Posts

Showing posts from April, 2022

ತಲೆಮರೆಸಿಕೊಂಡಿದ್ದ ಕಲಬುರುಗಿಯ ಬಿ ಜೆ ಪಿ ನಾಯಕಿ ದಿವ್ಯಾ ಹಾಗರಗಿ,ಬಂಧನ,!ಗೃಹ ಸಚಿವರು ಹೇಳಿದ್ದೇನು,?

Image
  ಬೆಂಗಳೂರು,- ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ,  ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಅಧಿಕಾರಿಗಳು ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದಾರೆ. ಕಲಬುರಗಿಯ ಬಿಜೆಪಿ ನಾಯಕಿಯಾಗಿರುವ ದಿವ್ಯಾ ಹಾಗರಗಿ ಅವರ ಒಡೆತನದ ಜ್ಞಾನಜ್ಯೋತಿ ಕಾಲೇಜಿನಲ್ಲಿ ಪಿಎಸ್ಐ ನೇಮಕಾತಿಯ ಪರೀಕ್ಷೆ ವೇಳೆ ಅಕ್ರಮ ನಡೆದಿರುವುದು ಪ್ರಾಥಮಿಕ ತನಿಖೆ ವೇಳೆ ಸಾಬೀತಾಗಿದೆ. ಆದರೆ ಈ ವಿಚಾರ ಹೊರಬರುತ್ತಿದ್ದಂತೆ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದರು. ಅಕ್ರಮ ಹಗರಣ ಬೆಳಕಿಗೆ ಬಂದು ಬರೋಬ್ಬರಿ 18 ದಿನಗಳ ಬಳಿಕ ಆರೋಪಿ ದಿವ್ಯಾ ಹಾಗರಗಿಯ ಬಂಧನವಾಗಿದೆ. ದಿವ್ಯಾರನ್ನು ಬೆಳಗ್ಗೆ 10 ಗಂಟೆಗೆ ಪುಣೆಯಿಂದ ಸಿಐಡಿ ಅಧಿಕಾರಿಗಳು ಕಲಬುರಗಿಗೆ ಕರೆದುಕೊಂಡು ಬರಲಿದ್ದಾರೆ. ಸಿಐಡಿ ಅಧಿಕಾರಿ ಎಸ್ ರಾಘವೇಂದ್ರ ಹೆಗ್ಡೆ ನೇತೃತ್ವದಲ್ಲಿ ದಿವ್ಯಾ ಹಾಗರಗಿ ಬಂಧನವಾಗಿದೆ.

ಅಂದು ಹೋರಾಟಗಾರ,ಇಂದು ಆರೋಪಿ,? ಕಂಬಿಗಳ ಹಿಂದೆ ಆಸಿಫ್ ಆಪತ್ಬಾಂಧವ,

Image
  ಕರಾವಳಿಯಲ್ಲಿ ಒಂದು ಕಾಲದಲ್ಲಿ ಹೊತ್ತಿ‌ ಉರಿದಿತ್ತು ಆಸಿಫ್ ರವರ ಸಮಾಜ ಸೇವೆಯನ್ನು ಕೊಂಡಾಡುವ ಲೇಖನಗಳು, ಸನ್ಮಾನಗಳು, ಬಾಷಣಗಳು, ಹೇಳಿಕೆಗಳು‌ ಮತ್ತು ವರದಿಗಳು. ಮಹಲ್ಲ್ ಮಟ್ಟದಿಂದ ಹಿಡಿದು ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಹೆಸರು ಹಾಗೂ ಸನ್ಮಾನವನ್ನು ಪಡದು ಮನೆ ಮನೆಯಲ್ಲೂ ಕೊಂಡಾಡುವಂತಹಾ ಕಾರ್ಯವೈಖರಿಯಲ್ಲಿ ತೊಡಗಿದ್ದ ಸಮಾಜ ಸೇವಕ ಇಂದು ಕಂಬಿಗಳ ಹಿಂದೆ ಬಂದಿಯಾಗಿದ್ದಾರೆ.. ಕೆಲ ಆಸ್ಪತ್ರೆಗಳ ದಂಧೆಗಳನ್ನು ಬಯೆಲಿಗೆ ತಂದಿದ್ದರು.. ಬಡವರು ನಿದ್ರೆಗೆಟ್ಟು ನೂರಾರು ಮೈಲಿಗಳಿಂದ ಮಂಗಳೂರಿನ ಆಸ್ಪತ್ರೆಗೆ ಬಂದು ತಮ್ಮ ಕುಟುಂಬದ ರೋಗಿಗಳನ್ನು ದಾಖಲು ಮಾಡುವಾಗ ನಿರಾಕರಿಸುವ ಸಿಬ್ಬಂದಿಗಳ ದೂರನ್ನು ಆಸಿಪ್ ರವರ ಗಮನಕ್ಕೆ ತಂದರೆ ರಾತ್ರೋರಾತ್ರಿಯಲ್ಲೇ ಅಲ್ಲಿಗೆ ಬಂದು ಅವರನ್ನು ತರಾಟೆಗೆ ತೆಗೆದು ಪ್ರತಿಭಟಿಸಿ ರೋಗಿಗಳಿಗೆ ದ್ವನಿಯಾಗಿದ್ದರು. 1500 ಕ್ಕೂ ಹೆಚ್ಚು ಅನಾಥ, ಕೊಳೆತ, ಅಪಘಾತದಲ್ಲಿ ಚೆಲ್ಲಾಪಿಲ್ಲಿಯಾದ, ಶವಗಳನ್ನು ಅಂತ್ಯ ಸಂಸ್ಕಾರ ಮಾಡಿ ಸಾಧನೆ ಮೆರೆದ ವ್ಯಕ್ತಿ ಆಸಿಪ್.. ಕಳೆದ ಕೊರೋನ ಸಂದರ್ಭದಲ್ಲಿ ನೂರಾರು ಕೋವಿಡ್ ಪೀಡಿತ ಸತ್ತ ರೋಗಿಗಳ ಶವಗಳನ್ನು ಆರೈಕೆ ಮಾಡಿ ಸಮಾಜದಲ್ಲಿ ಸಮಾಜ ಸೇವಕನಾಗಿ ಗುರುತಿಸಿಕೊಂಡವರು ಆಸಿಪ್.. ರೋಗ ಪೀಡಿತ ಅಸಹಾಯಕ ರೋಗಿಗಳಿಗೆ ಚಿಕಿತ್ಸೆಗಾಗಿ ಲಕ್ಷ ಲಕ್ಷ ರುಪಾಯಿ ಜನರಿಂದ ಸಂಗ್ರಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದರು. ಈ ಸೇವೆ ಸಮಾಜದಲ್ಲಿ ಸುಲಭವಾಗಿ ಮುಂದೂಡುತ್ತಿತ್ತು ಏಕೆಂದರೆ ಅಲ್...

ಕೊರೊನಾ 4ನೇ ಅಲೆ ಆತಂಕ,! ರಸ್ತೆಯಲ್ಲಿ ಉಗುಳಿದ್ರೂ ಬೀಳುತ್ತೆ ದಂಡ ! ರಾಜ್ಯ ಸರ್ಕಾರದ ಮಹತ್ವದ ಆದೇಶ,

Image
 ಬೆಂಗಳೂರು : ಕೊರೊನಾ ನಾಲ್ಕನೇ ಅಲೆ ರಾಜ್ಯಕ್ಕೆ ಕಾಲಿಟ್ಟಿರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ರಾಜ್ಯದಲ್ಲಿ ಮತ್ತೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದ್ದು, ಉಗುಳಿದರೆ ಅದು ದಂಡನಾರ್ಹ ಅಪರಾಧವಾಗುತ್ತದೆ ಎಂದು ಘೋಷಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಕನಿಷ್ಠ 2 ಅಡಿ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿರ್ಬಂಧಿಸಲಾಗಿದೆ. ವಾಹನದಲ್ಲಿ ತೆರಳುವ ವೇಳೆ ಸಾರ್ವಜನಿಕ ಉಗುಳಿದರೆ ಹಾಗೂ ಮಾಸ್ಕ್ ಹಾಕದಿದ್ದರೆ ದಂಡ ಶುಲ್ಕ ವಿಧಿಸಲು ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇತರ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಮಹಿಳಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂವರು ಆಯ್ಕೆ,

Image
   ಚಿಕ್ಕಮಗಳೂರು : ರಾಜ್ಯದಲ್ಲೇ ಪ್ರಪ್ರ ಥಮ ಬಾರಿಗೆ ಮಹಿಳಾ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು , ಅಜ್ಜಂಪುರ ಘಟಕದ ತಾಲೂಕು ಅಧ್ಯಕ್ಷರಾಗಿ ಮುಗುಳಿ ಲಕ್ಷ್ಮೀದೇವಮ್ಮ , ನರಸಿಂಹರಾಜಪುರ ತಾಲೂಕು ಅಧ್ಯಕ್ಷರಾಗಿ ಭಾಗ್ಯ ನಂಜುಂಡಸ್ವಾಮಿ ಹಾಗೂ ಕೊಪ್ಪ ತಾಲೂಕು ಅಧ್ಯಕ್ಷರಾಗಿ ಮೈತ್ರಾ ಗಣೇಶ್ ಆಯ್ಕೆಯಾಗಿದ್ದಾರೆ . ಹೆಣ್ಣು ಸ್ತ್ರೀ ಕುಲದ ಶಕ್ತಿ , ಮಹಿಳಾ ಕಸಾಪ ಘಟಕಗಳನ್ನು ಮುನ್ನಲೆಗೆ ತರುವುದರೊಂದಿಗೆ ಕನ್ನಡ ನಾಡು , ನುಡಿ , ನೆಲ ಮತ್ತು ಜಲಕ್ಕೆ ಸಂಬಂಧಿಸಿದಂತೆ ಎಲ್ಲರೂ ಸೇರಿ ಕೈ ಜೋಡಿಸಿ ಕನ್ನಡದ ರಥವನ್ನು ಎಳೆಯೋಣವೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.

ಅಮ್ಮ ಫೌಂಡೇಶನ್ ವತಿಯಿಂದ,ಉದ್ಯೋಗ ಮೇಳ, ಸಂದರ್ಶನಕ್ಕೆ ಹಾಜರಾಗುವವರಿಗೆ ತರಬೇತಿ,

Image
  ಕೊಪ್ಪ:-ಅಮ್ಮ ಫೌಂಡೇಶನ್ ವತಿಯಿಂದ ಮೇ 8 ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ . ಈ ಹಿನ್ನೆಲೆಯಲ್ಲಿ ಆಸಕ್ತ ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನದಲ್ಲಿ ಹೇಗೆ ಭಾಗವಹಿಸಬೇಕು ಎಂಬ ಬಗ್ಗೆ ಶನಿವಾರ ( ಏ .30 ) ರಂದು ತರಬೇತಿ ನೀಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ . ಅಮ್ಮ ಫೌಂಡೇಶನ್ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ . ಲರ್ನಿಂಗ್ ಆ್ಯಂಡ್ ಡೆವಲಪ್ಟೆಂಟ್ ಎಚ್ ಆರ್‌ಡಿ ಬಿಪಿಎಂ ಇನ್ಫೋಸಿಸ್ ಸಂಸ್ಥೆಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಇಂದು ರಾವ್ ಅವರು ಉದ್ಯೋಗ ಹುಡುಕುತ್ತಿರುವ ಯುವಕ ಯುವತಿಯರಿಗೆ ಅನುಕೂಲವಾಗುವಂತೆ ತರಬೇತಿ ನೀಡಲಿದ್ದಾರೆ . ಕಂಪನಿಗಳಲ್ಲಿ ಸಂದರ್ಶನದಲ್ಲಿ ಭಾಗವಹಿಸುವ ಬಗ್ಗೆ , ಇಂಟರ್ವ್ಯೂ ಸ್ಕಿಲ್ಸ್ , ಉದ್ಯೋಗವಕಾಶವಿರುವ ಸೆಕ್ಟರ್ , ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ . ಕಾರ್ಯಕ್ರಮ ಎಲ್ಲಿ , ಎಷ್ಟು ಗಂಟೆಗೆ ? ದಿನಾಂಕ 30-04-2022 ರ ಶನಿವಾರ ಶೃಂಗೇರಿ ನಗರದಲ್ಲಿ ಬೆಳಿಗ್ಗೆ 10.00 ರಿಂದ 11.30 ರ ವರೆಗೆ , ಕೊಪ್ಪದಲ್ಲಿ ಮಧ್ಯಾಹ್ನ 12.30 ರಿಂದ 2 ರ ವರೆಗೆ ಹಾಗೂ ಎನ್.ಆರ್ .ಪುರದಲ್ಲಿ ಸಂಜೆ 4.00 ರಿಂದ 5.30 ರ ವರಗೆ ನಡೆಯಲಿದೆ . ಎಸ್ಎಸ್ಎಲ್ ಸಿ , ಪಿಯುಸಿ , ಐಐಟಿ , ಡಿಪ್ಲೋಮಾ , ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಶೃಂಗೇರಿ , ಕೊಪ್ಪ ಬಾಳೆಹೊನ್ನೂರು ,...

ಕಾರ್ - ಬೈಕ್ ನಡುವೆ ಭೀಕರ ರಸ್ತೆ ಅಪಘಾತ:-ಶಶಿ ಶೇಕರ್, ಅರ್ಚಕ ಸ್ಥಳದಲ್ಲೇ ಸಾವು,!

Image
  ಶೃಂಗೇರಿ:- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಮ್ಮಾರು ಮಾಣಿಬೈಲು ರಸ್ತೆಯಲ್ಲಿ ಶನಿವಾರ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ . ಶೃಂಗೇರಿ ಕಡೆಯಿಂದ ನೆಮ್ಮಾರಿನತ್ತ ಸಾಗುತ್ತಿದ್ದ ಬೈಕ್‌ಗೆ ಮಂಗಳೂರು ಕಡೆಯಿಂದ ಶೃಂಗೇರಿಗೆ ಬರುತ್ತಿದ್ದ ಕಾರು ಮುಖಾಮುಖಿಯಾಗಿದೆ . ಡಿಕ್ಕಿ ಭೀಕರತೆಗೆ ಕಾರಿನಡಿ ಸಿಲುಕಿದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ . ಹರಿಹರಪುರ ಮಠದಲ್ಲಿ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬೆಂಗಳೂರು ಮೂಲದ ಅರ್ಚಕ ಶಶಿಶೇಖರ್ ( 57 ) ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ . ಈ ಮಾರ್ಗದಲ್ಲಿ ಮರದ ರೆಂಬೆ ಕೊಂಬೆಗಳು ರಸ್ತೆಗೆ ಚಾಚಿಕೊಂಡಿದ್ದು , ಇವುಗಳಿಂದ ತಪ್ಪಿಸಿಕೊಳ್ಳಲು ಅರ್ಚಕ ಬೈಕ್ ಅನ್ನು ಕೊಂಚ ರಸ್ತೆ ನಡುವೆ ತಂದಾಗ ಕ್ಷಣಾರ್ಧದಲ್ಲಿ ಅವಘಡ ಸಂಭವಿಸಿದೆ, ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಸ್ಥಳೀಯರು ಜಮಾಯಿಸಿ ಅರಣ್ಯ ಇಲಾಖೆಯ ರಸ್ತೆಯ ಮೇಲೆಯೇ ಚಾಚಿರುವ ಮರ , ಗಿಡ , ಪೊದೆ ಗಳನ್ನು ತೆರವುಗೊಳಿಸದ ಬೇಜವಾಬ್ದಾರಿ ಅಧಿಕಾರಿಗಳು ಅಮಾಯಕರ ಜೀವ ತೆಗೆಯುತ್ತಿದ್ದಾರೆ ಎಂದು ಕಿಡಿಕಾರಿದರು . ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು . ಶಾಸಕ ಟಿ.ಡಿ.ರಾಜೇಗೌಡ ಅವರು ಉನ್ನತ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು . ಈ ಘಟನೆಗೆ ಇಲಾಖೆಯೇ ನೇರಹೊಣೆ . ಮೃತಪಟ್ಟ ಅರ್ಚಕರ ಕುಟುಂಬ...

ಬೈಕ್ ಸಮೇತ ಕೆರೆಗೆ ಬಿದ್ದ (ಎನ್ ಆರ್ ಪುರ) ಕೈಮರದ ಯುವಕ,ಸ್ಥಳದಲ್ಲೇ ಕೊನೆಯುಸಿರು !

Image
ನರಸಿಂಹರಾಜಪುರ:- ನಿಯಂತ್ರಣ ತಪ್ಪಿದ ಬೈಕ್ ಸಮೇತ ಇಬ್ಬರು ಕೆರೆಗೆ,  ಎನ್ ಆರ್ ಪುರ,(ಕೈಮರದ) ಮೂಲದ ಯುವಕನೊಬ್ಬ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಕುಣಿಮಕ್ಕಿ ಗ್ರಾಮದ ಯುವಕ ಶಿವು (25) ಮೃತಪಟ್ಟ ದುರ್ದೈವಿ. ಶಿವು ನರಸಿಂಹರಾಜಪುರದ ಬಿ.ಎಚ್.ಕೈಮರದ ಬಾಳೆಹೊನ್ನೂರು ರಸ್ತೆಯಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ನಿನ್ನೆ ರಾತ್ರಿ ತಮ್ಮ ಗೆಳೆಯನೊಬ್ಬನ ಜೊತೆಗೆ ಸಿನೆಮಾ ವೀಕ್ಷಿಸಲು ಭದ್ರಾವತಿಯ ಚಿತ್ರಮಂದಿರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ, ಅಲ್ಲಿಂದ ವಾಪಸ್‌ ನರಸಿಂಹರಾಜಪುರ ಕಡೆಗೆ ಬರುತ್ತಿರುವಾಗ ರಾತ್ರಿ 1.30 ರ ಸಮಯದಲ್ಲಿ ಭದ್ರಾವತಿ-ಉಂಬಳೆಬೈಲು ನಡುವಿನ ರಸ್ತೆಯ ಬದಿಯಲ್ಲಿರುವ ಕೆರೆಗೆ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅವರ ಕೂಗಾಟವನ್ನು ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಓಡಿಬಂದು ಇಬ್ಬರನ್ನು ಮೇಲೆತ್ತಿದ್ದಾರೆ. ಆದರೆ ಆ ವೇಳೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶಿವು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಅನ್ನು ಶಿವು ಅವರೇ ಓಡಿಸುತ್ತಿದ್ದರು ಎಂಬ ಪ್ರಥಮ ಮಾಹಿತಿ ಲಭ್ಯವಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಮತ್ತೊಬ್ಬ ಯುವಕನೂ ಆಸ್ವಸ್ಥಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಸಮಯದ ಹಿಂದಷ್ಟೇ ನರಸೀಂಹರಾಜಪುರದಲ್ಲಿ ಗ್ಯಾರೇಜ್‌ ಆರಂಭಿಸಿದ್ದರು. ಶಿವು ಮೃತಪಟ್ಟ ಸುದ್ದಿ ತಿಳಿದು ಕುಟುಂಬ...

ಸ್ನೇಹಿತನ ಶವ ತರಲು ಹೋಗಿ,ಜೊತೆಯಲ್ಲಿ ಶವವಾಗಿ ಬಂದರು,!

Image
 ರಾಯಚೂರು:- ರಾಯಚೂರಿನ ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ನಿನ್ನೆ ಎರಡು ಕಾರುಗಳ‌ ನಡುವೆ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಇವರು ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಗೆಳೆಯನ ಶವವನ್ನು ಊರಿಗೆ ಕೊಂಡೊಯ್ಯುತ್ತಿದ್ದ ವೇಳೆ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಂಬರೀಷ್ (30), ಗೋವಿಂದ್ (35) ದೇವರಾಜ್ (34) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಕಾರು ಚಾಲಕ ಉಸ್ಮಾನ್ ಪಾಷಾ ಹಾಗೂ ಯಲ್ಲಾಲಿಂಗ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಇವರು ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.ಇವರ ಸ್ನೇಹಿತ ಬಸಯ್ಯ ಎಂಬಾತ ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದ. ಆತನ ಶವವವನ್ನು ತೆಗೆದುಕೊಂಡು ನಿನ್ನೆ ಬೆಂಗಳೂರಿನಿಂದ ಹೊರಟು ಯಾದಗಿರಿ ಜಿಲ್ಲೆಯ ವಡಗೇರಾ ಎಂಬಲ್ಲಿಗೆ ಹೊರಟಿದ್ದರು. ಈ ವೇಳೆ ಕಾರುಗಳ ನಡುವೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ‌.

ಕರಿಯರು ಬಿಳಿಯರೆಂಬ ವರ್ಣಭೇದಗಳ ನಿರ್ಮೂಲನೆಗೆ ನಾಂದಿ ಹಾಡಿದ ಪ್ರವಾದಿ (ಸ.ಅ.), ಮುನೀರ್ ಅಹ್ಮದ್ ಸಿದ್ದೀಖಿ.

Image
ಕೊಪ್ಪಳ: ಹದಿನಾಲ್ಕು ನೂರು ವರ್ಷಗಳ ಹಿಂದೆಯೇ ಕರಿಯರು ಬಿಳಿಯರು ಎಂಬ ಭೇದಭಾವ ಮಾಡುವ ಕಾಲವಾಗಿತ್ತು. ಆಗ ಪ್ರವಾದಿ ಮೊಹಮ್ಮದ್ (ಸ.ಅ.) ರವರು ಕರಿಯರಾಗಿದ್ದ ಹಫ್ಷಿ ಜನಾಂಗದ ಹಝ್ರತ್ ಬಿಲಾಲ್ (ರ. ಅ.) ಅವರನ್ನು ಪವಿತ್ರ ಸ್ಥಳವಾದ ಕಾಬಾದ ಮೇಲೆ ನಿಂತು ಆಝಾನ್ ಕರೆ ನೀಡಲು ಹೇಳಿ ಕಾಬಾದ ಮೇಲೆ ಹತ್ತಲು ಸ್ವತಃ ತಮ್ಮ ಭುಜದ ಸಹಾಯ ನೀಡುವ ಮೂಲಕ ಕರಿಯರ ಬಿಳಿಯರ ಮಧ್ಯದಲ್ಲಿದ್ದ ವರ್ಣಭೇದ ನಿರ್ಮೂಲನೆಗೆ ನಾಂದಿಹಾಡಿ ಕೆಳ ಮತ್ತು ಮೇಲ್ಜಾತಿ ಎಂಬ ಭೇದವಿಲ್ಲದೆ ಎಲ್ಲರೂ ಸಮಾನರೆಂಬ ಸಂದೇಶವನ್ನು ನೀಡಿದ್ದಾರೆ ಎಂದು ಮೌಲಾನಾ ಅಬುಲ್ ಕಲಾಂ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಖಿ ಹೇಳಿದರು.       ಕೊಪ್ಪಳ ನಗರದ ಯುಸೂಫಿಯಾ ಮಸೀದಿಯ ಸಭಾಂಗಣದಲ್ಲಿ ದಲಿತಪರ. ಜನಪರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಿಗೆ ಏರ್ಪಡಿಸಿದ್ದ ಸಹ ಭೋಜನ ಸ್ವೀಕರಿಸಿ ರಂಝಾನ್ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಂದುವರಿದು ಮಾತನಾಡಿ ರಂಝಾನ್ ತಿಂಗಳಲ್ಲಿ ವೃತವನ್ನು ಬೆಳಗಿನ ಜಾವ ಐದು ಗಂಟೆಯೊಳಗೆ ಸಹರಿ ಊಟ ಮುಗಿಸಿ ಸಂಜೆ ಆಝಾನ್ ಕರೆಯವರೆಗೂ ಅಲ್ಲಾಹನ ಭಕ್ತಿಯಿಂದ ಯಾವುದೇ ತಿಂಡಿ-ತಿನಿಸುಗಳು ಸೇವಿಸದೆ ಮತ್ತು ಒಂದು ಹನಿ ನೀರು ಸಹ ಕುಡಿಯದೇ. ಸುಳ್ಳು. ಮೋಸ. ವಂಚನೆಮಾಡದೆ. ಯಾರ ಮನಸ್ಸಿಗೂ ನೋಯಿಸದೆ. ಜಗಳವಾಡದೆ. ನಿತ್ಯ ಐದು ಬಾರಿ ನಮಾಝ್ ನಿರ್ವಹಿಸುತ್ತ ಎಲ್ಲ ಜನಾಂಗದ ಜನರೊಂದಿಗೆ ಸೌಜನ್ಯತೆಯಿಂದ ನಡೆದುಕ...

ಶಿವಮೊಗ್ಗ,ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆ,ಡಿಸೆಂಬರ್

Image
  ಮಾಜಿ ಮುಖ್ಯಮಂತ್ರಿ .ಬಿ .ಎಸ್. ಯಡಿಯೂರಪ್ಪನವರಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಣೆ ........  ಶಿವಮೊಗ್ಗ :---ನಿನ್ನೆ ಸಂಜೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ .ಬಿ .ಎಸ್ ಯಡಿಯೂರಪ್ಪನವರು ತಮ್ಮ ಕನಸಿನ ಮಹತ್ವದ ಯೋಜನೆಯಾದ ಶಿವಮೊಗ್ಗ ಸೋಗಾನೆಯಲ್ಲಿ ವಿಶೇಷ ಆಸಕ್ತಿಯಿಂದ  ನಡೆಯುತ್ತಿರುವ  ವಿಮಾನ ನಿಲ್ದಾಣದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು .ಯಡಿಯೂರಪ್ಪನವರ ಜತೆಯಲ್ಲಿ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳು ,ಇಂಜಿನಿಯರ್ ಗಳು ,ಲೋಕಸಭಾ ಸದಸ್ಯ  ಬಿ .ವೈ .ರಾಘವೇಂದ್ರ ಮುಂತಾದವರು ಹಾಗೂ ಕಾಮಗಾರಿಯ ಗುತ್ತಿಗೆದಾರರ ನ್ಯಾಷನಲ್ ಕನ್ ಸ್ಟ್ರಕ್ಷನ್  ಸಂಸ್ಥೆಯ ಇಬ್ರಾಹಿಂ ಶರೀಫ್ ರವರ ಮಗ  ಅನೂಪ್ ಸಾಹಿಲ್  ಕಾಮಗಾರಿ ವೀಕ್ಷಣೆ ಸಮಯದಲ್ಲಿ ದ್ದರು .ಕಾಮಗಾರಿಯು ವ್ಯವಸ್ಥಿತವಾಗಿ ನಿರೀಕ್ಷೆಯ ಮಟ್ಟದಲ್ಲಿ ನಡೆಯುತ್ತಿದೆ ಇದೇ ವರ್ಷ ಡಿಸೆಂಬರ್ ನಲ್ಲಿ ಅಂತಿಮ ಗೊಂಡು ಲೋಕಾರ್ಪಣೆ ಮಾಡುವಂತೆ ಎಲ್ಲ ಸಿದ್ಧತೆ ನಡೆದಿದೆ .ರಾಜ್ಯದಲ್ಲಿ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣ ಬಿಟ್ಟರೆ ಇದು ಎರಡನೆಯ ದೊಡ್ಡಅಂತಾರಾಷ್ಟ್ರೀಯ ಮಟ್ಟದ  ವಿಮಾನಿಲ್ದಾಣವಾಗಲಿದೆ. 🖊️ವರದಿ:-ವೀರಮಣಿ

ಬಸರೀಕಟ್ಟೆಯಲ್ಲಿ ಡಾ,ಅಂಬೇಡ್ಕರ್ ರವರ 131ನೇ ಜನ್ಮ ಜಯಂತಿ ಆಚರಣೆ,

Image
ಡಾ. ಬಿ. ಆರ್. ಅಂಬೇಡ್ಕರ್... ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ... ದೇಶ ಕಂಡ ಮಹಾನ್ ಚೇತನ ಇವರು. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಇಂತಹ ಮೇರು ವ್ಯಕ್ತಿತ್ವದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಸ್ಮರಿಸಿ ಅವರ ಆದರ್ಶಗಳನ್ನು ಪಾಲಿಸುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಬಸರೀಕಟ್ಟೆಯಲ್ಲಿ ನಡೆದ ಡಾ ಅಂಬೇಡ್ಕರ್ ರವರ 131 ನೇ ಜನ್ಮ ಜಯಂತಿಯಲ್ಲಿ ಕೆಡಿಪಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು .  ಛಲದಿಂದ ಭವ್ಯ ಭಾರತದ ಕನಸು ಕಾಣುತ್ತಾ ಕಷ್ಟದ ನಡುವೆಯೂ ಬೆಳೆದ ಅಂಬೇಡ್ಕರ್ ಅವರು ನಮ್ಮ ದೇಶದ ಅಪೂರ್ವ ನಾಯಕರಲ್ಲಿ ಒಬ್ಬರಾದರು, ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು, ಸಂವಿಧಾನ ಶಿಲ್ಪಿಯಾಗಿ ರೂಪುಗೊಂಡಿದ್ದರು. ಇಂತಹ ಮಹಾನ್ ಚೇತನಕ್ಕೆ ರಾಷ್ಟ್ರದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಲಾಯಿತು , ಅವರ ಅಂತಿಮ ಸಂಸ್ಕಾರಕ್ಕೂ ಆಗಿನ ಸರ್ಕಾರ ಕನಿಷ್ಠ ವ್ಯವಸ್ಥೆಯನ್ನು ಮಾಡದೆ ಈ ದೇಶದ ಸಂವಿದಾನ ಶಿಲ್ಪಿಗೆ ಅವಮಾನ ಮಾಡಿತು ದೇಶದ ಸರ್ವೋತ್ತಮ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲು ಅಟಲ್ ಜಿ ಯವರು ಪ್ರಧಾನಿಯಾಗಬೇಕಾಯಿತು .  ಹುಟ್ಟಿನಿಂದ ಸಾವಿನವರೆಗೂ ಹೋರಾಟವನ್ನೇ ಮಾಡಿಕೊಂಡು  ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದವರು ಅಂಬೇಡ್ಕರ್ ಅವ...

ಪೊಲೀಸರು ಮೊಬೈಲ್ ಫೋನ್ ಕಿತ್ತುಕೊಂಡರೆ ಮಾಹಿತಿ ನೀಡಿ: ಕಮಲ್ ಪಂತ್,

Image
ಬೆಂಗಳೂರು:-ಅನುಮತಿ ಇಲ್ಲದೆ ಯಾವ ಪೊಲೀಸ್ ಅಧಿಕಾರಿಯೂ ಮೊಬೈಲ್ ಪರಿಶೀಲನೆ ಮಾಡಬಾರದು. ಅಂಥ ಘಟನೆ ಕಂಡು ಬಂದರೆ ಗಮನಕ್ಕೆ ತನ್ನಿ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.  ಯಾವುದೇ ನೆಪದಲ್ಲಿ ಯಾರೊಬ್ಬರ ಮೊಬೈಲ್ ಫೋನ್ ಅನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಪ್ಪುವುದಿಲ್ಲ. ಅಂತಹ ಯಾವುದೇ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇಂತಹ ಘಟನೆಗಳನ್ನು ಕಂಡರೆ, ತಕ್ಷಣ ಘಟನೆ ಸ್ಥಳ ಹಾಗೂ  ಹೊಯ್ಸಳ ವಾಹನದ  ಸಂಖ್ಯೆಯ ವಿವರಗಳನ್ನು ಗಮನಕ್ಕೆ ತನ್ನಿ. ಅಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ.  ಗಸ್ತು ಪೊಲೀಸರು ವಿನಾಕಾರಣ ಸಾರ್ವಜನಿಕರನ್ನು ತಡೆದು ಮೊಬೈಲ್ ಪರಿಶೀಲನೆ  ನೆಪದಲ್ಲಿ ಮೊಬೈಲ್ ಫೋನ್ ಅನ್ನು ಪಡೆದು ವೈಯಕ್ತಿಕ ವಿಚಾರಗಳನನ್ನು ಕೇಳಿ ತೊಂದರೆ ನೀಡುತ್ತಿದ್ದಾರೆ ಎಂದು ಹಲವರು ಟ್ವಿಟರ್ ನಲ್ಲಿ ದೂರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತರು ಟ್ವಿಟರ್ ನಲ್ಲೇ ಸ್ಪಷ್ಟನೆ ನೀಡಿದ್ದಾರೆ.  .@BlrCityPolice doesn't approve of taking over the mobile phone of anyone under any pretext. We strongly disapprove of any such act. If you come across such an incident, immediately share/dm the below details: (1/2)https://t.co/pF6NSNPi2L — Kamal Pant, IPS. ಪೊಲೀಸ್ ಆಯುಕ್ತರು, ಬೆಂಗಳೂರು ನಗ...

ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್ ಸ್ಫೋಟ,!

Image
 ನವದೆಹಲಿ: ಇಂಡಿಗೋದ ದಿಬ್ರುಗಢ್-ದೆಹಲಿ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್‍ಗೆ ಬೆಂಕಿ ಹತ್ತಿಕೊಂಡಿತ್ತು. ಆದರೆ ಕ್ಯಾಬಿನ್ ಸಿಬ್ಬಂದಿ ಅಗ್ನಿಶಾಮಕ ಸಾಧನದ ಸಹಾಯದಿಂದ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಸಂಭವಿಸಬೇಕಾದ ಭಾರೀ ಅನಾಹುತ ತಪ್ಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ಫ್ಲೈಟ್ 6ಇ 2037 ಅಸ್ಸಾಂನ ದಿಬ್ರುಗಢ್‍ನಿಂದ ದೆಹಲಿಗೆ ತೆರಳುತ್ತಿದ್ದಾಗ ಕ್ಯಾಬಿನ್ ಸಿಬ್ಬಂದಿಯೊಬ್ಬರು ಪ್ರಯಾಣಿಕರ ಫೋನ್‍ನಿಂದ ಬೆಂಕಿಯ ಕಿಡಿ ಮತ್ತು ಹೊಗೆ ಹೊರಗೆ ಹೋಗುತ್ತಿರುವುನ್ನು ಗಮನಿಸಿದ್ದಾರೆ. ನಂತರ ಕ್ಯಾಬಿನ್ ಸಿಬ್ಬಂದಿ ಅಗ್ನಿಶಾಮಕ ಸಾಧನವನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಗುರುವಾರ ಮಧ್ಯಾಹ್ನ 12.45ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಸದ್ಯ ಅದೃಷ್ಟವಶಾತ್ ಘಟನೆ ವೇಳೆ ಯಾವುದೇ ಯಾವುದೇ ಪ್ರಯಾಣಿಕರಿಗೆ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಇಂಡಿಗೋ, ದಿಬ್ರುಗಢ್‍ನಿಂದ ದೆಹಲಿಗೆ 6ಇ 2037 ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಬ್ಯಾಟರಿ ಬಿಸಿಯಾದ ಘಟನೆ ಸಂಭವಿಸಿದೆ. ಎಲ್ಲಾ ಅಪಾಯಕಾರಿ ಘಟನೆಗಳನ್ನು ನಿರ್ವಹಿಸಲು ಸಿಬ್ಬಂದಿಗೆ ತರಬೇತಿ ನೀಡಿದ್ದರಿಂದ, ಅವರು ಪರಿಸ್ಥಿತಿಯನ್ನು ತ್ವರಿತವಾಗಿ ನಿರ್ವಹಿಸಿದ್ದಾ...

ಕೊಪ್ಪ,ಏಪ್ರಿಲ್‍ 18 ರಂದು ನಾರ್ವೆ ಚಂಡೀಗಡಿಕೇಶ್ವರಿ ಅಮ್ಮನವರ ರಥೋತ್ಸವ,

Image
  18 ರಂದು ರಥೋತ್ಸವ ಕೊಪ್ಪ : ನರಸೀಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿ ನಾರ್ವೆ ಚಂಡಿಕೇಶ್ವರಿ ಅಮ್ಮನವರ ರಥೋತ್ಸವ ಏ .18 ರಂದು ನಡೆಯಲಿದೆ ಎಂದು ಚಂಡಿಕೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ತಿಳಿಸಿದ್ದಾರೆ . ಗುರುವಾರ ಮರಿತೊಟ್ಟು ಗ್ರಾಮಕ್ಕೆ ಉತ್ಸವ ಹೋಗುವುದು , ಅಲ್ಲಿ ಅಗ್ನಿಕುಂಡ ಪ್ರವೇಶೋತ್ಸವ ನಡೆಯಿತು . 15 ರಂದು ಕೆಮ್ಮಣ್ಣು ಜಾಗರಣೋತ್ಸವ , ತ್ರಿಶೂಲ ಪೂಜೆ , 16 ರಂದು ಸಂಜೆ ಹೊರೆ ಕಾಣಿಕೆ ಸಮರ್ಪಣೆ , ರಾಶಿ ಪೂಜೆ ಶಿವಸನ್ನಿಧಿಯಲ್ಲಿ ಚನ್ನಕೇಶವ ನಂತರ ದೇವಿ ಉತ್ಸವ ಬೆಳಗೊಳಕ್ಕೆ ಸಂಜೆ ಉತ್ಸವ ನಡೆಯಲಿದೆ ಎಂದು ಹೋಗುವುದು . ಪ್ರಕಟಣೆಯಲ್ಲಿ ತಿಳಿಸಿದ್ದಾರೆ .  ಗಿರಿಜಾಕಲ್ಯಾಣೋತ್ಸವ , ಸನ್ನಿಧಿಯಲ್ಲಿ ದೇವಿ ಉತ್ಸವ ಜರುಗಲಿದೆ . ಏ .17 ರಂದು ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ , 18 ರಂದು ಮಧ್ಯಾಹ್ನ 12.30 ರ ಹೊತ್ತಿಗೆ : ರಥೋತ್ಸವ ನೆರವೇರಲಿದೆ . ಸಂಜೆ 5 ಗಂಟೆಗೆ ದುಗುಳೋತ್ಸವ , 19 ರಂದು ಕುಂಕುಮೋತ್ಸವ , ತುಂಗಾನದಿಯಲ್ಲಿ ಅವಧೃತಸ್ನಾನ , ಸಂಜೆ ಪಲ್ಲಕ್ಕಿ ಉತ್ಸವ ನಡೆಯಲಿದೆ . 20 ರಂದು ಸಂಪ್ರೋಕ್ಷಣೆ , ತುಲಾಭಾರ , ಧ್ವಜಾರೋಹಣ.

ಕಂಟೈನರ್ ಲಾರಿಯಲ್ಲಿದ್ದ 20 ಬೈಕ್ ಬಸ್ಮ

Image
 ನಾಸಿಕ್ : ಜಿತೇಂದ್ರ ಇವಿ ಟೆಕ್ ಸಂಸ್ಥೆಯ 20 ಎಲೆಕ್ನಿಕ್ ಸ್ಕೂಟರ್ ಗಳನ್ನು ಕಂಟೈನರ್ ಗಳಲ್ಲಿ ಸಾಗಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡ ಪರಿಣಾಮ ಎಲ್ಲಾ ಬೈಕ್ ಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ . ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ . ಬೆಂಕಿ ಹೊತ್ತಿರುವುದಕ್ಕೆ ಮೂಲ ಕಾರಣವನ್ನು ತಿಳಿದುಕೊಳ್ಳುವುದಕ್ಕೆ ತನಿಖೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ . ಏ .09 ರಂದು ನಮ್ಮ ಫ್ಯಾಕ್ಟರಿ ಗೇಟ್ ಬಳಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ . ತಕ್ಷಣವೇ ನಮ್ಮ ತಂಡದ ಸಮಯೋಚಿತ ಪ್ರವೇಶದಿಂದ , ಅನಾಹುತವೊಂದು ತಪ್ಪಿದೆ ಎಂದು ಸಂಸ್ಥೆ ತಿಳಿಸಿದೆ . ಬೇಸಿಗೆ ಪ್ರಾರಂಭವಾದಾಗಿನಿಂದಲೂ ಎಲೆಕ್ನಿಕ್ ವಾಹನಗಳು , ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗಿರುವ 6 ನೇ ಘಟನೆ ಇದಾಗಿದೆ ಎಂದು ತಿಳಿದು ಬಂದಿದೆ,

ರಾಜ್ಯ ಮಹಿಳಾ ಟಿ -20 ಕ್ರಿಕೆಟ್ ತಂಡಕ್ಕೆ ಅದಿತಿ ಆರ್, ಆಯ್ಕೆ

Image
 ಶಿವಮೊಗ್ಗ , ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇದ ಕೃಷ್ಣಮೂರ್ತಿ ನೇತೃತ್ವದಲ್ಲಿ ಕರ್ನಾಟಕ ಮಹಿಳಾ ಟಿ -೨೦ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಪ್ರತಿಭಾನ್ವಿತ ಮಹಿಳಾ ಕ್ರಿಕೆಟ್ ಕ್ರೀಡಾಪಟು ಕು || ಅದಿತಿ ರಾಜೇಶ್ ಆಯ್ಕೆಯಾಗಿರುತ್ತಾರೆ . ಇವರು ಏ .೧೮ ರಿಂದ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಹಿರಿಯ ಮಹಿಳಾ ಟಿ -೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ . ಇವರು ಡಿ.ವಿ.ಎಸ್ . ವಿನೋಬನಗರ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು , ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ೮ ವರ್ಷಗಳಿಂದ ಕ.ಕ್ರೀ.ಪಾ.ದ ಕ್ರಿಕೆಟ್ ತರಬೇತುದಾರ ಪಿ.ವಿ.ನಾಗರಾಜ್ ಬಳಿ ತರಬೇತಿ ಪಡೆಯುತ್ತಿದ್ದಾರೆ . ನಗರಕ್ಕೆ ಕೀರ್ತಿ ತಂದ ಕು || ಅದಿತಿಯವರಿಗೆ ಡಿ.ಎಸ್ . ಅರುಣ್ , ಕೆ.ಎಸ್.ಸಿ.ಎ. ವಲಯ ಸಂಚಾಲಕರು , ಯು.ಸ. & ಕ್ರೀ.ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು , ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಅಭಿನಂದಿಸಿದರು,

ಬುದ್ಧಿವಾದ ಹೇಳಿದ ತಂದೆ ತಾಯಿಯ ಕೊಲೆಗೆ ಮಗನಿಂದ ಯತ್ನ,!

Image
 ಉಡುಪಿ:- ಯುವಕನೋರ್ವ ತಂದೆತಾಯಿಯನ್ನೇ ಕೊಲೆಗೆ ಯತ್ನಿಸಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ . ಹಂದಾಡಿ ಗ್ರಾಮದ ಜಯರಾಮ ಶೆಟ್ಟಿ ಹಾಗೂ ಹೆಂಡತಿ ಪೂರ್ಣಿಮಾ ಶೆಟ್ಟಿಯನ್ನುಇವರ ಪುತ್ರ ರಜತ್ ಶೆಟ್ಟಿ ಕೊಲೆಗೆ ಯತ್ನಿಸಿದ್ದಾನೆ . ಅಪ್ಪ- ಅಮ್ಮ ಇಬ್ಬರೂ ಶಿಕ್ಷಕರಾಗಿದ್ದರು . ರಜತ್ ಕೆಲಸ ಮಾಡದೇ ಮನೆಯಲ್ಲಿ ಇದ್ದನು . ತಂದೆತಾಯಿ ಅ ಆತನಿಗೆ ಬುದ್ದಿ ಹೇಳಿ ಕೆಲಸಕ್ಕೆ ಹೋಗುವಂತೆ ಹೇಳಿದ್ದರು . ಇದರಿಂದ ಕೋಪಗೊಂಡಿದ್ದ ರಜತ್ ತಂದೆ- ತಾಯಿ ಕೆಲಸ  ಮುಗಿಸಿ ಮನೆಗೆ ಬರುವಾಗ ಅವಾಚ್ಯವಾಗಿ ಬೈದು ಏಕಾಏಕಿ ತನ್ನ ತಾಯಿಯ ಸೀರೆ , ಕರಿಮಣಿ ತಾಳಿಯನ್ನು ಎಳೆದು ಹಲ್ಲೆ ನಡೆಸಿದ್ದಾನೆ . ಬಳಿಕ ಕತ್ತಿಯನ್ನು ಹಿಡಿದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ . ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಕೇಸ್ ದಾಖಲಾಗಿದೆ .

ಭಿನ್ನಮತೀಯರ ಚರ್ಚೆ,ಬಿ ಜೆ ಪಿ ಯಲ್ಲಿ ಹೊಸ ಬಣ ಉದಯ,?

Image
  ಬಾಳೆಹೊನ್ನೂರು,ಖಾಂಡ್ಯ ಸ್ಥಳೀಯ ಬಿ ಜೆ ಪಿ ಯ ಭಿನ್ನಮತೀಯರ ಸಭೆ ನಡೆಸಲಾಗಿದೆ. ಶೃಂಗೇರಿ ವಿಧಾನ ಸಭ ಕ್ಷೇತ್ರದ ಅತೃಪ್ತ ಬಿ ಜೆ ಪಿ ಯರನ್ನು ಸೇರಿಸಿ,ಮುಂದಿನ ಚುನಾವಣೆಯ ರೂಪುರೇಷಗಳನ್ನು ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ,ಮುಂಬರುವ ವಿಧಾನಸಭೆಯ ಚುನಾವಣೆಗೆ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಚರ್ಚಿಸಲಾಯುತು, ಈ ನಿಟ್ಟಿನಲ್ಲಿ ಈಗಾಗಲೆ ಶೃಂಗೇರಿ,ಕೊಪ್ಪದಲ್ಲೂ ಕೂಡ ಪಕ್ಷದ ಅತೃಪ್ತರನ್ನು ಕರೆದು ಸಭೆ ನಡೆಸಲಾಗಿದೆ,ಶೀಘ್ರದಲ್ಲೇ ಬಿ ಜೆ ಪಿ ಯಲ್ಲಿ ಹೊಸ ಬಣವೊಂದು ಉದಯಸಿಲಿದ್ದು,ರಾಜ್ಯಮಟ್ಟದ ಮುಖಂಡರನ್ನು ಬೇಟಿ ಮಾಡಿ,ಬೇಡಿಕೆಮುಂದಿಡಲಾಗುತ್ತದೆ  ಎಂಬ ಮಾತು ಕೇಳಿಬರುತ್ತಿದೆ,

ಎನ್, ಆರ್, ಪುರ ಹಲ್ಲೆಗೈದು ಯುವಕನ ಬರ್ಬರ ಹತ್ಯೆ,!

Image
  ಎನ್ ಆರ್ ಪುರ:- ತಾಲ್ಲೂಕಿನ ಬಡಗಬೈಲ್ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಇಬ್ಬರು ಯುವಕರ ಮಧ್ಯೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಭೀಕರ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಬಡಗಬೈಲು ಗ್ರಾಮದ ಅಳಲಗೆರೆ ಶಿರೀಶ್ (28) ಎಂಬಾತ ಕೊಲೆಯಾದ ಯುವಕ. ಗುರುವಾರ ರಾತ್ರಿ ಮೆಣಸೂರು ಬಾಬು ಎಂಬಾತನ ಮನೆ ಸಮೀಪದಲ್ಲಿ ಶಿರೀಶ್ ಹಾಗೂ ಬಾಬು ನಡುವೆ ಹಣಕಾಸು ವಿಚಾರದಲ್ಲಿ ಜಗಳ ಏರ್ಪಟ್ಟಿದೆ. ಜಗಳ ವಿಕೋಪಕ್ಕೆ ತಿರುಗಿ ಬಾಬು ಕತ್ತಿಯಿಂದ ಶಿರೀಶ್ ತಲೆಗೆ ಹೊಡೆದಿದ್ದಾನೆ.  ಗಂಭೀರವಾಗಿ ಗಾಯಗೊಂಡ ಶಿರೀಶ್ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ  ಶಿರೀಶ್ ಮೃತಪಟ್ಟಿದ್ದಾರೆ. ಶಿರೀಶ್ ಅವಿವಾಹಿತನಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಾಬುನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ವರದಿ:-🖊️ಮಜೀದ್ ಕೊಪ್ಪ

ಮಗನಿಗೆ ಪೆಟ್ರೋಲ್ ಹಾಕಿ ಸುಟ್ಟ ಅಪ್ಪ,12 ಸಾವಿರ ಹಣ ಕಳೆದುಕೊಂಡಿದ್ದಕ್ಕೆ,!

Image
 ಬೆಂಗಳೂರು : ಬೆಂಗಳೂರಿನ ಆಜಾದ್ ನಗರದಲ್ಲಿ  12 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಕ್ಕೆ  ಸ್ವಂತ ಮಗನನ್ನೇ ಪೆಟ್ರೋಲ್  ಸುರಿದು ಬೆಂಕಿ ಹಚ್ಚಿ ಕೊಂದಿರುವ ಅಮಾನವೀಯ ಘಟನೆ ನಡೆದಿದೆ . ಬೆಂಗಳೂರಿನ ಆಜಾದ್ ನಗರದ ನಿವಾಸಿ ಸುರೇಂದ್ರ ಎಂಬವರೇ ತಮ್ಮ ಮಗ ಅರ್ಪಿತ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ . ಈ ಅಮಾನವೀಯ ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ವಾರ ಅರ್ಪಿತ್ 12 ಸಾವಿರ ರೂಪಾಯಿ ಕಳೆದುಕೊಂಡಿದ್ದಕ್ಕೆ ಸುರೇಂದ್ರ ಅವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ . ಜಾಹೀರಾತು:- ತಕ್ಷಣವೇ ಸ್ಥಳೀಯರು ಅರ್ಪಿತ್‌ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ . ಆದರೆ ಚಿಕಿತ್ಸೆ  ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ,

ಕೊಪ್ಪ,ಸಣ್ಣಕೇರೆ ಶಾಲೆಯಲ್ಲಿ,ಕ್ಷಯರೋಗ ಕಾಯಿಲೆಯ ಬಗ್ಗೆ ಜನ ಜಾಗೃತಿ,

Image
  ಕೊಪ್ಪ:- ತಾಲ್ಲೂಕಿನ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ' ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ'ದ ಅಂಗವಾಗಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳ ಮೂಲಕ ಮಕ್ಕಳು ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.ಕ್ಷಯ ರೋಗ ಚಿಕಿತ್ಸಾ ಆಂದೋಲನದ ಘೋಷಣೆಗಳನ್ನು ಕೂಗಿದರು . ಮನೆಗಳು , ಅಂಗಡಿಗಳಿಗೆ ಭೇಟಿ ನೀಡಿ ಮಾಹಿತಿ ಕರಪತ್ರಗಳನ್ನು ನೀಡಿದರು,  ಹರಂದೂರು ಸಮುದಾಯ ಆರೋಗ್ಯ ಅಧಿಕಾರಿ ಅನಿತಾ ಲವಿನಾ ಡಿಸೋಜ , ಸಮುದಾಯ ಆರೋಗ್ಯ ಅಧಿಕಾರಿ ನಿವೇದಿತಾ , ಸಹಶಿಕ್ಷಕಿ ಭಾರತಿ , ಆಶಾ ಕಾರ್ಯಕರ್ತೆ ಪುಷ್ಪ ಇದ್ದರು . ವರದಿ 🖋 ಮಜೀದ್ ಕೊಪ್ಪ 

ಮಸೀದಿಗಳ‌ ಮೇಲಿನ ಧ್ವನಿವರ್ದಕ ಕಡಿತದ ಬಗ್ಗೆ ಯಾವುದೇ ಅಧೀಕೃತ ಆದೇಶ ಹೊರಡಿಸಿಲ್ಲ- ಸಚಿವೆ ಶಶಿಕಲಾ ಜೊಲ್ಲೆ,

Image
     ವಿಜಯಪುರ:-ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆಗೊಳಿಸುವ ಅಥವಾ ಅವುಗಳನ್ನು ತೆಗೆದು ಹಾಕುವಂತೆ ಇಲಾಖೆಯಿಂದ ಯಾವುದೇ ರೀತಿ ಅಧಿಕೃತ ಆದೇಶವನ್ನು ಹೊರಡಿಸಿಲ್ಲ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ಗ್ರಹಿಕೆಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿಕೊಂಡರು. ಧ್ವನಿವರ್ಧಕಗಳ ಶಬ್ದದ ಪ್ರಮಾಣ ಎಷ್ಟಿರಬೇಕು ಎನ್ನುವುದರ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಸದ್ಯಕ್ಕೆ ಈಗ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದೆ. ಆದರೆ ನಮ್ಮ ಇಲಾಖೆಯಿಂದ ಯಾವುದೇ ರೀತಿ ನೋಟಿಸ್ ಜಾರಿಗೊಳಿಸಿಲ್ಲ ಅಥವಾ ಆದೇಶವನ್ನು ಹೊರಡಿಸಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟವಾಗಿ ಹೇಳಿದರು. ಇದೇ ವೇಳೆ ಆಜಾನ್ ಶಬ್ದವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ನೋಟಿಸ್ ಕೊಟ್ಟಿರುವ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದು‌ ಶಶಿಕಲಾ‌ ಜೊಲ್ಲೆ ತಿಳಿಸಿದ್ದಾರೆ.