಸಿರುವ ಜತೆಗೆ ಇದರ ವೈಜ್ಞಾನಿಕ ಅಧ್ಯಯನ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ. 2020ರ ಈಚೆಗೆ ನೀಲಿ, ಹಸಿರು ಮತ್ತು ಬೂದು ವರ್ಣದ ಅಲೆಗಳನ್ನು ಸ್ಥಳೀಯರು ಗುರುತಿಸಿದ್ದಾರೆ. ಕಡಲಲ್ಲಿ ಬೂದು ಬಣ್ಣದ ರಸ್ತೆ ಮಾದರಿ ಕಂಡಿದ್ದಾರೆ. ಕಡಲು ಸೇರುತ್ತಿರುವ ತ್ಯಾಜ್ಯಗಳ ದುಷ್ಪರಿಣಾಮದಿಂದ ಅಲೆಗಳು ಬಣ್ಣ ಕಂಡುಕೊಳ್ಳುತ್ತಿರಬಹುದೆ,? ಅಥವಾ ಬೇರೆ ಯಾವುದಾದರೂ ನಿಖರ ಕಾರಣವಿರಬಹುದೆ ಎಂಬ ಬಗ್ಗೆ ಅಧ್ಯಯನ ನಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ. ಅಲೆಗಳು ನೀಲಿ ವರ್ಣಕ್ಕೆ ತಿರುಗಿರುವುದು ಕೌತುಕ ಸೃಷ್ಟಿಸಿದೆ. ಕೋಡಿಯಿಂದ ಬೀಜಾಡಿವರೆಗಿನ ಬೀಚ್‌ನಲ್ಲಿ ನೀಲಿ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವ ನೋಟ ಮೋಹಕತೆಯ ಜತೆಯಲ್ಲಿ ಗಾಬರಿ ಮೂಡಿಸಿದೆ.

ಬಾಲಕನನ್ನು ಬೆತ್ತಲು ಗೊಳಿಸಿ ಹಲ್ಲೆ ಮಾಡಿದ ಘಟನೆ,ಓರ್ವನ ಬಂಧನ,ವಿಜಯಪುರ,

Image
 ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಸಮೀಪದ ವಡ್ಡೋಡಗಿ ಗ್ರಾಮದಲ್ಲಿ ಕ್ಷುಲ್ಲಕ ವಿಷಯಕ್ಕೆ ಬಾಲಕನನ್ನು ಬೆತ್ತಲುಗೊಳಿಸಿ ಬಣ್ಣ ಸುರಿದು ಚಿತ್ರಹಿಂಸೆ ನೀಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಾಲಕನ ಮೇಲೆ ದೌರ್ಜನ್ಯವೆಸಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಕೂಡಲೇ ಜಿಲ್ಲಾ ಪೋಲಿಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪ್ರಕರಣದ ವಿವರ, ಊರಿನ ಪ್ರಭಾವಿ ಸುಮುದಾಯದ ವ್ಯಕ್ತಿಯೊಬ್ಬರಿಗೆ ಬೈದಿದ್ದಾರೆ ಎಂದು ಆರೋಪಿಸಿ 12 ವರ್ಷದ ಬಾಲಕನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ, ಬೆತ್ತಲೆಗೊಳಿಸಿ, ಗುಪ್ತಾಂಗಕ್ಕೆ ಬಣ್ಣ ಹಾಗೂ ಸುಟ್ಟ ಆಯಿಲ್ ಎರಚಿ, ವಿಕೃತವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಸಮೀಪದ ವಡ್ಡೋಡಗಿ ಗ್ರಾಮದಲ್ಲಿ ಜರುಗಿತ್ತು. ಘಟನೆಯು ಹೋಳಿ ಹಬ್ಬದ ಮರುದಿನ ಮಾರ್ಚ್‌ 18 ರಂದು ನಡೆದಿತ್ತು. ಆದರೆ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಇದರ ನಂತರ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಈ ದೂರನ್ನು ಆಧರಿಸಿ ಆರೋಪಿ ಹಣಮಂತರಾಯನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬಾಲಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ‌ ಜನರು,ವಿಜಯಪುರ

Image
 ವಿಜಯಪುರ:-ಬಾಲಕನನ್ನು ಬೆತ್ತಲೆಗೊಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಜನರು ಆತನನ್ನು ಬೆತ್ತಲೆಗೊಳಿಸಿ, ಮುಖಕ್ಕೆ‌ ಮಸಿ ಬಳಿದು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿ ಬಾಲಕನ‌ ತಾಯಿ ಮಗನ‌ ಮೇಲೆ‌ ಹಲ್ಲೆ ಮಾಡದಂತೆ ಮನವಿ ಮಾಡುವುದು ಕಂಡು ಬಂದಿದೆ. ಘಟನೆ ಬಳಿಕ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಮ್ಮ ವರದಿಗಾರರು, ಹೆಸರು:- ವೀರಮಣಿ,73489 60125 ಜಿಲ್ಲಾವರದಿಗಾರರು,ಚಿಕ್ಕಮಗಳೂರು, ಜಯಪುರ, ಬಾಳೆಹೊನ್ನುರು,ಅಲ್ದೂರ್, ಹೆಸರು:-ಮಜೀದ್ ಕೊಪ್ಪ 91484 88177 ಜಿಲ್ಲಾವರದಿಗಾರರು,ಚಿಕ್ಕಮಗಳೂರು NRಪುರ,ಕೊಪ್ಪ, ಶೃಂಗೇರಿ,

ಚಿಕ್ಕಮಗಳೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ, ಬಸ್ಸ್ ಹಾಗೂ ಆಲ್ಟೋ ಕಾರಿನ ನಡುವೆ ಭೀಕರ ಅಪಘಾತ ; ಸ್ಥಳದಲ್ಲೇ ಐವರ ಸಾವು

Image
  ಸುದ್ದಿ,🖋ವೀರಮಣಿ ಬೆಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ದುರ್ಮರಣವನ್ನಪ್ಪಿದ್ದಾರೆ . ಹಾಸನ ಜಿಲ್ಲೆಯ ಬೇಲೂರು ರಸ್ತೆಯ ಸಂಕೇನಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿಯಾದ ಪರಿಣಾಮ ಕಾರಿನಲ್ಲಿದ್ದ ಐವರೂ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ . ಮೃತಪಟ್ಟವರನ್ನು ಬೇಲೂರು ಮೂಲದವರೆಂದು ಗುರುತಿಸಲಾಗಿದ್ದು ಎಲ್ಲಾ ಮೃತದೇಹಗಳನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ . ಮೃತರನ್ನು ಹಸನ್ ( 20 ) ಅಕ್ಕಲ್ ( 19 ) , ಜಿಲಾನಿ ( 19 ) , ತೋಯಿದ್ ( 18 ) , ಕೈಫ್ ( 18 ) ಎಂದು ಗುರುತಿಸಲಾಗಿದೆ . ಈ ಭೀಕರ ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು , ಪೊಲೀಸರು ವಾಹನ ಸವಾರರು ಕಾರಿನಲ್ಲಿದ್ದವರನ್ನು ಹೊರತೆಗೆಯಲು ಬಹಳಷ್ಟು ಪ್ರಯತ್ನಪಟ್ಟಿದ್ದಾರೆ ಆದರೆ ಕಾರು ಸಂಪೂರ್ಣ ಜಖಂ ಆದ ಕಾರಣ ಕಾರಿನಲ್ಲಿದ್ದವರನ್ನು ಹೊರತೆಗೆಯಲು ಹರಸಾಹಸವನ್ನೇ ಸ್ಥಳೀಯರು ಮಾಡಿದ್ದಾರೆ . ಮೃತಪಟ್ಟವರೆಲ್ಲರೂ ಯುವಕರೇ ಆಗಿದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರಂತೂ ಅತ್ಯಂತ ದುಃಖದಲ್ಲಿದ್ದಾರೆ . ಅಪಘಾತ ಹೊಂದಿದ ಆಲ್ಟೋ ಕಾರ್ ಸಂಪೂರ್ಣ ಜಖಂಗೊಂಡಿದೆ .

ಕೇರಳ, ಮಗ, ಸೊಸೆ, ಮೊಮ್ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ವೃದ್ಧ

Image
ಕುರಿ ಮಾಂಸ ಖರೀದಿಸದಿದ್ದಕ್ಕೆ ಮಗ, ಸೊಸೆ, ಮೊಮ್ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದೆ ಎಂದ ಪಾಪಿ! ಇಡುಕ್ಕಿ:- ಕುರಿ ಮಾಂಸ ಖರೀದಿಸಲಿಲ್ಲ  ಎಂಬ ಕಾರಣಕ್ಕಾಗಿ ತನ್ನ ಮಗ ಸೇರಿ ನಾಲ್ವರನ್ನು  ಹತ್ಯೆ ಮಾಡಿರುವುದಾಗಿ ಕೇರಳದ ಹಮೀದ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.  ನಿನ್ನೆ ಮಗನಿಗೆ ಕುರಿ ಮಾಂಸ  ಖರೀದಿಸಲು ಹೇಳಿ ಕಳುಹಿಸಿದೆ.  ಆದರೆ ತನ್ನ ಮಗ ಅದಕ್ಕೆ ಒಪ್ಪಲಿಲ್ಲ,  ಜೈಲಿನಲ್ಲಿ ಕುರಿ ಮಾಂಸ ಸಿಗುತ್ತದೆ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಹಮೀದ್ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿ ಹಮೀದ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎರ್ನಾಕುಲಂ ರೇಂಜ್ ಡಿಐಜಿ ನೀರಜ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.  ಪ್ರಕರಣದಲ್ಲಿ ಬಲವಾದ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳಿದ್ದು, ಆರೋಪಿಯು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ ಎಂದರು. ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.  ಮೃತರಲ್ಲಿ ಹಮೀದ್ ಅವರ ಪುತ್ರ ಮಹಮ್ಮದ್ ಫೈಸಲ್, ಸೊಸೆ ಶೀಬಾ ಮತ್ತು ಮೊಮ್ಮಕ್ಕಳಾದ ಮೆಹರು ಮತ್ತು ಆಸ್ನಾ ಸೇರಿದ್ದಾರೆ. ಹಮೀದ್ ಅವರ ಈ ಕೃತ್ಯಕ್ಕೆ ಇಡೀ ಊರೇ ಬೆಚ್ಚಿ ಬಿದ್ದಿದೆ. ಮಗನ ಮನೆಗೆ ಬೆಂಕಿ ಹಚ್ಚಿದ ಹಮೀದ್ ಮಗ ಮತ್ತು ಕುಟುಂಬ ತಪ್ಪಿಸಿಕೊಳ್ಳದಂತೆ ಎಲ್ಲ ಪ್ಲಾನ್ ಮಾಡಿದ್ದ. ಈತನ ಪ್ಲಾನ್ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಮೊದಲು ಮನೆಯ ಟ್ಯಾಂಕ್ ನಲ್ಲಿದ್ದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದ...

ಫುಟ್ಬಾಲ್ ಪಂದ್ಯದ ವೇಳೆ ಗ್ಯಾಲರಿ ಕುಸಿತ; 60ಕ್ಕೂ ಅಧಿಕ ಮಂದಿಗೆ ಗಾಯ, ಹಲವರು ಗಂಭೀರ,

Image
  March 20, 2022 ಫುಟ್ಬಾಲ್ ಪಂದ್ಯದ ವೇಳೆ ತಾತ್ಕಾಲಿಕ ಗ್ಯಾಲರಿ ಕುಸಿದು ಬಿದ್ದು 60 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿರುವ ಘಟನೆ ಮಲಪ್ಪುರಂ ಸಮೀಪದ ವಂಡೂರಿನ ಪೂಂಗೊಡೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ವಂಡೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಫುಟ್ಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯದ ವೇಳೆ ತಾತ್ಕಾಲಿಕ ಗ್ಯಾಲರಿ ಕುಸಿದಿದೆ. ಘಟನೆ ನಡೆದ ಸಂದರ್ಭದಲ್ಲಿ ಸುಮಾರು 3 ಸಾವಿರ ಮಂದಿ ಪಂದ್ಯ ವೀಕ್ಷಿಸಲು ಹಾಜರಿದ್ದರು ಎಂದು ತಿಳಿದುಬಂದಿದೆ. ಯುನೈಟೆಡ್ ಎಫ್ ಸಿ ನೆಲ್ಲಿಕುತ್ ಮತ್ತು ರಾಯಲ್ ಟ್ರಾವೆಲ್ ಕೋಝಿಕ್ಕೋಡ್ ನಡುವಿನ ಫೈನಲ್ ಪಂದ್ಯದ ವೇಳೆ ಈ ಅವಘಡ ಸಂಭವಿಸಿದೆ. ಅತಿ ಜನಸಂದಣಿ ಘಟನೆಗೆ ಕಾರಣ ಎನ್ನಲಾಗಿದೆ. ಸಂಘಟಕರು ಇಷ್ಟು ಜನರನ್ನು ನಿರೀಕ್ಷಿಸಿರಲಿಲ್ಲ ಮತ್ತು ಅವರನ್ನು ನಿಯಂತ್ರಿಸಲು ಮೈದಾನದಲ್ಲಿ ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ.ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಜನ‌ ಪಂದ್ಯ ವೀಕ್ಷಣೆಗೆ ಸೇರಿದ್ದರು ಎಂದು ತಿಳಿದುಬಂದಿದೆ.

ಮೂಡಗೆರೆಯಲ್ಲಿ ಪುನೀತ್ ರಾಜಕುಮಾರ ಕಟೌಟ್ ಗೆ ಹಾಲಿನ ಅಭಿಷೇಕ,

Image
 ವರದ:- ವೀರಮಣಿ  ಚಿಕ್ಕಮಗಳೂರು:- ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳಲ ಗ್ರಾಮದಲ್ಲಿ ಗ್ರಾಮದಲ್ಲಿ 20 ಅಡಿ ಎತ್ತರದ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಕಟೌಟ್ ಮಾಡಿ ಪುನೀತ್ ರಾಜಕುಮಾರ್ ರವರ ಅಭಿಮಾನಿಗಳು 10 ಕೆಜಿ ಕೇಕ್ ಕಟ್ ಮಾಡುವ ಮೂಲಕ  ಚಿಕ್ಕ ಚಿಕ್ಕ ಮಕ್ಕಳು ಸ್ಟಾರ್ ಸ್ಟಾರ್  ಪವರ್ ಸ್ಟಾರ್ ಎಂಬ ಘೋಷಣೆಗಳೊಂದಿಗೆ  ಹಾಲಿನ ಅಭಿಷೇಕ ಮಾಡುವುದರ ಮೂಲಕ ಅದ್ದೂರಿಯಾಗಿ ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬವನ್ನು ಆಚರಿಸಿದರು. ಮತ್ತು ಬಂದ ಎಲ್ಲಾ ಅಭಿಮಾನಿಗಳಿಗೂ ಬಿರಿಯಾನಿ ಸೀಡ್ಸ್ ನೀಡಲಾಯಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಂದ್ರಗೌಡ ಮತ್ತು ಇವರ ಪತ್ನಿ ಶ್ವೇತಾ ಆಗಮಿಸಿದ್ದರು ಕಾರ್ಯಕ್ರಮದ ಉಸ್ತುವಾರಿಯನ್ನು ಅಣ್ಣಪ್ಪ ಮಧು ಪ್ರಮೋದ್ ವಸಂತ್ ಮಂಜು S.D.M.C. ಅಧ್ಯಕ್ಷರಾದ ಸುಂದರೇಶ್ ಮತ್ತು ಅಪ್ಪು ಅಭಿಮಾನಿಗಳು ಇದ್ದರು,

ಬಾಳೆಹೊನ್ನುರಿನ ಪೇಟೆಕೆರೆಯ ಅಂಗನವಾಡಿಯಲ್ಲಿ ಪುನಿತ್ ರಾಜಕುಮಾರ್ ಹುಟ್ಟುಹಬ್ಬದ ಆಚರಣೆ,

Image
  ವರದಿ,🖋ವೀರಮಣಿ  ಬಾಳೆಹೊನ್ನೂರು:-ಬಾಳೆಹೊನ್ನುರಿನ ಪೇಟೆಕೆರೆ ಅಂಗನವಾಡಿ ಯಲ್ಲಿ ಪುನೀತ್ ರಾಜಕುಮಾರ್ ರವರ ಜನ್ಮದಿನದ ಪ್ರಯುಕ್ತ ಪುಟಾಣಿ ಮಕ್ಕಳ ಜೊತೆಯಲ್ಲಿ ಅಂಗನವಾಡಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸಡಗರ ಸಂಭ್ರಮ ದಿಂದ ಆಚರಿಸುತ್ತಿದ್ದರು, ಅದರಲ್ಲಿ ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ರಮ್ಯಾ  ಮತ್ತು ಶ್ರೀಮತಿ ವಿಜಯಲಕ್ಷ್ಮಿ ಪ್ರೈಮೇರಿ (health officer) ಹಾಗೂ ಪೇಟೆಕೆರೆ ದೊಡ್ಮನೆ ಕುಟುಂಬದವರು ಎಲ್ಲರೂ ಪಾಲ್ಗೊಂಡಿದ್ದರು..... ಹಾಗೂ ನೆನಪಿನಕಾಣಿಕೆಯಾಗಿ ಅಂಗನವಾಡಿಗೆ ಫ್ಯಾನ್ ಅನ್ನು ವಿತರಿಸಲಾಯಿತು,

ಕೊಪ್ಪ,ಜೆ ಎಂ ಜೆ ಆಟೊ ಚಾಲಕ ಹಾಗೂ ಮಾಲೀಕರಿಂದ ಅಪ್ಪುವಿನ ಹುಟ್ಟುಹಬ್ಬ ಆಚರಣೆ,

Image
ವರದಿ,🖋ಮಜೀದ್ ಸಣ್ಣಕೇರೆ  ಕೊಪ್ಪ:- ಕೊಪ್ಪ ಜೆ ಎಂ ಜೆ ಆಟೋ ಚಾಲಕರು ಹಾಗೂ ಮಾಲೀಕರಿಂದ ಪುನೀತ್ ರಾಜಕುಮಾರ್ (ಅಪ್ಪು) ಅವರ ಹುಟ್ಟುಹಬ್ಬಕ್ಕೆ ಹಾಗೂ ಅವರ ಜೇಮ್ಸ್ ಕೊನೆಯ ಚಿತ್ರಕ್ಕೆ ಆಗಮಿಸಿದ ಪ್ರೇಕ್ಷಕ ಅಭಿಮಾನಿಗಳಿಗೆ ಐಸ್ ಕ್ರೀಮ್ ವಿತರಿಸುವ ಮೂಲಕ ಶುಭ ಹಾರೈಸಿದರು,

ಮನವಿಗೆ ಸ್ಪಂದಿಸಿದ ಇಂಧನ ಸಚಿವರಾದ ಸುನಿಲ್ ಕುಮಾರ್

Image
 ವರದಿ:🖋ವೀರಮಣಿ, ಚಿಕ್ಕಮಗಳೂರು:- ನರಸಿಂಹರಾಜಪುರ ತಾಲ್ಲೂಕ್ ಮೆಲ್ಪಾಲ್ ಗ್ರಾಮ ಪಂಚಾಯತ್ ಕರ್ಕೇಶ್ವರ ಗ್ರಾಮದಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ, ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯೆ ಸುಚಿತ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದರು, ತಕ್ಷಣವೇ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಇಂಧನ ಸಚಿವರಾದ ಸುನಿಲ್ ಕುಮಾರ್ ರವರ ಗಮನಕ್ಕೆ ತಂದಿದ್ದರು, ಪತ್ರಕ್ಕೆ ಸ್ಪಂದನೆ ಮಾಡಿದ ಸಚಿವರು ಸ್ಥಳಕ್ಕೆ JE ಮತ್ತು ಲೈನ್ ಮ್ಯಾನ್ ಕಳುಹಿಸಿ ಸ್ಥಳ ತಪಾಸಣೆ ಮಾಡಿ ಕರ್ಕೇಶ್ವರ ಮತ್ತು ಹುಣಸೆ ಕೊಪ್ಪಕ್ಕೆ ಹೊಸ ಟಿಸಿ ಅಳವಡಿಕೆ ಮತ್ತು ಗುಬ್ಬುರು ಗ್ರಾಮಕ್ಕೆ ಟಿಸಿ ಅಳವಡಿಕೆ ಮಾಡುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನ ಇಂಧನ ಸಚಿವರಿಗೆ ಕೂಡಲೇ ತಲುಪಿಸಿ ಸ್ಪಂದನೆ ಮಾಡುವ ಹಾಗೆ ಮಾಡಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾದ ಡಿ ಎನ್ ಜೀವರಾಜ್, ಬಾಳೆಹೊನ್ನೂರ್ ಹೋಬಳಿ ಬಿಜೆಪಿ ಅಧ್ಯಕ್ಷರಾದ ಪ್ರಭಾಕರ್, ಕಾರ್ಯದರ್ಶಿ ಪ್ರದೀಪ್ ಕಿಚ್ಚೆಬಿ, ಒಬಿಸಿ ಜಿಲ್ಲಾಧ್ಯಕ್ಷರಾದ ಭಾಸ್ಕರ್, ಚುನಾಯಿತ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳು,

ಕೊಪ್ಪ:- ಪೊಲೀಸ್ ಸಿಬ್ಬಂದಿ‌ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಕಿಡಿಗೇಡಿ ,!

Image
 ವರದಿ:-🖋ವೀರಮಣಿ, ಕೊಪ್ಪ: ಮನೆಯವರೊಂದಿಗೆ ಗಲಾಟೆ ಮಾಡಿಕೊಂಡು ತಾನು ವಾಸವಿದ್ದ ಗುಡಿಸಲಿಗೆ ಬೆಂಕಿಯಿಟ್ಟಿದ್ದ ಯುವಕನೊಬ್ಬ ಈ ಸಂಬಂಧ ವಿಚಾರಣೆಗೆಂದು ಬಂದಿದ್ದ ಪೊಲೀಸ್ ಸಿಬ್ಬಂದಿಯ ಮೇಲೆಯೂ ಪೆಟ್ರೋಲ್ ಎರಚಿ ಬೆಂಕಿಯಿಟ್ಟ ಘಟನೆ ನಡೆದಿದೆ, ಕೊಪ್ಪ ತಾಲೂಕಿನ ನುಗ್ಗಿ ಗ್ರಾಪಂ ವ್ಯಾಪ್ತಿಯ ಕೂಗೆ ಗ್ರಾಮದ ಜಂಬೇಕಾಡು ಎಂಬಲ್ಲಿ ಮಂಗಳವಾರ ಘಟನೆ ನಡೆದಿದೆ.ಜಂಬೇಕಾಡು ಗ್ರಾಮದ ದೇವರಾಜ್ (25) ಎಂಬಾತ ಕುಡಿದ ಮತ್ತಿನಲ್ಲಿ ಮಂಗಳವಾರ ತಂದೆ, ತಾಯಿ ಜೊತೆ ಗಲಾಟೆ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ತಾನು ವಾಸವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದ್ದಾನೆ.ಆತನ ಪುಂಡಾಟಗಳಿಂದ ಬೇಸತ್ತ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಪ್ಪ ಠಾಣೆಯ 112 ವಾಹನ ಚಾಲಕ ತ್ರಿಮೂರ್ತಿ ಹಾಗೂ ಪೇದೆ ರಘು ಈ ಸಂಬಂಧ ವಿಚಾರಣೆಗೆಂದು ಸ್ಥಳಕ್ಕೆ ತೆರಳಿದ್ದಾರೆ.ಈ ವೇಳೆ ಅವರೊಂದಿಗೂ ವಾಗ್ವಾದ ನಡೆಸಿದ ಕಿಡಿಗೇಡಿ ಯುವಕ ಪೊಲೀಸ್ ವಾಹನ ಚಾಲಕ ತ್ರಿಮೂರ್ತಿಯವರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ.  ಅದೃಷ್ಟವಶಾತ್ ಪೆಟ್ರೋಲ್ ಕಾಲಿನ ಭಾಗಕ್ಕೆ ಬಿದ್ದಿದ್ದರಿಂದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣ ಚಾಲಕನ ಚಾಲಕನ ರಕ್ಷಣೆಗೆ ಧಾವಿಸಿದ್ದು, ಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.ಪೆಟ್ರೋಲ್...

ಒಂದೇ ದಿನ 81 ಮಂದಿಗೆ ಗಲ್ಲುಶಿಕ್ಷೆ ವಿಧಿಸಿದ ಸೌದಿ ಅರೇಬಿಯಾ

Image
*ರಿಯಾದ್, :* ಸೌದಿ ಅರೆಬಿಯಾದಲ್ಲಿ ಒಂದೇ ದಿನ ಭಯೋತ್ಪಾದನೆಗೆ ಸಂಬಂಧಿಸಿದ ವಿವಿಧ ಅಪರಾಧ ನಡೆಸಿದ 81 ಮಂದಿಯನ್ನು ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ. ಎಲ್ಲರೂ ಹಲವು ಘೋರ ಅಪರಾಧಗಳನ್ನು ಎಸಗಿದ ತಪ್ಪಿತಸ್ಥರೆಂದು ಸಾಬೀತಾಗಿದೆ.   ಐಸಿಸ್, ಅಲ್ ಖೈದಾ, ಯೆಮನ್ ನ ಹೌದಿ ಬಂಡುಗೋರ ಪಡೆ ಹಾಗೂ ಇತರ ಭಯೋತ್ಪಾದಕ ಸಂಘಟನೆಗೆ ಸೇರಿದವರು ಈ ಪಟ್ಟಿಯಲ್ಲಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಸೌದಿ ಪ್ರೆಸ್ ಏಜೆನ್ಸಿ(ಎಸ್ಪಿಎ) ವರದಿ ಮಾಡಿದೆ. ಜತೆಗೆ, ಸರಕಾರದ ಸಿಬ್ಬಂದಿಗಳನ್ನು, ಪ್ರಮುಖ ಆರ್ಥಿಕ ಸಂಸ್ಥೆಗಳನ್ನು ಗುರಿಯಾಗಿಸಿ ದಾಳಿ ಎಸಗಿದವರು, ಕಾನೂನು ಜಾರಿ ಅಧಿಕಾರಿಗಳನ್ನು ಹತ್ಯೆ ಮಾಡಿದವರು, ಪೊಲೀಸ್ ವಾಹನಗಳನ್ನು ಗುರಿಯಾಗಿಸಿ ನೆಲಬಾಂಬ್ಗಳನ್ನು ಇರಿಸಿದವರು ಈ ಪಟ್ಟಿಯಲ್ಲಿದ್ದಾರೆ.  ಅಪಹರಣ, ಚಿತ್ರಹಿಂಸೆ, ಅತ್ಯಾಚಾರ, ದೇಶದೊಳಗೆ ಶಸ್ತ್ರಾಸ್ತ್ರ ಮತ್ತು ಬಾಂಬ್ ಕಳ್ಳಸಾಗಣೆಯ ಅಪರಾಧ ಎಸಗಿದರಿಗೆ ಈ ಶಿಕ್ಷೆ ವಿಧಿಸಲಾಗಿದೆ. 81 ಮಂದಿಯಲ್ಲಿ 73 ಮಂದಿ ಸೌದಿ ಪ್ರಜೆಗಳು, 7 ಮಂದಿ ಯೆಮನ್ ಪ್ರಜೆಗಳು ಮತ್ತು ಓರ್ವ ಸಿರಿಯಾದ ನಾಗರಿಕ ಎಂದು ವರದಿ ಹೇಳಿದೆ.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ನಡೆದ ಬರಡು ರಾಸುಗಳು ಉಚಿತ ಚಿಕಿತ್ಸಾ

Image
ವರದಿ:-🖋 ವೀರಮಣಿ, ಬಸರೀಕಟ್ಟೆ:-  ಗೋವುಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನವನ್ನು ನೀಡಲಾಗಿದೆ , ಗೋವು ತನ್ನ ಸಂಪೂರ್ಣ ಜೀವನವನ್ನು ಸಕಲ ಜೀವರಾಶಿಯ ಉದ್ಧಾರಕ್ಕಾಗಿ ಮುಡಿಪಾಗಿಸಿದೆ ಎಂದು ಬಸರೀಕಟ್ಟೆಯ ಸೋಮೇಶ್ವರಖಾನ್ ಮೈದಾನದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ನಡೆದ ಬರಡು ರಾಸುಗಳು ಉಚಿತ ಚಿಕಿತ್ಸಾ ಶಿಬಿರ ಮತ್ತು ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತಾನಾಡಿದ ಅತ್ತಿಕೊಡಿಗೆ ಗ್ರಾ ಪಂ ಅಧ್ಯಕ್ಷೆ ಅಶ್ವಿನಿ ಕೆ ಮಣಿಕಂಠನ್ ಹೇಳಿದರು  ಮಾನವನು ಹಸುವಿನಿಂದ ಎಲ್ಲಾ ರೀತಿಯ ಉಪಯೋಗವನ್ನು ಪಡೆದುಕೊಳ್ಳುತ್ತಾನೆ  ಹಾಲು , ಸಗಣಿ ಗೊಬ್ಬರದಿಂದ , ಗೋಮೂತ್ರದಿಂದ ರೋಗ ನಿರೋಧಕಗಳು , ಇತ್ತೀಚೆಗೆ ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಕೂಡ ಔಷಧಗಳ ಆವಿಷ್ಕಾರಗಳು ನಡೆಯುತ್ತಿವೆ ಇಂತಹ ಗೋಮಾತೆಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ  , ನಮ್ಮ ನಿತ್ಯ ಜೀವನದಲ್ಲಿ ಗೋವುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಹಾಗೆ ಇತರೆ ಸಾಕು ಪ್ರಾಣಿಗಳು ಕೂಡ ಮನಸ್ಸಿಗೆ ಮುದ ನೀಡುತ್ತವೆ ,ವಿಶೇಷವಾಗಿ ಗ್ರಾಮೀಣ ಮಲೆನಾಡು ಪ್ರದೇಶಗಳಲ್ಲಿ ಸಾಕು ಪ್ರಾಣಿಗಳಿಗೆ ಉತ್ತಮ ಪೌಷ್ಟಿಕಾಹಾರ ನೀಡಬೇಕು ಎಂದರು . ಜಯಪುರದ ಪಶು ವೈದೈರಾದ ಡಾ. ಪವಿತ್ರರವರು ವಿಚಾರ ಗೋಷ್ಠಿಯಲ್ಲಿ ಮಾತಾನಾಡಿ ಮನುಷ್ಯರಿಗೆ ಪ್ರಾಣಿಗಳಿಂದ ಸುಮಾರು 150 ಕ್ಕೂ ಹೆಚ್ಚು ಖಾಯಿಲೆಗಳು ಬರುವ ಪ್ರಾಣಿ ಜನ್ಯ ರೋಗಗಳಿವೆ ಎಂದು ಮಾಹಿತಿ ನೀಡಿದರು...

ಮದ್ರಸಗಳ ಮೇಲಿನ ಸಂಘ ಪರಿವಾರದ ಆರೋಪ ಆಧಾರ ರಹಿತ : ಸಚಿವೆ ಶಶಿಕಲಾ ಜೊಲ್ಲೆ

Image
  ಬೆಂಗಳೂರು : ರಾಜ್ಯದ ಮದ್ರಸಾಗಳಲ್ಲಿ ಧಾರ್ಮಿಕ ಭಯೋತ್ಪಾದನೆ ಮತ್ತು ಮೂಲಭೂತವಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಂಘ ಪರಿವಾರ ಹುಯಿಲೆಬ್ಬಿಸುತ್ತಿರುವ ಹೊತ್ತಿನಲ್ಲಿಯೇ ರಾಜ್ಯದ ಮದ್ರಸಾಗಳಲ್ಲಿ ಯಾವುದೇ ತರದಲ್ಲೂ ಮೂಲಭೂತವಾದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸರಕಾರವೇ ಇದೀಗ ಅಧಿಕೃತವಾಗಿ ಉತ್ತರ ಒದಗಿಸಿದೆ . ಅಷ್ಟೇ ಅಲ್ಲ ಮದ್ರರಸಾ ಶಿಕ್ಷಣದಲ್ಲಿ ಸಣ್ಣ ಮಕ್ಕಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಪಾಠ ಮಾಡುತ್ತಿಲ್ಲ . ಇದು ಅಧಾರರಹಿತ ಆಪಾದನೆಯಾಗಿದೆ ಎಂದು ಮುಜುರಾಯಿ ಮತ್ತು ವಕ್ಸ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ವಿಧಾನಪರಿಷತ್ನಲ್ಲಿ ಉತ್ತರಿಸಿದ್ದಾರೆ . ಮದ್ರಸಾಗಳ ಶಿಕ್ಷಣ ಕುರಿತು ಸಂಘ ಪರಿವಾರದ ಹಿನ್ನೆಲೆಯ ವಿಧಾನಪರಿಷತ್ ಸದಸ್ಯರಾದ ಮುನಿರಾಜುಗೌಡ ಮತ್ತು ಎನ್.ರವಿಕುಮಾರ್ ಈ ಹಿಂದಿನ ಹಲವು ಅಧಿವೇಶನಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದಾರೆ . ಈ ಪ್ರಶ್ನೆಗಳಿಗೆ ಇದೇ ಬಿಜೆಪಿ ಸರಕಾರವು ಮದ್ರಸಾಗಳಲ್ಲಿ ಆಧುನಿಕ ಮತ್ತು ಉನ್ನತ ಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಉತ್ತರಿಸುತ್ತಲೇ ಬಂದಿದೆ . ವಿಧಾನಪರಿಷತ್ನಲ್ಲಿ ಬುಧವಾರ ನಡೆದ ಅಧಿವೇಶನದಲ್ಲಿ ಎನ್.ರವಿಕುಮಾರ್ ಅವರು ಮದ್ರಸಾ ಶಿಕ್ಷಣ ಮತ್ತು ಆಪಾದನೆಗಳ ಬಗ್ಗೆ ಒಟ್ಟು 3 ಪ್ರಶ್ನೆಗಳನ್ನು ಕೇಳಿದ್ದರು . ಇದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹೊರ ದೇಶ ಮತ್ತು ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದಲ್ಲಿ ಬಂದು ಮದ್ರಸಾ ಶಿಕ್ಷಣ ಪ...

ಎಡಗೈಯಲ್ಲಿ ಊಟ ಮಾಡಿದ ವಧು, ಮದುವೆ ಮಂಟಪದಿಂದ ಓಡಿಹೋಗಲು ಯತ್ನಿಸಿದ ವರ

Image
  ಕಾರವಾರ; ವಧು ಎಡಗೈಯಲ್ಲಿ ಊಟ ಮಾಡಿದ ಕಾರಣಕ್ಕೆ ವರ ಈ ಹೆಂಡ್ತಿನೇ ಬೇಡ ಎಂದು ಮದುವೆ ಮಂಟಪದಿಂದ ವರ ಕಾಲ್ಕೀಳಲು ಮುಂದಾದ ಘಟನೆ ದಾಂಡೇಲಿಯ ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ಜರುಗಿದೆ. ಜೊಯಿಡಾದ ಕಬೀರ್ ಕಾತು ನಾಯ್ಕ್ ಹಾಗೂ ಯಲ್ಲಾಪುರದ ವಧುವಿಗೆ ಮೂರು ದಿನಗಳ ಹಿಂದೆ ಮಾತುಕತೆ ನಡೆದು ಮದುವೆ ನಿಶ್ಚಯವಾಗಿತ್ತು. ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು. ಮಾಂಗಲ್ಯ ಧಾರಣೆ ಬಳಿಕ ವಧು-ವರರು ಊಟಕ್ಕೆ ಕುಳಿತ ಸಂದರ್ಭದಲ್ಲಿ ವಧು ಎಡಗೈನಲ್ಲಿ ಊಟ ಮಾಡಿದ್ದಾರೆ. ಇದರಿಂದ ಕೋಪಗೊಂಡ ವರ ಹಾಗೂ ಆತನ ಪೋಷಕರು ಆಕೆಯನ್ನು ಬಿಟ್ಟು ಕಾರನ್ನೇರಿ ಹೊರಡಲು ಮುಂದಾಗಿದ್ದಾರೆ. ತಕ್ಷಣ ವಧುವಿನ ಕಡೆಯವರು ಧಾವಿಸಿ ವರ ಹಾಗೂ ಆತನ ಕುಟುಂಬವನ್ನು ಸ್ಥಳದಿಂದ ತೆರಳದಂತೆ ತಡೆದು ಮಾತುಕತೆ ಮೂಲಕ ವಿಷಯ ಬಗೆ ಹರಿಸಿಕೊಳ್ಳುವಂತೆ ಬೇಡಿಕೊಂಡಿದ್ದಾರೆ. ವರನ ಕಡೆಯವರು ಪರಾರಿಗೆ ಯತ್ನಿಸುತ್ತಿದ್ದಂತೆ ವಧುವಿನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಮಹಿಳಾ ಪೊಲೀಸರು ವರನಿಗೆ ಬುದ್ದಿ ಹೇಳಿ ಇಬ್ಬರನ್ನು ಒಟ್ಟು‌ಮಾಡಿ ಕಳಿಸಿದ್ದಾರೆ‌.

"ಕಲಾ ಶ್ರೇಷ್ಠ " ಪ್ರಶಸ್ತಿಗೆ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಆಯ್ಕೆ

Image
  ಗದಗ. ಜಗದ್ಗುರು ಶ್ರೀ ಶಿವಶಕ್ತಿ ಪೀಠ (ರಿ) ಸುಕ್ಷೇತ್ರ ಇರಕಲ್ ಮಠದ  ಜಾತ್ರಾ ಮಹೋತ್ಸವದ ಅಂಗವಾಗಿ  ಸಾಧಕರಿಗೆ ಕೊಡಮಾಡಲ್ಪಡುವ  2022ನೇ ಸಾಲಿನ "ಕಲಾ ಶ್ರೇಷ್ಠ ಪ್ರಶಸ್ತಿಗೆ  ದೇಶ ವಿದೇಶಗಳಲ್ಲಿ  ನಾಡಿನ ಜನಪದ ಕಂಪನ್ನು ಪಸರಿಸಿದ  'ಜನಪದ ಸಂಜೀವಿನಿ' ಖ್ಯಾತಿಯ  ಬಹುಮುಖ ಪ್ರತಿಭೆ  ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರನ್ನು ಆಯ್ಕೆ ಮಾಡಲಾಗಿದೆ. ಜೀವಮಾನದ ಸಾಧನೆಯನ್ನು ಪರಿಗಣಿಸಿ  ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ಧು   11ನೇ ಮಾರ್ಚ್ 2022ರಂದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ  ಸುಕ್ಷೇತ್ರ ಇರಕಲ್ ಮಠದ  ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ  ಪ್ರಶಸ್ತಿ ಪ್ರದಾನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ-9449629938.9632201971.